ದಿ ೧೧ ರಂದು ಉತ್ತರ ಕರ್ನಾಟಕದ ಪಕ್ಕಾ ಜವಾರಿ ಸಿನಿಮಾ ‘ಲಕ್ಷ್ಯ’ ತೆರೆಗೆ
North Karnataka's Pakka Javari movie 'Lakshya' will hit the screens
ಕೊಪ್ಪಳ 10: ಉತ್ತರ ಕರ್ನಾಟಕದ ಪಕ್ಕ ಜವಾರಿ ಭಾಷೆ ಶೈಲಿಯ ಹಾಗೂ ಶಾಲಾ ಮಕ್ಕಳ ಕುರಿತು ಕಥಾಹಂದರ ಒಳಗೊಂಡ ಲಕ್ಷ್ಯ ಸಿನಿಮಾ ಇಂದಿನಿಂದ ರಾಜ್ಯದ 28 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡದ ಸಹ ನಿರ್ದೇಶಕ ಮಂಜುನಾಥ ಪೂಜಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿಗುರುವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಉತ್ತರಕರ್ನಾಟಕ ಮೂಲದಅರ್ಜುನ ಪಿ. ಡೊಣೂರಅವರು ‘ಲಕ್ಷ್ಯ’ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ‘ಸಾಮ್ರಾಟ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಲಕ್ಷ್ಯ ಸಿನಿಮಾ ‘ಇದೊಂದು ಮಕ್ಕಳ ಸಿನಿಮಾ.ಮಕ್ಕಳು ಯಾವ ವಿಷಯಕ್ಕೆ ಲಕ್ಷ್ಯಕೊಡುತ್ತಾರೆ, ಅದರಿಂದಏನಾಗುತ್ತದೆಎಂಬುದೇ ಈ ಸಿನಿಮಾದಕಥೆ.ಸಂಪೂರ್ಣಉತ್ತರಕರ್ನಾಟಕದ ಭಾಷೆ ಈ ಸಿನಿಮಾದಲ್ಲಿದೆ.ಇಲ್ಲಿನಕಲಾವಿದರೇ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಕ್ಕಳ ಚಿತ್ರಆದ್ದರಿಂದ ಬಹುತೇಕ ಮಕ್ಕಳೇ ಇದರಲ್ಲಿ ಪ್ರಧಾನ ಪಾತ್ರಗಳನ್ನು ಮಾಡಿದ್ದಾರೆ’ ಎಂದು ಹೇಳಿದರು.ಲಕ್ಷ್ಯ’ ಸಿನಿಮಾದ 3 ಹಾಡುಗಳಿಗೆ ಆರವ್ ರಿಶಿಕ್ ಅವರು ಸಂಗೀತ ಸಂಯೋಜಿಸಿದ್ದಾರೆ. ಡಾ. ದೊಡ್ಡರಂಗೇಗೌಡ, ಶಂಕರ ಪಾಗೋಜಿ ಹಾಗೂ ಶಿವಾನಂದ ಭೂಶಿ ಅವರು ಸಾಹಿತ್ಯ ಬರೆದಿದ್ದಾರೆ. ಅನಿರುದ್ದ ಶಾಸ್ತ್ರೀ, ಚೇತನ್ ನಾಯಕ್, ಮದ್ವೇಶ್ ಭಾರದ್ವಾಜ್ ಮುಂತಾದವರು ಹಾಡುಗಳು ಧ್ವನಿಯಾಗಿದ್ದಾರೆ. ಎಂ.ಬಿ. ಅಳ್ಳಿಕಟ್ಟಿ ಅವರಛಾಯಾಗ್ರಹಣ, ಆರ್.ಮಹಾಂತೇಶ್‌ಅವರ ಸಂಕಲನ ಈ ಚಿತ್ರಕ್ಕಿದೆ ಎಂದರು.
ಉತ್ತರ ಕರ್ನಾಟಕದ ಬಾಗಲಕೋಟೆ, ಕೂಡಲ ಸಂಗಮ ಸುತ್ತಮುತ್ತ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ.ಸುಮಾರು 80 ಲಕ್ಷ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ.ಬೆಂಗಳೂರಿನ ಸ್ವಪ್ನ ಮತ್ತು ಕೊಪ್ಪಳದ ಶಿವ ಚಿತ್ರ ಮಂದಿರ ಸೇರಿದಂತೆರಾಜ್ಯದ 28 ಚಿತ್ರ ಮಂದಿರಗಳಲ್ಲಿ ಲಕ್ಷ್ಯ ಸಿನಿಮಾತೆರೆಗೆ ಅಪ್ಪಳಿಸಲಿದೆ. ಶಾಲಾ ಮಕ್ಕಳ ಮತ್ತು ಕೌಟುಂಬಿಕ ಸಿನಿಮಾವನ್ನು ರಾಜ್ಯದ ಜನತೆ ಕೈಹಿಡಿದುಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಶಹಾಪುರ, ಕಲಾವಿದರಾದ ಮಾಸ್ಟರ್‌ತೇಜಸ್ ಪೂಜಾರ, ಗೀತಾ ಎಂ. ಪೂಜಾರ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 