ಅಮ್ಮಿನಬಾವಿ ಜಿನಾಲಯದಲ್ಲಿ ನೋಪಿ ಕಾರ್ಯಕ್ರಮ

ಅಮ್ಮಿನಬಾವಿ ಜಿನಾಲಯದಲ್ಲಿ ನೋಪಿ ಕಾರ್ಯಕ್ರಮ Nopi program at Amminabawi Jinalaya

ಧಾರವಾಡ, 24 : ತಾಲೂಕಿನ ಅಮ್ಮಿನಬಾವಿಯ 1008 ನೇಮಿನಾಥ ಜಿನಾಲಯದಲ್ಲಿ ಷೋಡಶ ಕಾರಣ ನೋಪಿ ಕಾರ್ಯಕ್ರಮ ರವಿವಾರ ಪ್ರಾರಂಭವಾಯಿತು. ಶ್ರೀ 105 ಗಣನಿ ಆರ್ಯಿಕಾ ರತ್ನ ಜಿನುವಾಣಿ ಮಾತಾಜಿ ಸಾನಿಧ್ಯದಲ್ಲಿ ನೋಪಿ ಕಾರ್ಯಕ್ರಮವನ್ನು ಜೈನ್ ಸಮಾಜದ ಅಧ್ಯಕ್ಷ ಟಿ. ಎಂ. ದೇಸಾಯಿ ಉದ್ಘಾಟಿಸಿದರು. 16 ದಿನಗಳ ಅವಧಿಯ ಈ ನೋಪಿ ಕಾರ್ಯಕ್ರಮದಲ್ಲಿ 30 ಜನ ಶ್ರಾವಕ-ಶ್ರಾವಕಿಯರು ಪಾಲ್ಗೊಂಡು ಶೃದ್ಧಾ-ಭಕ್ತಿಯಿಂದ ಜೈನ್ ಧರ್ಮದ ಆಚರಣೆಗಳಲ್ಲಿ ಬದ್ಧತೆಯಿಂದ ಪಾಲ್ಗೊಳ್ಳುವರು.  

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಆರ್ಯಿಕಾ ರತ್ನ ಜಿನುವಾಣಿ ಮಾತಾಜಿ, ನೋಪಿಯ ಬಹು ಮುಖ್ಯ ಉದ್ದೇಶ ಆತ್ಮಕಲ್ಯಾಣವೇ ಆಗಿದೆ. ಅಂತರಂಗ ಶುದ್ಧಿಯನ್ನು ಕೇಂದ್ರೀಕರಿಸಿ ನಡೆಯುವ ನೋಪಿಯಲ್ಲಿ ಜೈನ್ ಧರ್ಮದ ಸೈದ್ಧಾಂತಿಕ ತತ್ವಗಳ ವೃತಾಚರಣೆ ನಡೆಯುತ್ತಿದ್ದು, 16 ವಿಧದ ಭಾವನೆಗಳ ಶುದ್ಧಿಯೊಂದಿಗೆ ಮೋಕ್ಷ ಮಾರ್ಗದತ್ತ ತೆರೆದುಕೊಳ್ಳುವುದು ನೋಪಿಯ ಗುರಿಯಾಗಿದೆ ಎಂದರು. ಆರ್ಯಿಕಾ ಶ್ರೀವಿನಮ್ರಜ್ಯೋತಿ ಮಾತಾಜಿ, ಕ್ಷುಲ್ಲಿಕಾ ಶ್ರೀಅಮೃತಜ್ಯೋತಿ ಮಾತಾಜಿ, ಕ್ಷುಲ್ಲಿಕಾ ಶ್ರೀಅಚಲಜ್ಯೋತಿ ಮಾತಾಜಿ ಇದ್ದರು.  

ಪಂಚಾಮೃತ ಅಭಿಷೇಕ : ನೋಪಿ ನಡೆಯುವ 16 ದಿನಗಳ ಅವಧಿಯಲ್ಲಿ ನಿತ್ಯವೂ ಪ್ರಾತಃಕಾಲ 4-30 ಗಂಟೆಗೆ ಜಿನಾಲಯದಲ್ಲಿಯ ಚೌವ್ವೀಸ್ ತೀಥಂರ್ಕರರ ಶಿಲಾ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮತ್ತು ವಿಧಿ ವಿಧಾನಗಳು ನಿರಂತರ ನಡೆಯಲಿವೆ. ಕಾರ್ಯಕ್ರಮದಲ್ಲಿ ಮಂಜುನಾಥ್ ಅಂಗಡಿ, ಬ್ರಹ್ಮಕುಮಾರ್ ದೇಸಾಯಿ, ಶ್ರೇಯಾಂಶ ದೇಶಾಯಿ, ಪಾರ್ಶ್ವನಾಥ ದೇಸಾಯಿ, ಮಹಾವೀರ ಲೋಕೂರ, ತ್ರಿಶಲಾಮಾತಾ ಮಹಿಳಾ ಮಂಡಳದ ರಾಜೇಶ್ವರಿ ಪತ್ರಾವಳಿ, ಸುರೇಖಾ ಭಾವಿ, ಲತಾ ದೇಸಾಯಿ, ಪತ್ಮಾವತಿ ಲೋಕೂರ, ಸಾವಿತ್ರಿ ದೇಸಾಯಿ, ತನುಜಾ ರೋಖಡೆ, ಮಂಜುಳಾ ಸಕ್ರಿ, ಸರೋಜಿನಿ ಜೈನ್ ಶ್ರಾವಕಿಯರು ಭಾಗವಹಿಸಿದ್ದರು. ಜಿನಾಲಯದ ಅರ್ಚಕ ಸುನೀಲ ಉಪಾಧ್ಯೆ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.