ಉತ್ತರ ಬುರ್ಕಿನಾ ಫಾಸೊ: ಭಯೋತ್ಪಾದನಾ ದಾಳಿಗೆ 40 ಸಾವು

ಮಾಸ್ಕೋ, ಜ 29 :        ಉತ್ತರ ಬುರ್ಕಿನಾ ಫಾಸೊದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸುಮಾರು 40 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.

 ಸ್ಥಳೀಯರ ಪ್ರಕಾರ 4 ದಿನಗಳ ಹಿಂದೆ ಜನವರಿ 25 ರಂದು ಸೌಮ್ ಪ್ರಾಂತ್ಯದ ಸಿಲ್ಗಡ್ಜಿ ಎಂಬ ಹಳ್ಳಿಯಲ್ಲಿ ಈ ದಾಳಿ ನಡೆಸಲಾಗಿದೆ. 

 "ಈ ಪ್ರದೇಶದಲ್ಲಿ ನಮ್ಮ ಭದ್ರತೆ ಮತ್ತು ರಕ್ಷಣಾ ಪಡೆಗಳ ಕಾರ್ಯಾಚರಣೆಯನ್ನು ಅನುಸರಿಸಿ, ಈ ಹೇಡಿತನ ಮತ್ತು ಅನಾಗರಿಕ ದಾಳಿ ನಡೆಸಲಾಗಿದೆ.  ತತ್ಪರಿಣಾಮ 40 ನಾಗರಿಕರು ಬಲಿಯಾಗಿದ್ದಾರೆ” ಎಂದಿರುವ ಸರ್ಕಾರ ಮೃತರ ಸಂಬಂಧಿಕರಿಗೆ ಸಂತಾಪ ಸೂಚಿಸಿದೆ.

 ಆಗಸ್ಟ್ 2014 ರಿಂದ, ಬೊಕೊ ಹರಾಮ್ ದಂಗೆಕೋರರನ್ನು ಗುರಿಯಾಗಿರಿಸಿಕೊಂಡು  ಆಫ್ರಿಕಾದ ಸಾಹೇಲ್ ಪ್ರದೇಶದಲ್ಲಿ ಫ್ರಾನ್ಸ್ ಸಹಯೋಗದೊಡನೆ ಸೇನಾ ಕಾರ್ಯಾಚರಣೆ ನಸಲಾಗಿದೆ. ಬೊಕೊ ಹರಾಮ್ ದಂಗೆಕೋರರು ಮಾರ್ಚ್ 2015 ರಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿಗೆ (ರಷ್ಯಾದಲ್ಲಿ ನಿಷೇಧಿಸಲಾಗಿದೆ) ನಿಷ್ಠವಾಗಿರುವುದಾಗಿ ಪ್ರತಿಜ್ಞೆ ಮಾಡಿದೆ.