ಲೋಕದರ್ಶನ ವರದಿ
ಬಳ್ಳಾರಿ18: ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು ನಗರದ ಕನರ್ಾಟಕ ರಾಜ್ಯ ಬೀಜ ನಿಗಮದ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿಗಮದ ಅಧಿಕಾರಿಗಳಿಗೆ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿ ಸಕಾಲದಲ್ಲಿ ರೈತರಿಗೆ ಪೂರೈಸಲು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಖಾಸಗಿ ಕಂಪನಿಗಳೊಡನೆ ಪೈಪೋಟಿ ಎದುರಿಸಲು,ಬೀಜೋತ್ಪಾದನೆ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ಬೀಜಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನಹರಿಸಲು ಸೂಚನೆ ನೀಡಿದ ಅವರು, ನಿಗಮಕ್ಕೆ ಸರಕಾರದಿಂದ ಸಿಗುವ ಎಲ್ಲ ರೀತಿಯ ಸಹಕಾರಗಳನ್ನು ನೀಡುವುದಾಗಿ ತಿಳಿಸಿದರು.
ಕನರ್ಾಟಕ ರಾಜ್ಯ ಬೀಜ ನಿಗಮ ಮಂಡಳಿ ನಿದರ್ೇಶಕ ಎಸ್.ರಾಜೇಂದ್ರಪ್ರಸಾದ್ ಮಾತನಾಡಿ, ಸರಕಾರದಿಂದ ನಿಗಮಕ್ಕೆ ಹೆಚ್ಚಿನ ಸವಲತ್ತುಗಳನ್ನು ನೀಡಬೇಕು. ನಿಗಮದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಸಭೆಗಳನ್ನು ಆಯೋಜಿಸುವಂತೆ ಕೋರಿದರು.
ಇದಕ್ಕೆ ಸ್ಪಂದಿಸಿದ ಸಚಿವ ಶಿವಶಂಕರರೆಡ್ಡಿ ಅವರು, ನಿಗಮಕ್ಕೆ ಎಲ್ಲ ರೀತಿಯ ಬೆಂಬಲವನ್ನು ನೀಡುವುದಾಗಿ ತಿಳಿಸಿದರು ಮತ್ತು ನಿಗಮದ ಕಾರ್ಯಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಆ.23ರಂದು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ವಿಶೇಷ ಸಭೆ ಕರೆಯಲಾಗಿದೆ ಎಂದರು.
ಬೀಜೋತ್ಪಾದನಾ ರೈತರಾದ ಭಾಸ್ಕರರೆಡ್ಡಿ,ಭೈರದೇವನಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೀಜೋತ್ಪಾದನೆ ಮಾಡಲು ಆಸಕ್ತರಿದ್ದು, ಬೀಜಗಳ ಖರೀದಿ ದರವನ್ನು ಹೆಚ್ಚಿಗೆ ನೀಡಲು ಹಾಗೂ ಹಿಂದೆ ನೀಡಿದಂತೆ ಪ್ರಮಾಣಿತ ಬೀಜ ಬೆಳೆದ ರೈತರಿಗೆ ಬೀಜೋತ್ಪಾದನ ಪ್ರೋತ್ಸಾಹಧನ ನೀಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ಜಂಟಿಕೃಷಿ ನಿದರ್ೇಶಕ ದಿವಾಕರ್, ಉಪನಿದರ್ೇಶಕ ಶಿವನಗೌಡ ಪಾಟೀಲ್, ಬೀಜ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿಶಂಕರ ಮತ್ತಿತರರು ಇದ್ದರು.