ಹಾವೇರಿ :ನಗರದ ಗುರು ಭವನದಲ್ಲಿ ಕನರ್ಾಟಕ ಯಕ್ಷಗಾನ ಅಕಾಡೆಮಿ ಏರ್ಪಡಿಸಿದ್ದ ಯಕ್ಷರಂಗ ಕಲೋತ್ಸವದಲ್ಲಿ ದೊಡ್ಡಾಟ ಮತ್ತು ಯಕ್ಷಗಾನದ ಪ್ರದರ್ಶನಗಳು, ಮೈಸೂರಿನ ಬಸವೇಶ್ವರ ಸಂಘದವರು ಅಂಗದ ಸಂಧಾನ ಮತ್ತು ದಾವನಗೇರಿ ಕಲಾ ಸಂಗದವರ ಗಿರೀಜಾ ಕಲ್ಯಾಣ ನಮ್ಮ ಉತ್ತರ ಕನರ್ಾಟಕದ ದೊಡ್ಡಾಟ ಕಲೆ ಪ್ರದರ್ಶನ ಜರುಗಿದವು.
ದಾಂಡೇಲಿಯ ವಾಗ್ದೇವಿ ಕಲಾ ತಂಡದವರು ಕೃಷ್ಣ ಸಂಧಾನ ಮತ್ತು ಉಡುಪಿ ಯಕ್ಷಗಾನ ಕಲಾ ತಂಡದವರು ಸುಧನ್ವಾಜರ್ುನ ಯಕ್ಷಗಾನಗಳನ್ನು ಪ್ರಯೋಗಿಸಿದರು. ವಿಶೇಷವೆಂದರೆ ಎಲ್ಲ ನಾಲ್ಕು ಪ್ರದರ್ಶನಗಳ ಮೂಲ ಆಕರ ಮಹಾಭಾರತ ಮಹಾಕಾವ್ಯವೇ ಆಗಿದದ್ದವು.
ತುಲನಾತ್ಮಕವಾಗಿ ನೋಡಿದಾಗ ಯಕ್ಷಗಾನ ಪ್ರದರ್ಶನಗಳು ತಮ್ಮ ಆಕರ್ಷಕ ವೇಷ ಭೂಷಣ ಮತ್ತು ಸಂಗೀತದ ಮೂಲಕ ಮನಸೆಳೆದರೆ, ದೊಡ್ಡಾಟ ಕಲೆಗಳು ಎತ್ತರದ ಹಾಡುಗಾರಿಕೆ ಮತ್ತು ಬಲಿಷ್ಠ ಕುಣಿತದಿಂದ ಜನರ ಮನಸ್ಸನ್ನು ಸೆಳೆಯುವಂತೆ ಇದ್ದವು. ಶ್ರೀಕೃಷ್ಣ ಸಂಧಾನ ಒಂದು ವಿಶೇಷ ಪ್ರಯೋಗವಾಗಿತ್ತು. ಗಮಕ ಕಲೆಯಂತೆ ಯಾವ ಕುಣಿತ ಮತ್ತು ವೇಷಭೂಷನವಿಲ್ಲದೆ ನಿರೂಪನಾ ಶೈಲಿಯಲ್ಲಿ ರಂಗೇರಿದವು.
ಇದರ ನಡುವೆ ಮಾರಂಬೀಡ ಕಲಾ ತಂಡದವರು ಶಿಶುವಿನಾಳ ಶರೀಫರ ಡೊಳ್ಳಿನ ಹಾಡೊಂದನ್ನು ಕುಣಿತದೊಂದಿಗೆ ಪ್ರದಶರ್ಿಸಿದ್ದು ಗಮನ ಸೆಳೆಯಿತು. ಇಲ್ಲಿ ಕಲಾ ಪ್ರತಿಭೆ ಅವಕಾಶ ನೀಡಲಾಗಿದ್ದು,ನಗರದ ಜನತೆಗೆ ಕಲಾ ತಂಡಗಳು ಸಖತ್ತ್ ಮಜಾ ನೀಡಿದವು.