ಸಿಂದಗಿ ತಾಲ್ಲೂಕಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಸಿಂದಗಿ ತಾಲ್ಲೂಕಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ Oath-taking ceremony of Sindagi Taluk office bearers

ವಿಜಯಪುರ 17 : ಸಿಂದಗಿ ತಾಲೂಕಿನಾದ್ಯಂತ ಕ್ರುಷಿ ಇಲಾಖೆ ಅಡಿಯೊಳಗೆ ಸತತವಾಗಿ ಸುಮಾರು 8-10 ವರ್ಷಗಳಿಂದ 77  ಜನ ಬೆಳೆಸಮಿಕ್ಷೆದಾರರು ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ಸರಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಅವರು  ಸಂಘಟನೆಮುಖಾಂತರ ನ್ಯಾಯ ಸಮ್ಮತವಾದ ಸೌಲಭ್ಯಗಳನ್ನು  ಪಡೆದುಕೊಳ್ಳುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯನ್ನು ಇಡೀ ರಾಜ್ಯ ವ್ಯಾಪಿ ಕಟ್ಟಿಕೊಂಡಿದ್ದಾರೆ.

ಈ ಸಂಘಟನೆಯ ಅಂಗ ಘಟಕವಾಗಿ ಕಾರ್ಯ ನಿರ್ವಹಿಸಲು ಸಿಂದಗಿ ತಾಲ್ಲೂಕಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಜಯಪುರದ ಗಗನ ಮಹಲ ಉದ್ಯಾನವನದಲ್ಲಿ ರಾಜ್ಯ ಸಮಿತಿಯ ಸದಸ್ಯರುಗಳ ನೇತೃತ್ವದಲ್ಲಿ ನೆರವೇರಿಸಲಾಯಿತು. ಸಿಂದಗಿ ತಾಲೂಕಾ ಅಂಗ ಘಟಕದ ಗೌರವ ಅಧ್ಯಕ್ಷರಾಗಿ ಶ್ರೀಶೈಲ ಜಾಲವಾದಿ, ಅಧ್ಯಕ್ಷರಾಗಿ ದಾವಲಮಲಿಕ ಬಾವಾಸಾಬ ಮೊಕಾಶಿ,ಉಪಾಧ್ಯಕ್ಷರಾಗಿ ರವಿಕಿರಣ  ಹೊಸಮನಿ ,ಪ್ರಧಾನ ಕಾರ್ಯದರ್ಶಿ ಯಾಗಿ ಶಿವಶರಣ ಹೊಸಮನಿ, ಸಹಕಾರ್ಯದರ್ಶಿ ಯಾಗಿ ಬಳರಾಮ ರಾಠೋಡ , ಖಜಾಂಚಿಯಾಗಿ ಬಸವರಾಜ ಬೊಮ್ಮನಳ್ಳಿ, ಸಂಘಟನಾ ಕಾರ್ಯದರ್ಶಿ ಯಾಗಿ , ಶಿವಾನಂದ ಬಿರಾದಾರ, ಸಂಚಾಲಕರಾಗಿ ಅನೀಲ ತಳವಾರ, ಸದಸ್ಯರು ಗಳಾಗಿ ಮಡಿವಾಳ ಅಗಸರ, ಶರಣು ಗಡಗಿ ,ಹಾಗೂ ಕಿಶನ್ ನಾಯಿಕ,ಸುನಿಲ್ ಯಶವಂತರಾಯ  ಅವಟಿ, ಈ ಎಲ್ಲಾ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷರಾದ ಭೀಮಪ್ಪ ಲಕ್ಷ್ಮಣ ತಳವಾರ ಅವರು  , ಸಂಸ್ಥಾಪಕರಾದ ನರಸಪ್ಪ ಅರ್ಜುನ್ ನಾವಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಬೋಧಿಸಿದರು.ಈ ಒಂದು ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯ ಸಮಸ್ತ ತಾಲೂಕಾ ಘಟಕದ ಪದಾಧಿಕಾರಿಗಳು ಕೂಡಾ ಭಾಗವಹಿಸಿದ್ದರು.