ನ.11 ವೀರರಾಣಿ ಒನಕೆ ಓಬವ್ವ ಜಯಂತಿ

ನ.11 ವೀರರಾಣಿ ಒನಕೆ ಓಬವ್ವ ಜಯಂತಿ  November 11th is the birth anniversary of Veerarani Onake Obavva.

ಹುಬ್ಬಳ್ಳಿ 05: ಪ್ರತಿ ವರ್ಷದಂತೆ ಈ ವರ್ಷವು ಕೂಡ ಅದ್ದೂರಿಯಾಗಿ ನ.11 ರಂದು ವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಗುವುದು ಎಂದು ಹುಬ್ಬಳ್ಳಿ ನಗರ ಗ್ರೇಡ್‌-2 ತಹಶೀಲ್ದಾರರಾದ ಶಿವಾನಂದ ಹೆಬ್ಬಳ್ಳಿ ಅವರು ಹೇಳಿದರು. ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ಅಂದು ಬೆಳಿಗ್ಗೆ 10 ಗಂಟೆಗೆ ತಾಲೂಕು ಆಡಳಿತ ಸಭಾಭವನದಲ್ಲಿ ವೀರರಾಣಿ ಒನಕೆ ಓಬವ್ವ ರವರ ಜಯಂತಿ ಆಚರಣೆ ಮಾಡಲಾಗುತ್ತದೆ. ಹಾಗೂ ,ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಗುವದು, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.   

ಪೂರ್ವಭಾವಿ ಸಭೆಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಿಯದರ್ಶಿನಿ. ಹಿರೇಮಠ್, ಇಂದುಮತಿ.ಎಸ್‌.ಶಿರಗಾವಿ,ಶೋಭಾ. ಬಳ್ಳಾರಿ, ಸರು.ಎಂ,ಗಿರಿಜಾ.ಎಸ್‌.ಹಿರೇಮಠ,ಚೇತನ.ಡಿ.ಎಲ್, ಎಂ.ಪಿ.ಬಿಲಾರ, ಮಲ್ಲಣ್ಣ.ಯಾತಗೇರಿ, ಮೇಘರಾಜ್‌.ಎಂ.ಹೆಚ್,ಗಂಗಾಧರ. ಕಮಲದಿನ್ನಿ, ಹನುಮಂತಪ್ಪ. ದೊಡ್ಡಮನಿ,ಎಸ್‌.ಪಿ. ಹುಬ್ಳಿಕರ್, ಹನುಮಂತಪ್ಪ.ವೈ.ಹುನೂರ, ಶಿವಶಂಕರ.ಕೆ.ಬಂಕಾರಿ, ಶಂಕರ. ಅಜಮನಿ, ವಿರೂಪಾಕ್ಷ. ಛಲವಾದಿ, ಗುರುನಾಥ.ಎಸ್‌.ಕೆ, ಸಮಾಜದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.