ಕಛೇರಿಗಳಿಗೆ ಅಲೆದಾಟ ತಪ್ಪಿಸಲು ಡಿಜಿಟಲಿಕರಣ ಮಾಡಲಾಗಿದೆ: ಶಾಸಕ ಪಠಾಣ

ಕಛೇರಿಗಳಿಗೆ ಅಲೆದಾಟ ತಪ್ಪಿಸಲು ಡಿಜಿಟಲಿಕರಣ ಮಾಡಲಾಗಿದೆ: ಶಾಸಕ ಪಠಾಣ Offices have been digitized to avoid wandering: MLA Pathana

ಶಿಗ್ಗಾವಿ 29: ಕಛೇರಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಬೇಕು ಎನ್ನುವ ಉದ್ದೇಶದಿಂದ 16 ಲಕ್ಷ ದಾಖಲಾತಿಗಳನ್ನು ಡಿಜಿಟಲಿಕರಣ ಮಾಡಲಾಗಿದೆ ಎಂದು ಶಾಸಕ ಯಾಸೀರಖಾನ ಪಠಾಣ ಅಧಿಕಾರಿಗಳನ್ನು ಹೊಗಳಿದರು.  ಪಟ್ಟಣದ ತಹಶೀಲ್ದಾರರ ಕಛೇರಿಯ ಸಭಾಭವನದಲ್ಲಿ ಹಮ್ಮಿಕೊಂಡ ಶಿಗ್ಗಾವಿ ಸವಣೂರ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪಟ್ಯಾಪ್ ಹಾಗೂ ಭೂ ದಾಖಲಾತಿಗಳ ಗಣಕೀಕೃತ ದಾಖಲೆಗಳನ್ನು ಸಾರ್ವಜನಿಕರಿಗೆ ಈ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೈತರು, ಬಡವರು ಹಾಗೂ ಧೀನ ದಲಿತರು ಸರ್ಕಾರಿ ಕಛೇರಿಗಳಿಗೆ ಹಲವಾರು ಯೋಜನೆಗಳನ್ನು ಮಾಡಲಾಗಿ ಸಾರ್ವಜನಿಕರ ಅಲೆದಾಟ ತಪ್ಪಿಸುವುದೇ ನಮ್ಮ ಮುಖ್ಯ ಉದ್ದೇಶ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ.  

ಕಂದಾಯ, ಪುರಸಭೆ ಹಾಗೂ ತಾಲೂಕ ಪಂಚಾಯತ ಈ ಮೂರುಇಲಾಖೆಗಳು ಸಮನ್ವಯದಿಂದ ಸಾರ್ವಜನಿಕರಿಗೆ ಸ್ಪಂದಿಸಿದರೆ ಸಮಸ್ಯೆಗಳು ಉದ್ಭವ ಆಗುವದಿಲ್ಲ ಎಂದರು. ಕ್ಷೇತ್ರದಲ್ಲಿ 25000 ಜನರಿಗೆ ಮನೆ ಪಟ್ಟಾ ಇಲ್ಲ ಇಂತಹ 50 ಗ್ರಾಮಗಳನ್ನು ಗುರುತಿಸಿದ್ದೆವೆ. ವೃದ್ದಾಪ್ಯ ವೇತನ, ಪೌತಿ ಖಾತೆ. ರೈತರ ಹೊಲಗಳಿಗೆ ದಾರಿ ಸೇರಿದಂತೆ ಸಾಮಾನ್ಯ ಜನತೆಯು ಮೂಲಭೂತ ಸೌಲಭ್ಯಗಳಿಂದ ವಂಚಿತರಗಬಾರದು. ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ ಅವರ ಋಣ ತಿರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆನೆ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ ಇದೆ, ಶಾಸಕಶ್ರೀನಿವಾಸ ಮಾನೆಯವರೇ ನನಗೆ ಪ್ರೇರಣೆ, ಅಧಿಕಾರಿಗಳು ರೈತರಿಗೆ ಹಾಗೂ ಬಡವರಿಗೆ ತೊಂದರೆ ಕೊಡಬಾರದು.  

ಜನರ ಕೆಲಸ ಮಾಡದ ಅಧಿಕಾರಿಗಳಿಗೆ ನಮ್ಮ ಕ್ಷೇತ್ರದಲ್ಲಿ ಅವಕಾಶವಿಲ್ಲ ಎಂದು ಎಚ್ಚರಿಸಿದರು.ತಹಶೀಲ್ದಾರ ರವಿ ಕೊರವರ ಪ್ರಾಸ್ಥಾವಿಕವಾಗಿ ಮಾತನಾಡಿ ಕಂದಾಯ ಇಲಾಖೆಯ ಪ್ರಗತಿಯನ್ನು ವಿವರಿಸಿ ಫಿನಿಕ್ಸ ಶಾಲೆ ಪಕ್ಕದ ಕಂದಾಯ ಜಮೀನಿನಲ್ಲಿ ಕಂದಾಯ ಅಧಿಕಾರಿಗಳಿಗೆ ಮನೆ ಕಟ್ಟಿಕೊಡಲು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಶಿಗ್ಗಾವಿ 15 ಹಾಗೂ ಸವಣೂರಿನ 5 ಗ್ರಾಮ ಆಡಳಿತಾಧಿಕಾರಿಗಳಿಗೆ ಶಾಸಕ ಪಠಾಣ ಅವರು ಲ್ಯಾಪ್‌ಟಾಪ್ ವಿತರಿಸಿದರು. ಈ ಸಂದರ್ಭದಲ್ಲಿ ಸವಣೂರ ತಹಶೀಲ್ದಾರ ಭರತರಾಜ, ಮುಖಂಡರಾದ ಗುಡ್ಡಪ್ಪ ಜಲದಿ, ಎಸ್ ಎಫ್ ಮಣಕಟ್ಟಿ, ಗೌಸಖಾನ ಮುನಶಿ, ವಸಂತಾ ಬಾಗೂರ, ಲಕ್ಷ್ಮಿ ಮಾಳಗಿಮನಿ, ಎಮ್ ಜಿ ಮುಲ್ಲಾ, ಪರಶುರಾಮ ಜೆಟ್ಟಪ್ಪನವರ, ಅಜೀಜ್, ಶಂಭು ಆಜೂರ, ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಅಧಿಕಾರಿಗಳು ಸಿಬ್ಬಂದಿಗಳು ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.