ಅ.14 ರಂದು ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಅ.14 ರಂದು ಪದಾಧಿಕಾರಿಗಳ ಪದಗ್ರಹಣ ಸಮಾರಂಭ Oath-taking ceremony of office bearers on October 14

ಅ.14 ರಂದು ಪದಾಧಿಕಾರಿಗಳ ಪದಗ್ರಹಣ ಸಮಾರಂಭ 

ಧಾರವಾಡ  12: ಇಲ್ಲಿನ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್‌, ಧಾರವಾಡ ಸೆಂಟರ್‌ನ  

2025-2027 ನೇಯ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ.14 ರಂದು ಸಾಯಂಕಾಲ 6 ಗಂಟೆಗೆ ನಗರದ ಆಲೂರ ವೆಂಕಟರಾವ್ ಸಭಾಭವನದಲ್ಲಿ ಜರುಗಲಿದೆ.ನೂತನ ಚೇರಮನ್ ಇಂ.ಬಸವರಾಜ ಖಣದಾಳಿ, ಕಾರ್ಯದರ್ಶಿ ಇಂ. ವಿಜಯಕುಮಾರ ಶಿರಗುಪ್ಪಿ,  ಖಜಾಂಚಿ, ಇಂ.ಮಹಮ್ಮದ ಅಬ್ಯಾಳ, ಆಡಳಿತ ಮಂಡಳಿಯ ಸದಸ್ಯರಾದ ಇಂ. ಸಂತೋಷ ಅಂಚಟಗೇರಿ,ಇಂ. ಪ್ರಭುಪ್ರಸಾದ ಮತ್ತು ಇಂ.ದೇವರಾಜ ಕಂಬಳಿ ಅವರ ಪದಗ್ರಹಣ ಮಾಡುವರು.  

ಸಮಾರಂಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಎಸಿಸಿಇ (ಇಂಡಿಯಾ) ಪ್ರಧಾನ ಕಾರ್ಯದರ್ಶಿ ಮತ್ತು ಚುನಾಯಿತ ಅಧ್ಯಕ್ಷ ಇಂ.ರಾಜೇಂದ್ರ ಕಲಬಾವಿ ಅನುಸ್ಥಾಪನ ಅಧಿಕಾರಿಯಾಗಿ ಭಾಗವಹಿಸುವರು. ಹು-ಧಾ ಮಹಾನಗರ ಪಾಲಿಕೆ ಆಯುಕ್ತ, ಡಾ. ರುದ್ರೇಶ್ ಘಾಳಿ ಮತ್ತು ಹು-ಧಾ ಮಹಾನಗರ ಪಾಲಿಕೆಯ ನಗರ ಯೋಜನಾ ಉಪ ನಿರ್ದೇಶಕ ಪ್ರಜ್ಞ-್ಯ ಪ್ರಕಾಶ ಅತಿಥಿಗಳಾಗಿ ಆಗಮಿಸುವರು.ಹುಬ್ಬಳ್ಳಿಯ ಕೋಟಿ ಸ್ಟೀಲ್ 600ಆ,  ಕೋಳಿವಾಡ ಮಾರ್ಬಲ್ಸ್‌  ಆ್ಯಂಡ್ ಗ್ರಾನೈಟ್ಸ್‌ ಮತ್ತು ಧಾರವಾಡದ ಪ್ರಭು ಸಿರಾಮಿಕ್ಸ್‌ ಆ್ಯಂಡ್ ಗ್ರಾನೈಟ್ಸ್‌ ಪ್ರಾಯೋಜಕತ್ವ ವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಯ ವೃತ್ತಿ ನಿರತ ಸಂಘಟನೆಗಳು ಮತ್ತು 200 ಕ್ಕೂ ಹೆಚ್ಚು  ಇಂಜೀನೀಯರ್ ಗಳು ಭಾಗವಹಿಸಲಿದ್ದಾರೆ ಎಂದು ಸಮಾರಂಭದ ಸಂಚಾಲಕ ಎಸ್‌.ಆರ್‌. ರಾನೋಜಿ ತಿಳಿಸಿದ್ದಾರೆ.