ಕಾಳಿ ನದಿಯ ಸುಫಾ ಜಲಾಶಯಕ್ಕೆ ಬಾಗೀನ ಅರ್ಪಣೆ

ಕಾಳಿ ನದಿಯ ಸುಫಾ ಜಲಾಶಯಕ್ಕೆ ಬಾಗೀನ ಅರ್ಪಣೆ Offering of a bagina to the Sufa reservoir on the Kali river

ಕಾರವಾರ 01: ಕಾಳಿ ನದಿಯ ಮೊದಲ ಜಲಾಶಯ ಸುಫಾಕ್ಕೆ ರಾಜ್ಯ ಆಡಳಿತ ಆಯೋಗದ ಅಧ್ಯಕ್ಷ ದೇಶಪಾಂಡೆ ಸೋಮವಾರ ಬಾಗೀನ ಅರ್ಪಣೆ, ಮಾಡಿದರು.  

ಬಾಗೀನ ‍್ಿ ಅರ್ಪಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸುಫಾ ಜಲಾಶಯ ನಾಡಿನ ರೈತರಿಗೆ, ಕೈಗಾರಿಕೆಗಳಿಗೆ ವರದಾನವಾಗಿದೆ. ದಿನಕ್ಕೆ ಲಕ್ಷಾಂತರ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿ, ನಾಡಿಗೆ ಬೆಳಕು ನೀಡುತ್ತಿದೆ ಎಂದರು. ಕಾಳಿ ನದಿಗೆ ಪೂಜೆ ಸಲ್ಲಿಸಿ, ಬಾಗಿನ ಅರ​‍್ಿಸಿದ್ದು ಸಂತೋಷ ತಂದಿದೆ ಎಂದರು. ಜಲಾಶಯದಲ್ಲಿ 127 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯ 147 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇದೆ ಎಂದು ಆರ್‌.ವಿ.ದೇಶಪಾಂಡೆ ಹೇಳಿದರು. ಗರಿಷ್ಟ ಮಟ್ಟ 564 ಮೀಟರ್ ಇದೆ . ಇವತ್ತಿನ ನೀರಿನ ಮಟ್ಟ 560 ಮೀಟರ್ ತಲುಪಿದೆ .ಶೇ 86 ರಷ್ಟು ಭರ್ತಿಯಾಗಿದೆ. ಇನ್ನು ನಾಲ್ಕು ಮೀಟರ್ ಭರ್ತಿಯಾದ್ರೆ ಜಲಾಶಯದಿಂದ ನೀರು ಕಾಳಿ ನದಿಗೆ ಬಿಡಲಾಗುವುದು ಎಂದರು. ರಾಜ್ಯದ ಎರಡನೇ ಅತಿ ಎತ್ತರದ ಸೂಪಾ ಜಲಾಶಯ ಎಂದ ಅವರು ಜಲಾಶಯ ನಾನು ಇದ್ದೇನೆ. ಸುಫಾ ಜನರು ನಿರಾಶ್ರಿತರಾಗಿದ್ದಾರೆ. ಬಹಳ ತ್ಯಾಗ ಮಾಡಿದ್ದಾರೆ. ಅವರ ತ್ಯಾಗದ ಬಲವಾಗಿ ಜನರಿಗೆ ವಿದ್ಯುತ್ ದೊತೆಯುತ್ತದೆ. ಕೈಗಾರಿಕೆ ಬೆಳದಿವೆ. ರೈತರಿಗೆ ವರದಾನವಾಗಿದೆ ಎಂದರು. ಸುಪಾ ಅಣೆಕಟ್ಟು ಸಿವಿಲ್ ವಿಭಾಗದ ಮುಖ್ಯಸ್ಥ ರಾಜಶೇಖರ . ಎಂ . ಮಾತನಾಡಿ ಸುಫಾ ಜಲಾಶಯದಲ್ಲಿ ಆಶಾದಾಯಕವಾದ ನೀರು ಸಂಗ್ರಹವಿದೆ. ವಿದ್ಯುತ್ ಉತ್ಪಾದನೆಗೆ ಕೊರತೆ ಇಲ್ಲ ಎಂದರು. ನಮ್ಮ ಅಣೆಕಟ್ಟು ಪಶ್ಚಿಮ ಘಟ್ಟಗಳಲ್ಲಿ ಇರುವ ಕಾರಣ ಅತೀ ಕಡಿಮೆ ಪ್ರಮಾಣದ ಮಣ್ಣು ( ಹೂಳು) ಅಣೆಕಟ್ಟು ಜಲ ಸಂಗ್ರಹ ಏರಿಯಾದಲ್ಲಿದೆ. ಇದು ತುಂಗಭದ್ರಾ, ಕೃಷ್ಣಾ ನದಿ ಅಣೆಕಟ್ಟು ತರಹ ಅಲ್ಲ. ಇಲ್ಲಿ ನದಿ ಪಕ್ಕದ ಅಭಯಾರಣ್ಯ ಮಣ್ಣಿನಸವಕಳಿಯನ್ನು ತಡೆಯುತ್ತದೆ. ಹಾಗಾಗಿ ಸುಫಾ, ಕೊಡಸಳ್ಳಿ, ಕದ್ರಾ ಅಣೆಕಟ್ಟುಗಳು ಹೂಳಿನ ಸಮಸ್ಯೆ ಯಿಂದ ದೂರ ಇವೆ ಎಂದರು.  

ಕೊಡಸಳ್ಳಿ ಹಿನ್ನೀರು ಪ್ರದೇಶ ಹಾಗೂ ಅಂಬಿಕಾನಗರದ ಪವರ್ ಹೌಸ್ ಬಳಿ 2019 -20 ರಲ್ಲಿ ಉಂಟಾದ ಭೂ ಬಿರುಕು ಹಾಗೂ ಕುಸಿತ ಪ್ರದೇಶದಲ್ಲಿ ರಿಟೇನಿಂಗ್ ವಾಲ್ ಕಟ್ಟಲಾಗಿದೆ.ಇದಕ್ಕಾಗಿ ಸಾಕಷ್ಟು ಹಣ ವಿನಿಯೋಗವಾಗಿದೆ. ನಮ್ಮ ಅಣೆಕಟ್ಟುಗಳು ಸುರಕ್ಷಿತವಾಗಿವೆ ಎಂದು ರಾಜಶೇಖರ ಹೇಳಿದರು. ಬಾಗಿನ ಅರ್ಪಣೆ ಸಮಯ ಕೆಪಿಸಿ ಸುಫಾ ಸಿಬ್ಬಂದಿ ಉಪಸ್ಥಿತರಿದ್ದರು.