ಆರೋಗ್ಯದ ಬಲವರ್ಧನೆಗೆ ಪೌಷ್ಠಿಕ ಆಹಾರಅವಶ್ಯ: ಡಾ.ವಸಂತ ಗಾಣಿಗೇರ
Nutritious food is essential for strengthening health: Dr. Vasantha Ganigera
ಬಾಗಲಕೋಟೆ 03 : ಪ್ರತಿನಿತ್ಯದ ಆಹಾರ ಸೇವನೆಯಲ್ಲಿ ಅಧಿಕವಾಗಿ ಹಣ್ಣು ಮತ್ತು ತರಕಾರಿ ಸೇವನೆಯಿಂದ ಸಮತೂಕದಆಹಾರದೊರೆತಲ್ಲಿ ದಷ್ಟಪುಷ್ಟದ ಜೊತೆಗೆ ಸಧೃಡ ಹಾಗೂ ರೋಗನಿರೋಧಕ ಶಕ್ತಿ ಪಡೆಯಬಹುದು ಎಂದು ತೋಟಗಾರಿಕೆ ವಿವಿಯ ತರಕಾರಿ ತಜ್ಞ ಡಾ.ವಸಂತ ಗಾಣಿಗೇರ ಹೇಳಿದರು.
ತೋವಿವಿಯ ರೈತ ಸಮುದಾಯ ಭವನದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ 7 ದಿನಗಳ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹ ದಿನಾಚರಣೆ ಎಂಬ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾವಯವ ಕೈತೋಟ ಪ್ರತಿ ಮಹಿಳೆಯರೆಲ್ಲರೂ ಮನೆಯ ಅಂಗಳದಲ್ಲಿ ಅಥವಾ ತಾರಸಿ/ಮೇಲ್ಛಾವಣೆಯಲ್ಲಿ ವೈಜ್ಞಾನಿಕವಾಗಿ ಬೆಳೆಯಲು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಬೆಳೆದು ಆರೋಗ್ಯಯುತ ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು.
ಈ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಮಾದರಿ ಕೈತೋಟದ ಪ್ರಾತ್ಯಕ್ಷಿಕೆ, ಕಿರುಧಾನ್ಯ ಹಾಗೂ ಹಸಿರು ಸೊಪ್ಪಿನ ಮಹತ್ವ, ಆರೋಗ್ಯದಲ್ಲಿಓಷದೀಯ ಸಸ್ಯಗಳು, ಉತ್ತಮಜೀವನ ಶೈಲಿಗೆ ಪೌಷ್ಠಿಕ ಆಹಾರ ಎನ್ನುವ ಶೀರ್ಷೀಕೆಯ ಚಿತ್ರಕಲಾ ಸ್ಪರ್ಧಾ, ಒಲೆರಹಿತ ಪೌಷ್ಠಿಕ ಆಹಾರಅಡುಗೆ ಸ್ಪರ್ಧೆ ಹಾಗೂ ಪೌಷ್ಠಿಕ ಮತ್ತು ಅಪೌಷ್ಠಿಕತೆಕ ುರಿತು ವಿಚಾರ ಗೋಷ್ಠಿಗಳನ್ನು ಸತತ 7 ದಿನಗಳವರೆಗೆ ಆಯೋಜಿಸಲಾಗುವುದೆಂದು ಸಂಯೋಜಕರಾದ ಡಾ. ದೀಪಾ ತೇರದಾಳ, ಸಹಾಯಕ ಪ್ರಾಧ್ಯಾಪಕರು, ವಿಸ್ತರಣಾ ನಿರ್ದೇಶನಾಲಯ, ಬಾಗಲಕೋಟ ಎಂದು ತಿಳಿಸಿದರು.
ಡಾ. ಭುವನೇಶ್ವರಿ ಜಿ. ಪ್ರಾಧ್ಯಾಪಕರು, ತೋಮವಿ, ಬಾಗಲಕೋಟರವರು ಮಾತನಾಡಿ ಪೌಷ್ಠಿಕ ಆಹಾರ ಉತ್ತಮ ಜೀವನಕ್ಕೆ ಸೋಪಾನ ಎಂದು ತಿಳಿಸಿದರು. ಸಂಪನ್ಮೂಲ ವಿಜ್ಞಾನಿಗಳಾಗಿ ಆಗಮಿಸಿದ ಡಾ. ವಿಜಯಾ ಹೊಸಮನಿ, ಸಹಾಯಕ ಪ್ರಾಧ್ಯಾಪಕರು, ತೋಮವಿ, ಬಾಗಲಕೋಟಇವರು ಅಡುಗೆ ಮನೆಯಲ್ಲಿಆರೋಗ್ಯ ಎಂಬ ವಿಷಯದ ಬಗ್ಗೆ ಕುರಿತು ಮಹಿಳೆಯರಿಗೆ ಅದರ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಶ್ರೀ ರೇವಣಸಿದ್ದ ಆರ್. ಬಳ್ಳೊಳ್ಳಿ, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟಇವರುಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ತರಬೇತಿಗಳನ್ನು ರೈತ ಮತ್ತು ರೈತ ಮಹಿಳೆಯರಿಗೆ ಉಚಿತವಾಗಿ ನೀಡುತ್ತೇವೆಎಂದು ತಿಳಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ ರವರು ತರಬೇತಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಎಲ್ಲರಿಗೂ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 