ನೂತನ ಹೆಸ್ಕಾಂ ಶಾಖಾ ಕಚೇರಿಗಳನ್ನು ಸ್ಥಾಪಿಸಲು ಸರ್ಕಾರದಿಂದ ಅಧಿಕೃತ ಮಂಜೂರೂ : ವಿಶ್ವಾಸ ವೈದ್ಯ
Official approval from the government to establish new HESCOM branch offices: Vishwas Vaidya
ಲೋಕದರ್ಶನ ವರದಿ
ಯರಗಟ್ಟಿ 19 : ತಾಲ್ಲೂಕಿನ ಸಾರ್ವಜನಿಕರ ಹಾಗೂ ರೈತರ ದಶಕಗಳ ಪ್ರಮುಖ ಬೇಡಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಯರಗಟ್ಟಿ ತಾಲೂಕಿನಲ್ಲಿ ಹೊಸದಾಗಿ ಹೆಸ್ಕಾಂ ಉಪವಿಭಾಗ ಕಚೇರಿ ಹಾಗೂ ತಾಲೂಕಿನ ಮುಖ್ಯ ಗ್ರಾಮಗಳಾದ ಕೆ. ಶಿವಾಪೂರ ಮತ್ತು ಸತ್ತಿಗೇರಿಗಳಲ್ಲಿ ನೂತನ ಹೆಸ್ಕಾಂ ಶಾಖಾ ಕಚೇರಿಗಳನ್ನು ಸ್ಥಾಪಿಸಲು ಸರ್ಕಾರದಿಂದ ಅಧಿಕೃತ ಮಂಜೂರಾತಿ ದೊರೆತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಯರಗಟ್ಟಿ ನೂತನ ತಾಲೂಕಿಗೆ ಘೋಷಣೆಯಾದ ದಿನದಿಂದಲೂ ಇಲ್ಲಿ ಸ್ವತಂತ್ರ ಹೆಸ್ಕಾಂ ಉಪವಿಭಾಗ ಕಚೇರಿ ಇರಲಿಲ್ಲ. ಹೀಗಾಗಿ ಸಾರ್ವಜನಿಕರು ಮತ್ತು ರೈತರು ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಕದ ತಾಲೂಕುಗಳನ್ನು ಅವಲಂಬಿಸಬೇಕಾಗಿತ್ತು. ಈ ಗಂಭೀರ ಸಮಸ್ಯೆಯನ್ನು ಮನಗಂಡು, ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ನಡೆಸಿದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಇಂದು ಈ ಮೂರು ಕಚೇರಿಗಳಿಗೆ ಅಧಿಕೃತ ಮಂಜೂರಾತಿ ಸಿಕ್ಕಿದೆ ಎಂದು ತಿಳಿಸಿದರು.
ರೈತರ ಮತ್ತು ಸಾರ್ವಜನಿಕರ ಹಿತವೇ ನಮ್ಮ ಮೊದಲ ಆದ್ಯತೆ. ಯರಗಟ್ಟಿಯಲ್ಲಿ ಹೊಸ ಉಪವಿಭಾಗ ಹಾಗೂ ಕೆ. ಶಿವಾಪೂರ, ಸತ್ತಿಗೇರಿ ಗ್ರಾಮಗಳಲ್ಲಿ ಶಾಖಾ ಕಚೇರಿಗಳು ಆರಂಭವಾಗುವುದರಿಂದ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ಸಿಗಲಿದೆ. ಲೋಡ್ ಶೆಡ್ಡಿಂಗ್, ಟ್ರಾನ್ಸ್‌ಫಾರ್ಮರ್ ದುರಸ್ತಿ ಹಾಗೂ ಹೊಸ ಕನೆಕ್ಷನ್ ಪಡೆಯಲು ಇನ್ಮುಂದೆ ಸಾರ್ವಜನಿಕರು ದೂರದ ಊರುಗಳಿಗೆ ಅಲೆಯುವುದು ತಪ್ಪಲಿದೆ ಎಂದು ವ್ಯಕ್ತಪಡಿಸಿದರು.
ತಾಲೂಕಿನ ಜನತೆಯ ಬಹುದಿನಗಳ ಕನಸನ್ನು ನನಸು ಮಾಡಲು ಸಹಕರಿಸಿದ ಮುಖ್ಯಮಂತ್ರಿಗಳಿಗೆ, ಇಂಧನ ಸಚಿವರಿಗೆ ಹಾಗೂ ಹೆಸ್ಕಾಂ ಉನ್ನತ ಅಧಿಕಾರಿಗಳಿಗೆ ಅವರು ತಾಲೂಕಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಿಸಿದ್ದಾರೆ.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 