ಸಂಚಾರ ನಿಯಮಗಳ ಪಾಲನೆ ಅತ್ಯವಶ್ಯಕವಾಗಿದೆ ನಾಗರೀಕರು ಸಂಚಾರಿ ಕಾನೂನುಗಳನ್ನು ಪರಿಪಾಲಿಸಬೇಕು

ಸಂಚಾರ ನಿಯಮಗಳ ಪಾಲನೆ ಅತ್ಯವಶ್ಯಕವಾಗಿದೆ ನಾಗರೀಕರು ಸಂಚಾರಿ ಕಾನೂನುಗಳನ್ನು ಪರಿಪಾಲಿಸಬೇಕು Observance of traffic rules is essential. Citizens should obey traffic laws.

ರಾಣಿ ಬೆನ್ನೂರ 13: ಪೊಲೀಸ್ ಇಲಾಖೆಗೆ ನನ್ನ ಅನುದಾನದಲ್ಲಿ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಸಂಚಾರ ನಿಯಮಗಳ ಪಾಲನೆ ಅತ್ಯವಶ್ಯಕವಾಗಿದೆ ನಾಗರೀಕರು ಸಂಚಾರಿ ಕಾನೂನುಗಳನ್ನು ಪರಿಪಾಲಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.     ನಗರದಲ್ಲಿ ಬುಧವಾರ ಶಾಸಕರ ಅನುದಾನ ಅಡಿಯಲ್ಲಿ ಖರೀದಿಸಿದ ನೂತನ ಟೋಯಿಂಗ್ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಂಚಾರ ಸುಗಮದಿಂದ ನಗರಕ್ಕೆ ಹೆಚ್ಚಿನ ಕೈಗಾರಿಕೆ ಉದ್ಯಮಗಳ ಬರಲಿವೆ. ಈ ನಿಟ್ಟಿನಲ್ಲಿ  ಸಂಚಾರ ನಿಯಮಗಳ ಪಾಲನೆ ಅವಶ್ಯವಾಗಿವೆ ಎಂದರು.   ಜಿಲ್ಲೆಯಲ್ಲಿಯೇ ಅತೀ ದೊಡ್ಡ ನಗರಿ ಎಂಬ ಖ್ಯಾತಿ ರಾಣೇಬೆನ್ನೂರು ನಗರ ಹೊಂದಿದೆ. ಆದರೇ ಅನೇಕ ವರ್ಷಗಳಿಂದ ಟ್ರಾಪಿಕ್ ಸಮಸ್ಯೆಯಿಂದಾಗಿ ನಗರದಲ್ಲಿ ಒಂದಿಲ್ಲೊಂದು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇದರ ಬಗ್ಗೆ ಚಿಂತಿಸಿ ಜನರಿಗೆ ಸಂಚಾರ ನಿಯಮಗಳ ಅರಿವಿನ ಜೊತೆಗೆ ಅದರ ಬಗ್ಗೆ ಜಾಗೃತಿ ವಹಿಸಲು ಜಾಥಾ ಮೂಲಕ ಜಾಗೃತಿ ಮಾಡಲಾಯಿತು.  ರಾಣೆಬೇನ್ನೂರ ನಗರಕ್ಕೆ ಈ ಟೋಯಿಂಗ್ ವಾಹನ ಅವಶ್ಯಕತೆ ಇದೆ ಎಂಬುದು ನಾನು ಶಾಸಕನಾಗುವ ಮುಂಚೆ ಯೋಚನೆ ಮಾಡಿದ್ದೆ. ಇದರ ಉದ್ದೇಶ ನಗರದಲ್ಲಿ ಕೈಗಾರಿಕೆ, ವಾಣಿಜ್ಯ ಹಾಗೂ ಸಾರ್ವಜನಿಕರು ಸುಲಲಿತವಾಗಿ ಕೆಲಸ ಆಗಬೇಕು ಎಂಬ ಉದ್ದೇಶ ಇದೆ. ಆದ್ದರಿಂದ ಪತ್ರಿಯೊಬ್ಬರು ಸಂಚಾರಿ ನಿಯಮ ಪಾಲಿಸಬೇಕು ಎಂದರು. ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಯಶೋಧಾ ಮಂಟಗೋಡಿ ಮಾತನಾಡಿ, ಜನರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಟೋಯಿಂಗ್ ವಾಹನ ಮೂಲಕ ನಿಮ್ಮ ವಾಹನವನ್ನು ತೆಗೆದುಕೊಂಡು ಹೋಗಲಾಗುವುದು. ರಾಣೆಬೆನ್ನೂರ ನಗರ ಪ್ರತಿನಿತ್ಯವೂ ಬೆಳೆಯುತ್ತಿರುವ ವಾಣಿಜ್ಯ ನಗರವಾಗಿದೆ. ಇದರಿಂದ ನಿತ್ಯವೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಸಾರ್ವಜನಿಕರಿಗೆ ತೊಂದರೆಗಳನ್ನು ಉಂಟುಮಾಡುತ್ತಿದೆ. ಅಲ್ಲದೆ ವಾಹನ ಸವಾರರು ಸಹ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನಗಳ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುತ್ತಿರುವುದು ಕಂಡು ಬಂದಿದೆ.   ಇದರಿಂದ ಇಂತಹ ಉಲ್ಲಂಘನೆ ಮಾಡಿದವರ ಮೇಲೆ ನಿಗಾ ಇಡಲು ಶಾಸಕರು ಟೋಯಿಂಗ್ ವಾಹನವನ್ನು ಇಲಾಖೆಗೆ ನೀಡಿದ್ದಾರೆ ಎಂದರು. ಇನ್ನೂ ನಾವು ಯಾರನ್ನು ಟಾರ್ಗೆಟ್ ಮಾಡುವುದಿಲ್ಲ ಆದರೆ ವಾಹನ ಸವಾರರಿಗೆ ಎಚ್ಚರಿಕೆ ನೀಡಬೇಕು ಎಂಬ ಉದ್ದೇಶ ಹಾಗೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.ನಂತರ ಸಾರ್ವಜನಿಕರಿಗೆ ಟೋಯಿಂಗ್ ವಾಹನ ಬಗ್ಗೆ ಅರಿವು ಮೂಡಿಸಲು ನಗರದ ಕೆ.ಇ.ಬಿ. ಗಣೇಶ ದೇವಸ್ಥಾನದಿಂದ ಆರಂಭವಾದ ಜಾಥಾ ಬಸ್ ನಿಲ್ದಾಣ, ಡಾ.ಪುನೀತರಾಜಕುಮಾರ ವೃತ್ತ, ಅಬ್ದುಲ್ ಕಲಾಂ ವೃತ್ತ, ಅಂಚೆ ವೃತ್ತ, ಚಕ್ಕಿಮಿಕ್ಕಿ ವೃತ್ತ, ದುರ್ಗಾ ವೃತ್ತ, ಕುರುಬಗೇರಿ ಕ್ರಾಸ್, ಹಳೇ ಪಿ.ಬಿ.ರಸ್ತೆಯ ಮೂಲಕ ದೇವರ ದಾಸಿಮಯ್ಯ ವೃತ್ತದ ಬಳಿ ಯುದ್ಧ ಟ್ಯಾಂಕರ್ ಆವರಣದವರೆಗೂ ಜಾಥಾ ಮೆರವಣಿಗೆ ಸಾಗಿತು.   ಡಿಎಸ್ಪಿ ಜೆ.ಲೋಕೆಶ, ಸಿಪಿಐಗಳಾದ ಸಿದ್ದೇಶ, ನಾಗಯ್ಯ ಕಾಡದೇವರ, ವೆಂಕಟರೆಡ್ಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು, ವಿದ್ಯಾರ್ಥಿಗಳು, ಆಟೋ ಚಾಲಕರು  ಇದ್ದರು.