ವಚನ ಸಾಹಿತ್ಯಕ್ಕೆ ನುಲಿಯ ಚಂದಯ್ಯನ ಕೊಡುಗೆ ಅಪಾರ: ಬಸವರಾಜ ಕುಂಬಾರ
Nuliya Chandayya's contribution to Vachana literature is immense: Basavaraja Kumbara
ಲಕ್ಷ್ಮೇಶ್ವರ, ಆ.28: 12ನೇ ಶತಮಾನದ ಸಮಕಾಲೀನ ಶರಣರಲ್ಲಿ ಪ್ರಮುಖರಾಗಿದ್ದ ನುಲಿಯ ಚಂದಯ್ಯ ಅವರು ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ಕಾಯಕದ ಮೂಲಕ ದಾಸೋಹದ ಸಂದೇಶ ಸಾರಿದ ಮಹಾನ್ ವಚನಕಾರರು ಎಂದು ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಪ್ರಧಾನ ಗುರು ಬಸವರಾಜ ಕುಂಬಾರ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಹಾಗೂ ಅಪರೂಪದ ಅಭಿವ್ಯಕ್ತಿಯ ರೂಪ ವಚನ ಸಾಹಿತ್ಯ. ಈ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪ್ರಮುಖ ವಚನಕಾರರಲ್ಲಿ ನುಲಿಯ ಚಂದಯ್ಯ ಅವರೂ ಒಬ್ಬರು ಎಂದು ಹೇಳಿದರು.
ನುಲಿಯ ಚಂದಯ್ಯ ಅವರು ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದಲ್ಲಿ ಕ್ರಿ.ಶ. 1160ರಲ್ಲಿ ಜನಿಸಿದರು. ಅವರು ರಚಿಸಿದ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮವನ್ನು ಬಳಸಿದ್ದು, ‘ಚಂದೇಶ್ವರಲಿಂಗ’ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ ಎಂದು ಉತ್ತರ ಕಸ್ತೂರಿಯ ಸಂಪನ್ಮೂಲ ವ್ಯಕ್ತಿ ಉಮೇಶ ನೇಕಾರ ತಿಳಿಸಿದರು.
ಚಂದಯ್ಯ ಅವರ ವಚನಗಳು ಅತ್ಯಂತ ಸರಳ ಹಾಗೂ ನೇರವಾದ ದೇಸಿ ಸೊಗಡಿನಿಂದ ಕೂಡಿವೆ. ಅವುಗಳಲ್ಲಿನ ಮೌಲ್ಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿಗಳ ಆಚರಣೆ ಸಾರ್ಥಕವಾಗುತ್ತದೆ ಎಂದು ದಕ್ಷಿಣ ಕಸ್ತೂರಿಯ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಮತ್ತೂರ ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಚ್.ಡಿ. ನಿಂಗರಡ್ಡಿ, ಆರ್.ಕೆ. ಉಪನಾಳ, ಆರ್.ಎಂ. ಶಿರಹಟ್ಟಿ, ಎಲ್.ಎ. ಬಣಕಾರ, ಪ್ರಶಿಕ್ಷಣಾರ್ಥಿ ಗೌರಮ್ಮ ಮಜ್ಜಿಗುಡ್ಡ ಹಾಗೂ ಶಿವರಾಜ ಸಜ್ಜನರ ಸೇರಿದಂತೆ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 