ಧಾರವಾಡ 24: ಕೃಷಿ ಕ್ಷೇತ್ರ ಚೆನ್ನಾಗಿ ನಡೆಸುವಲ್ಲಿ ಮಹಿಳೆಯರ ಶ್ರಮ ಮತ್ತು ಸಾಧನೆ ಅಪಾರವಾಗಿದೆ. ದುರಂತದ ವಿಷಯವೆಂದರೆ ಒಂದು ವಾರದಲ್ಲಿ 25 ಘಂಟೆ ಮನೆಗೆಲಸ 5 ಘಂಟೆ ಸಾಮಾಜಿಕ ಸೇವೆ 30 ಘಂಟೆ ಯಾವುದೇ ಪ್ರತಿಫಲವಿಲ್ಲದೇ ಕನಿಷ್ಠ 60 ಘಂಟೆ ಶ್ರಮ ಹಾಕುತ್ತಾರೆ. ಕೃಷಿಯಲ್ಲಿ ಬಿತ್ತನೆ ಕಾರ್ಯದಿಂದ ರಾಶಿ ಮಾಡಿ ಚೀಲ ತುಂಬಿ ವಾಹನದಲ್ಲಿ ಲೋಡ ಮಾಡುವವರೆಗೂ ಮಹಿಳೆಯರ ಪಾತ್ರ ಅಪಾರವಾಗಿದ್ದರು ಪುರುಷರಿಗಿಂತ 70% ಸಂಬಳ ಕಡಿಮೆ ಪಡೆಯುತ್ತಾರೆ. ಈ ತಾರತಮ್ಯ ಸರಿಪಡಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೃಷಿ ವಿವಿ ನಿವೃತ್ತ ಕುಲಪತಿ ಡಾ. ವಿಠ್ಠಲ ಬೆಣಗಿ ಹೇಳಿದರು.
ಅವರು ದಿ. 21ರಂದು ಧಾರವಾಡ ಕನ್ನಡ ಸಾಹಿತ್ಯ ಪರಿಷತ್ದಲ್ಲಿ ಶೋಭಾ ಛಲವಾದಿ ಅವರ ಮುಖಂಡತ್ವದಲ್ಲಿ, ಸ್ಥಾಪಿತ ಉತ್ತರ ಕರ್ನಾಟಕ ರೈತ ಮಹಿಳಾ ಸಂಘ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಮಹಿಳೆಯರು ಸುಧಾರಿಸಿ ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆ, ಪುಷ್ಪೋಧ್ಯಮ, ಹೈನುಗಾರಿಕೆ, ಕುರಿ ಕೋಳಿ ಮೇಕೆ ಜೇನು ಸಾಕಾಣಿಕೆಯಂತಹ ಕಸಬುಗಳಲ್ಲಿ ಕೃಷಿ ವಿಸ್ತರನಾ ಕ್ಷೇತ್ರ ಧಾರವಾಡದಿಂದ ಸೂಕ್ತ ತರಬೇತಿ ಪಡೆದು ಆದಾಯ ಸಂಪಾದಿಸುವತ್ತ ಸೂತ್ತ ಗಮನವಹಿಸುವತ್ತ ಈ ರೈತ ಮಹಿಳಾ ಸಂಘಟನೆ ಯಶಸ್ವಿ ಹೊಂದಿ ತೀವ್ರ ಪ್ರಗತಿಯತ್ತ ಮುನ್ನಡೆಯ ಬೇಕೆಂದರು.
ಉತ್ತರಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಚ. ಬಕ್ಕಾಯಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ತೋಡಗಿಸಿಕೊಂಡ ರೈತ ಮಹಿಳೆ, ಕೃಷಿ ಕೂಲಿಕಾರರು ಮತ್ತು ಸಣ್ಣ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಆಗುವ ಸಂದರ್ಭದಲಿ,್ಲ ಕಡ್ಡಾಯವಾಗಿ ಜಮಿನು-ಮನೆ-ನಿವೇಶನ ಹೊಂದಿರಬೇಕು. ಇಲ್ಲದಿದ್ದಲ್ಲಿ ಫಲಾನುಭವಿಗಳಾಗಲು ಸಾದ್ಯವಿಲ್ಲ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ, ಉತ್ತರ ಕರ್ನಾಟಕ ರೈತ ಮಹಿಳಾ ವೇದಿಕೆ ಸರ್ಕಾರವನ್ನು ಎಚ್ಚರಗೊಳಿಸಿ ಸರ್ಕಾರಿ ಸೌಲಭ್ಯ ಪಡೆದುಕೊಂಡು ಸ್ವ ಅಭಿವೃದ್ಧಿಯತ್ತ ಮುನ್ನುಗ್ಗಬೇಕೆಂದರು.
ಮುಖ್ಯ ಅಥಿತಿಗಳಾಗಿದ್ದ ಭಾರತೀಯ ಜೀವ ವಿಮಾನಿಗಮ ನಿವೃತ್ತ ಸಹಾಯಕ ವಿಭಾಗಿಯ ವ್ಯವಸ್ಥಾಪಕ ಭೀಮಸೇನ ಕಾಗಿ ಅವರು ಕೃಷಿ ಕ್ಷೇತ್ರದಡಿ ಗುರ್ತಿಸಿಕೊಂಡ ರೈತ ಮಹಿಳೆಯರು, ಕೃಷಿ ಕೂಲಿಕಾರರು, ಸಣ್ಣ ರೈತರಿಗೆ ಸರ್ಕಾರದಿಂದ ವಿವಿಧ ಯೋಜನೆಗಳಿಂದ ವಂಚಿತರಾಗುತ್ತಿದ್ದು ಸರ್ಕಾರ ಸ್ಥಳೀಯ ಸಂಸ್ಥೆ, ವಿಧಾನ ಸಭೆ/ ಪರಿಷತ್ತುಗಳಲ್ಲಿ ಕಂದಾಯ ವಿಭಾಗಕ್ಕೆ ಒಬ್ಬರಂತೆ ರೈತ ಮಹಿಳೆ- ಸಣ್ಣ ರೈತರು- ಕೃಷಿ ಕೂಲಿಕಾರರಿಗೆ ಕನಿಷ್ಠ 8 ರಿಂದ 10 ಸ್ಥಾನಗಳನ್ನು ಮೀಸಲಿಟ್ಟು ಚುನಾವಣೆಯಲ್ಲಿ ಆಯ್ಕೆಯಾಗುವಂತೆ ವ್ಯವಸ್ಥೆಗಳಿಸಬೇಕು ಅದರಂತೆ ಚಿನ್ನಪ್ಪ ರೆಡ್ಡಿ ಆಯೋಗದ ಆನ್ವಯ ರೈತ-ಮಹಿಳೆ- ಕೃಷಿ ಕೂಲಿ ಕಾರರು & ಸಣ್ಣ ರೈತರಿಗೆ, ಶಿಕ್ಷಣ & ಉದ್ಯೋಗ, ಉದ್ಧಿಮೆ ಕ್ಷೇತ್ರಗಳಲ್ಲಿ 5% ಮಿಸಲಾತಿಯನ್ನು ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿ ರೈತರ ಸವರ್ಾಂಗಿಣ ಪ್ರಗತಿಗೆ ಪ್ರಯತ್ನಿಸುವುದು ಅಗತ್ಯವಾಗಿದೆ ಎಂದರು.
ಧಾರವಾಡ ಡೈಟ್ ನಿವೃತ್ತ ಪ್ರಧಾನ ಗುರುಮಾತೆ ಸರೋಜಾ ಎಮ್, ಮುಶಣ್ಣವರ ಅವರು ಮಾತನಾಡಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಸುಶಿಕ್ಷಿತರಾಗಿ ಕುಟುಂಬ ಹಾಗು ವ್ಯಯಕ್ತಿಕ ಘನತೆ ಗೌರವ ಹೆಚ್ಚಿಸಿಕೊಂಡು, ನೈತಿಕತೆ & ನಡೆತೆಯೊಂದಿಗೆ ತಮ್ಮನ್ನು ತಾವು ಉದ್ಧಾರ ಮಾಡಿಕೊಳ್ಳಬೇಕು. ಅದೇ ರೀತಿ ರೈತ ಮಹಿಳೆಯರು ಪ್ರತಿ ತಿಂಗಳ ಆದಾಯ ಬರುವಂತೆ ಋತುಗಳನ್ವಯ ಬೆಳೆಯುವ ಹೂವು ಹಣ್ಣು ಹಣ್ಣು ತರಕಾರಿ ತೋಟಗಾರಿಕೆ ಬೆಳೆೆಗಳಾದ ಫೇರು, ಮಾವು, ದಾಳಿಂಬೆ, ನಿಂಬೆ, ನುಗ್ಗೆಕಾಯಿ & ವಿವಿಧ ತರಹದ ಸೊಪ್ಪುಗಳನ್ನು ಬೆಳೆದು ನಿರಂತರ ಆದಾಯ ಗಳಿಸಿ, ರಾಯಚುರು ಜಿಲ್ಲೆ ಮಾನ್ವ ತಾಲ್ಲೂಕಿನ ಕವಿತಾಳ ಗ್ರಾಮದ ಕವಿತಾ ಉಮಾಶಂಕರವರಂತೆ ಮಾದರಿ ಕೃಷಿಕಳಾಗಿ ಬೆಳೆದು ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳುವಲ್ಲಿ ಉತ್ತರ ಕರ್ನಾಟಕದ ರೈತ ಮಹಿಳಾ ವೇದಿಕೆ ತೀವ್ರ ಹೋರಾಟ ಮಾಡಬೇಕು. ಈ ಹೋರಾಟಕ್ಕೆ ನಾನು ನಿರಂತರ ಸಂಪೂರ್ಣ ಸಹಕಾರ ಕೊಡುತ್ತೇನೇಂದರು.
ಅಧ್ಯಕ್ಷತೆ ವಹಿಸಿದ್ದ ಶೋಭಾ ಛಲವಾದಿ ನಾನು ಕಳೆದ 9 ವರ್ಷಗಳಿಂದ ರೈತ ಸಂಘಟನೆಯಲ್ಲಿ ಗುರುತಿಸಿಕೊಂಡು. ರಾಜ್ಯದ ತುಂಬ ಪ್ರಯಾಣ ಮಾಡಿ ಹಲವಾರು ರೀತಿಯ ಸಮಸ್ಯೆ ತೊಂದರೆ ಅನುಭವಿಸಿದ್ದೇನೆ ಆದರೂ ಸಹ ಸಂಘಟನೆಗೆ ಬೆನ್ನು ತೋರಿಸದೆ ಧೈರ್ಯದಿಂದ ಮುನ್ನುಗ್ಗಿ ನಿಮ್ಮೇಲ್ಲರ ಸಹಾಯ ಸಹಕಾರದಿಂದ ಇವತ್ತು ರಾಜ್ಯ ಮಟ್ಟದ ಮಹಿಳಾ ರೈತ ಸಂಘಟನೆ ಹುಟ್ಟು ಹಾಕಿ. ರೈತ ಹೆಣ್ಣು ಮಕ್ಕಳ, ಕೃಷಿ ಕೂಲಿಕಾರರ, ಸಣ್ಣ ರೈತರ, ಉದ್ಧಾರಕ್ಕಾಗಿ ಪಣ ತೊಟ್ಟು ಇವತ್ತು ನಿಮ್ಮ ಮುಂದೆ ನಿಂತಿದ್ದೆನೆ. ಈ ನನ್ನ ಕಾಯಕದಲ್ಲಿ ತಾವೆಲ್ಲರು ಸರ್ವ ರೀತಿಯ ಸಹಕಾರ ನೀಡಿ ಆಶಿರ್ವದಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಶೋಭಾ ಶಂಕರ ಯಡಳ್ಳಿ, ಲೀಲಾವತಿ ವಾಗಮೋಡೆ, ಚಿನ್ನವ್ವ ಶಿವಬಸಯ್ಯನವರ ಮಾದೇವಿ ಬೇಲೂರ, ಉಮಾ ಅಂಗಡಿ ಹಾಗೂ ಮಾದನಬಾವಿ ಮನಸೂರ ಮನಗುಂಡಿ ಮಮ್ಮಿಗಟ್ಟಿ ಕವಲಗೇರಿ ಗಂಜಿಗಟ್ಟಿ ಅಣ್ಣಿಗೇರಿ ಮಹಿಳಾಹೋರಾಟಗಾರರು ಉಪಸ್ಥಿತರಿದ್ದರು. ಉಮಾ ಅಂಗಡಿ ನಿರೂಪಿಸಿದರು. ಪಾಂಡುರಂಗ ಕಾಳೆ ನಿವೃತ್ತ ಶಿಕ್ಷಕರು ವಂದನಾರ್ಪಣೆ ಸಲ್ಲಿಸಿದರು.