ಶ್ರಾವಣ ಮಾಸದ ಅಂಗವಾಗಿ ಶಿವಯೋಗ ಮೌನ ಅನುಷ್ಠಾನ

ಶ್ರಾವಣ ಮಾಸದ ಅಂಗವಾಗಿ ಶಿವಯೋಗ ಮೌನ ಅನುಷ್ಠಾನ  Observance of Shivayoga Silence during the month of Shravana

ಲೋಕದರ್ಶನ ವರದಿ 

ಸಿಂದಗಿ, ಆ.19: ಶ್ರಾವಣ ಮಾಸದ ಅಂಗವಾಗಿ ಲೋಕಕಲ್ಯಾಣ ಹಾಗೂ ಶಾಂತಿಗಾಗಿ ಶಿವಯೋಗ ಮೌನ ಅನುಷ್ಠಾನವನ್ನು ಹಮ್ಮಿಕೊಳ್ಳಲಾಗಿದೆ.  ತಾಲೂಕಿನ ಯಂಕಂಚಿ ಕುಂಟೋಜಿ ಹಿರೇಮಠದ ಪೂಜ್ಯಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರ ಸಾರಥ್ಯದಲ್ಲಿ ನಡೆಯಲಿರುವ ಈ ಧಾರ್ಮಿಕ ಅನುಷ್ಠಾನವು ಆ.21ರಿಂದ ಸೆ.14ರವರೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಜರುಗಲಿದೆ.  ಲೋಕಕಲ್ಯಾಣ, ಶಾಂತಿ ಹಾಗೂ ಸರ್ವರ ಒಳಿತಿಗಾಗಿ ನಡೆಯಲಿರುವ ಈ ಧಾರ್ಮಿಕ ಅನುಷ್ಠಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶಿವಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.