ಟಾಪ್ ಇನ್ನ ಟೌನ್ ಮಂಗಲ ಭವನದಲ್ಲಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಶಕ್ತಿ ಸಮಾವೇಶ ಕಾರ್ಯಕ್ರಮ

ಟಾಪ್ ಇನ್ನ ಟೌನ್ ಮಂಗಲ ಭವನದಲ್ಲಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಶಕ್ತಿ ಸಮಾವೇಶ ಕಾರ್ಯಕ್ರಮ  Office bearers' swearing-in ceremony and power gathering program at Top Inn Town Mangala Bhavan

ಟಾಪ್ ಇನ್ನ ಟೌನ್ ಮಂಗಲ ಭವನದಲ್ಲಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಶಕ್ತಿ ಸಮಾವೇಶ ಕಾರ್ಯಕ್ರಮ  

ಮುದ್ದೇಬಿಹಾಳ 29:  ಇದೇ ದಿ. 30 ರಂದು ಮುಂಜಾನೆ 11 ಗಂಟೆಗೆ ಪಟ್ಟಣದ ಹುಡ್ಕೋ ಬಡಾವಣೆಯ ಹತ್ತಿರು ಟಾಪ್ ಇನ್ನ ಟೌನ್ ಮಂಗಲ ಭವನದಲ್ಲಿ ಕಾಂಗ್ರೇಸ್ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಶಕ್ತಿ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರಣ ಮತಕ್ಷೇತ್ರದ ಎಲ್ಲ ಪದಾಧಿಕಾರಿಗಳು ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಶ್ವಿಗೊಳಿಸಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಕರೆ ನೀಡಿದರು. 

ಪಟ್ಟಣದ ಶಾಸಕ ಸಿ ಎಸ್ ನಾಡಗೌಡ (ಅಪ್ಪಾಜಿ) ಯವರ ಗ್ರಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿಯವರು ಆಗಮಿಸಲಿದ್ದಾರೆ ಅವರಿಂದ ನೂತನ ಮಹಿಳಾ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುವುದು. ಈ ಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯವರ ನೇತೃತ್ವದ ಸರಕಾರ ಮಹಿಳೆಯರ ಪರವಾಗಿ ಧ್ವನಿ ಎತ್ತುವ ಮೂಲಕ ಗ್ರಹಲಕ್ಷ್ಮಿ, ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವಂತೆ ಮಾಡಿದ್ದಲ್ಲದೇ ಮಹಿಳೆಯರಲ್ಲಿ ಆತ್ಮಬಲ ತುಂಬಿದ್ದಾರೆ. 

ಅದರಂತೆ ಮತಕ್ಷೇತ್ರದಲ್ಲಿಯೂ ಕೂಡ ನಮ್ಮ ತಂದೆಯವರಾದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯರಾದ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಜತೆಗೆ ಸರಕಾರದ ಯೋಜನೆಗಳನ್ನು ಜನರಲ್ಲಿ ತಲುಪಿಸುವಂತೆ ನೋಡಿಕೊಳ್ಳಲಾಗಿದೆ. ಇದಕ್ಕೆ ಪಕ್ಷದ ಎಲ್ಲ ಮುಖಂಡರು, ವಿವಿಧ ಪದಾಧಿಕಾರಿಗಳು ಕಾರ್ಯಕರ್ತರು ಶ್ರಮವಹಿಸಿ ಕೆಲಸ ನಿರ್ವಸುತ್ತಿದ್ದಾರೆ. ಆದರೂ ಸಹ  ಸರಕಾರಕ್ಕೆ ಮತ್ತು ಮುಖ್ಯಮಂತ್ರಿಗಳ ಇನ್ನಷ್ಟು ಬಲ ತುಂಬಲು ಪ್ರತಿ ಮನೆ ಮನೆಗೂ ನಮ್ಮ ಪಂಚ ಗ್ಯಾರಂಟಿ ಯೋಜನೆಗಳ ಹಾಗೂ ಮತಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಪೂಕರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಕಾರಣ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿಯವರು ಮತಕ್ಷೇತ್ರದಲ್ಲಿ ಮಹಿಳೆಯರ ಕುಂದುಕೊರೆತೆ ಆಲಿಸಿ ಸಮಸ್ಯೆ ಪರಿಹಿಸುವ ಕೆಲಸವೂ ಕೂಡ ನಡೆಯಲಿದೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. 

ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಶಳ್ಳಗಿ, ಅಕ್ಷತಾ ಚಲವಾದಿ, ಸುಜಾತಾ ಶಿಂಧೇ, ನೀಲಮ್ಮ ಚಲವಾದಿ, ಕಮಲಾ ಭಜಂತ್ರಿ, ಮಾಬೂಬಿ ಬಾಗವಾನ, ಮಮತಾಜ ಮುಲ್ಲಾ, ಲಲೀತಾ ಮುರಾಳ ಹಲವರು ಇದ್ದರು.