ಬೆಳಗಾವಿ 10: ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯದಲ್ಲಿ ಜನವರಿ 10 2025 ರಂದು 38ನೇ ಡಿಪ್ಲೋಮಾ ನರ್ಸಿಂಗ ಬ್ಯಾಚ್ ಮತ್ತು 35ನೇ ಬಿ.ಎಸ್ಸಿ.ನರ್ಸಿಂಗ ಬ್ಯಾಚನ ಜ್ಯೋತಿ ಬೆಳಗುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.(ಡಾ).ವಿರೇಶಕುಮಾರ ನಂದಗಾವಅವರು ಸರ್ವರನ್ನು ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು. ನಂತರ ಅತಿಥಿಗಳನ್ನು ಅಭಿನಂದಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ,ಕೆ.ರೆಡ್ಡಮ್ಮಾ, ರಾಷ್ಟ್ರೀಯಒಕ್ಕೂಟದ ನೋಡಲ್ ಅಧಿಕಾರಿಗಳು, ಪಿ.ಎಚ್.ಡಿ ವಿಭಾಗ, ಭಾರತೀಯ ನರ್ಸಿಂಗ್ ಕೌನ್ಸಿಲ್ ಅವರು ಯುವ ನರ್ಸಿಂಗ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮರಾ್ಣ ಮನೋಭಾವ, ಧೃಢ ನಿರ್ಧಾರ ಮತ್ತು ಗಮನ ಕೇಂದ್ರೀಕರಿಸುವಿಕೆಯು ಶುಶ್ರೂಷಕ ವೃತ್ತಿಯ ಮುಖ್ಯ ಅಂಶಗಳಾಗಿವೆಯೆಂದು ಹೇಳಿದರು. ಹಾಗೂ ತಮ್ಮ ಮಕ್ಕಳಿಗೆ ಸರಿಯಾದ ವೃತ್ತಿಯನ್ನು ಆಯ್ಕೆ ಮಾಡಿದ ಪೋಷಕರನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾದ ಡಾ.ಸುಹಾಸ ಶೆಟ್ಟಿ, ಪ್ರಾಂಶುಪಾಲರು, ಕೆ.ಎಲ್.ಇ ಶ್ರೀ.ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ, ಬೆಳಗಾವಿ. ಇವರು ಮಾತನಾಡಿ ನಾಲ್ಕು ಪ್ರಮುಖ ಗುಣಗಳಾದ ಅನುರಕ್ತ (ದಯೆ), ಶುಚಿ (ಸ್ವಚ್ಛತೆ), ದಕ್ಷ (ಧೈರ್ಯ) ಮತ್ತು ಬುದ್ದಿಮಾನ (ಜ್ಞಾನ) ಇವುಗಳನ್ನು ಶುಶ್ರೂಷಕರುತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಬೆಳಗಾವಿಯ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ, ನರ್ಸಿಂಗ ಕಾಲೇಜಿನಡೀನಪ್ರೊ.(ಡಾ). ಸಂಗೀತಾಖರಡೆಮತ್ತುಸಹ-ಪ್ರಾಧ್ಯಾಪಕರಾದಡಾ.ಗುರುರಾಜಉಡಪಿಇವರುವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋದಿಸಿದರು
ಈ ಕಾರ್ಯಕ್ರಮದಲ್ಲಿ 106 ಬಿ.ಎಸ್ಸಿ.ನರ್ಸಿಂಗ ವಿದ್ಯಾರ್ಥಿಗಳು ಮತ್ತು 100ಡಿಪ್ಲೊಮಾ ನರ್ಸಿಂಗ ವಿದ್ಯಾರ್ಥಿಗಳು ಪ್ರಮಾಣ ವಚನವನ್ನು ಸ್ವೀಕರಿಸಿದರು.
ಡಾ.ಎಂ.ದಯಾನಂದ, ವೈದ್ಯಕೀಯ ನಿರ್ದೇಶಕರು, ಕೆ.ಎಲ್.ಇ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಳಗಾವಿ, ಕೆ.ಎಲ್.ಇ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು ಹಾಗು ಅಧಿಕಾರಿಗಳು ಉಪಸ್ಥಿತರಿದ್ದರು.
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಪ್ರೊ.(ಡಾ).ಪ್ರೀತಿ ಭೂಪಾಲಿ, ಅವರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದಗಳನ್ನು ಅರ್ಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು.