ವಿಶೇಷ ಚೇತನರ ಮಕ್ಕಳ ಅಸಾಂಸ್ಥಿಕ ಪುನರ್ವಸತಿ ಜಾಥಾ ಕಾರ್ಯಕ್ರಮ

ವಿಶೇಷ ಚೇತನರ ಮಕ್ಕಳ ಅಸಾಂಸ್ಥಿಕ ಪುನರ್ವಸತಿ ಜಾಥಾ ಕಾರ್ಯಕ್ರಮ Non-institutional rehabilitation Jatha program for children with special needs

ಗದಗ 12 : ಪ್ರತಿ ವರ್ಷದಂತೆ ಈ ವರ್ಷವು ದಿನಾಂಕ 12 ರಂದು ರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. 2025-26 ನೇ ಸಾಲಿನ ದತ್ತು ಮಾಸಾಚರಣೆ ಮತ್ತು ಮಕ್ಕಳ ಮಾಸ ಪ್ರಯುಕ್ತ “ವಿಶೇುುಷಚೇತನರ ಮಕ್ಕಳ ಅಸಾಂಸ್ಥಿಕ ಪುರ್ನರವಸತಿ” ಎಂಬ ಶೀರ್ಷಿಕೆಯಡಿ ಜಿಲ್ಲಾಡಳಿತ ಕಛೇರಿಯಿಂದ ಟಿಪ್ಪು ಸುಲ್ತಾನ ವೃತ್ತದ ವರೆಗೆ ಜಾಥಾವನ್ನು ಹಮ್ಮಿಕೊಳಲಾಗಿದ್ದು ಈ ಕಾರ್ಯಕ್ರಮವನ್ನು ಮಾನ್ಯಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾಗಿರುವಂತಹ   ರಫೀಕಾ ಹಳ್ಳೂರ ರವರು ಕಾರ್ಯಕ್ರಮದ ವಿಶೇಷ ಆಹ್ವಾನಿತರಿಗೆ ಸಸಿ ನೀಡಿ ಸ್ವಾಗತಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಂತರ ಕಾರ್ಯಕ್ರಮವನ್ನು ಹಸಿರು ನೀಶಾನೆಯನ್ನು ತೊರಿಸುವ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಾಗಿರುವಂತಹ ಸಿ.ಎನ್ ಶ್ರೀಧರ ರವರು ಕಾರ್ಯಕ್ರಮದ ಕುರಿತು ಉದ್ಘಾಟನೆಯ ನುಡಿಗಳನ್ನಾಡಿದ್ದು ಅವರು ಇವತ್ತಿನ ದಿನ ವಿಶೇಷ ದಿನವಾಗಿದ್ದು ಮಕ್ಕಳನ್ನು ದತ್ತು ತೆಗೆದುಕೊಳುವುದು ಸಾಮಾನ್ಯವಾಗಿದ್ದು ಅದರಲ್ಲಿ ವಿಶೇಷ ಚೇತನ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಯಾವುದೇ ಪಾಲಕರು ಮುಂದೆಬರುವುದಿಲ್ಲ ಆದರೇಅದೇ ವಿಶೇಷ ಚೇತನ ಮಗು ತಮಗೆ ಜನಿಸಿದರೆ. ಆ ಮಗುವನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳುತ್ತಾರೆ.ಈ ಮನಸ್ಥಿತಿಯಿಂದ ಹೊರಬಂದು ವಿಶೇಷ ಚೇತನ ಮಗುವನ್ನು ಸಹ ದತ್ತು ತೆಗೆದುಕೊಳ್ಳುವುದಕ್ಕೆ ಮಕ್ಕಳಿಲ್ಲದ ದಂಪತಿಗಳು ಮುಂದೆ ಬಂದರೆ, ನಿಜವಾಗಿಯೂ ಈಕಾರ್ಯಕ್ರಮವನ್ನು ಮಾಡಿರುವುದಕ್ಕೆ ಸಾರ್ಥಕವಾಗುತ್ತದೆಎಂದು ಹೇಳುವುದರ ಮೂಲಕ ಕಾರ್ಯಕ್ರಮದಕುರಿತು ಒಳ್ಳೆಯ ಪ್ರಶಂಸೆಯನ್ನು ನೀಡಿದರು. 

ಅದೇರೀತಿಯಾಗಿಕಾರ್ಯಕ್ರಮದಕುರಿತು ಮಾನ್ಯ ಉಪ ಕುಲಪತಿಗಳು ವಿಶೇಷ ಚೇತನ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಆ ಮಕ್ಕಳಿಗೆ ಜಿಲ್ಲಾ ಪಂಚಾಯತಿಯಿಂದ ಸಾಕಷ್ಟು ಅನುದಾನ ಕಾಯ್ದಿರಿಸಿದ್ದು ಆ ಮಕ್ಕಳಿಗೆಚಿಕ್ಸಿತೆಯನ್ನು ನೀಡುಲಾಗುವುದು.ಈ ಮಾಹಿತಿಯುಪಾಲಕರಿಗೆ ತಿಳಿದಿರುವುದಿಲ್ಲ ಆದ್ದರಿಂದಗ್ರಾಮೀಣ ಮತ್ತು ಪಂಚಾಯತರಾಜ್ ವಿಶ್ವ ವಿದ್ಯಾಲಯದಲ್ಲಿ ವಿಶೇಷ ಚೇತನ ಮಕ್ಕಳ ಚಿಕ್ಸಿತೆಗೆಒಂದುಘಟಕವನ್ನು ಸ್ಥಾಪಿಸಿದ್ದು ಸಾರ್ವಜನಿಕರುಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.ನಂತರ ಮಕ್ಕಳ ಕಲ್ಯಾಣ ಸಮಿತಿಯಅಧ್ಯಕ್ಷರಾದ   ಜಯದೇವಿ ಕವಲೂರರವರು ಮಾತನಾಡಿಇವತ್ತಿನ ದಿನ ತುಂಬಾ ವಿಶಿಷ್ಠ ದಿನವಾಗಿದ್ದು ಪಾಲಕರು ಆರೋಗ್ಯವಂತರಾಗಿರುವಂತಹ ಮಕ್ಕಳನ್ನು ದತ್ತು ತೆಗೆದುಕೊಳುತ್ತಿದ್ದು ದುರಾದೃಷ್ಟವೆಂದರೆ. ವಿಶೇಷ ಚೇತನ ಮಕ್ಕಳನ್ನು ದತ್ತು ತೆಗೆದುಕೊಳುವುದಕ್ಕೆ ಯಾರು ಮುಂದೆ ಬರುತ್ತಿಲ್ಲಆದ್ದರಿಂದ ಸಾರ್ವಜನಿಕರಿಗೆ ಇನಷ್ಟು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳುವುದು ಅವಶ್ಯಕವಾಗಿದ್ದು ವಿಶೇಷ ಮಕ್ಕಳಿಗೂ ಕೂಡಾದತ್ತು ಪಡೆದುಕೊಳುವಂತೆ ನೋಡಿಕೊಳಬೇಕು ಅವರನ್ನುಕೂಡಾ ಸಮಾಜದ ಮುಖ್ಯವಾಹಿನಿಗೆ ತರಬೇಕಾದದ್ದು ಸಮಾಜದ ಎಲ್ಲರಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ.  

ಕಾರ್ಯವನ್ನುಮಹಿಳಾ ಮತ್ತು ಮಕ್ಕಳಅಭಿವೃದ್ಧಿಇಲಾಖೆಯವರುಉತ್ತಮವಾಗಿಕಾರ್ಯ ನಿರ್ವಹಿಸುತ್ತಿದ್ದಾರೆಂದು ಅಭಿನಂದಿಸಿದರು.ನಂತರ ಜಿಲ್ಲಾಡಳಿತ ಕಛೇರಿಯಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ಜಾಥಾವನು ಕೈಗೊಂಡು ಮಾನವ ಸರಪಳಿಯನ್ನು ನಿರ್ಮಿಸಿ ವಿದ್ಯಾರ್ಥಿಗಳು ದತ್ತು ಮಾಸಾಚರಣೆಯ ಸಂಕಲ್ಪವನ್ನು ಮಾಡಲಾಯಿತು.ಈ ಒಂದು ಜಾಥಾ ಕಾರ್ಯಕ್ರಮದಲ್ಲಿ ಮಾನ್ಯಜಿಲ್ಲಾ ಅಧಿಕಾರಿಗಳು, ಮಾನ್ಯಅಪರಜಿಲ್ಲಾ ಅಧಿಕಾರಿಗಳು, ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಭಾಗವಹಿಸಿದರು.