ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ನೋಡಲ್ ಅಧಿಕಾರಿ ಭೇಟಿ ಪರೀಶೀಲನೆ

ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ನೋಡಲ್ ಅಧಿಕಾರಿ ಭೇಟಿ ಪರೀಶೀಲನೆ Nodal officer visits and inspects agricultural implement sales outlets

ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ನೋಡಲ್ ಅಧಿಕಾರಿ ಭೇಟಿ ಪರೀಶೀಲನೆ 

ರಾಯಬಾಗ, 01 ; ತಾಲೂಕಿನ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಗುರುವಾರ ತಾಲೂಕು ನೋಡಲ್ ಅಧಿಕಾರಿ ಲೀಲಾ ಕೌಜಗೇರಿ ಭೇಟಿ ನೀಡಿ, ರಸಗೊಬ್ಬರ ದಾಸ್ತಾನವನ್ನು ಪರೀಶೀಲಿಸಿದರು.   

ಬಳಿಕ ಮಾತನಾಡಿದ ಅವರು, ತಾಲೂಕಿನಲ್ಲಿ ಮುಂಗಾರಿನ ಕೃಷಿ ಚಟುವಟಿಕೆಗಳು ಚುರುಕಾಗಿದ್ದು, ಮಳಿಗೆಗಳಲ್ಲಿ ಮಾರಾಟಗಾರರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡಲು ಸೂಚಿಸಿದರು. ಭೌತಿಕ ಮತ್ತು ಪಿಒಎಸ್ ದಾಸ್ತಾನುಗಳಲ್ಲಿ ವ್ಯತ್ಯಾಸವಾಗದಂತೆ ವ್ಯವಹರಿಸಲು ನಿರ್ದೇಶಿಸಿದ ಅವರು, ರಸಗೊಬ್ಬರ ಭೌತಿಕ ದಾಸ್ತಾನು ದರವನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಆದೇಶಿಸಿದರು. ಬೆಳೆಗಳಿಗೆ ಕಡ್ಡಾಯವಾಗಿ ಸಮಗ್ರ ಪೋಷಕಾಂಶಗಳನ್ನು ಪೂರೈಸಲು ಹಾಗೂ ಅತಿಯಾದ ಸಾರಜನಕ (ಯೂರಿಯಾ) ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ರೈತರಿಗೆ ಅರಿವು ಮೂಡಿಸಲು ಕೃಷಿ ಇಲಾಖೆಯೊಂದಿಗೆ ಕೈಜೋಡಿಸಬೇಕು. ಹೆಚ್ಚಿನ ದರದಲ್ಲಿ ಹಾಗೂ ಕಳಪೆ ರಸಗೊಬ್ಬರಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಳಿಗೆಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.  

ಕೃಷಿ ಇಲಾಖೆಯಿಂದ 3 ತಂಡಗಳನ್ನು ರಚಿಸಿ, ಎಲ್ಲಾ ರಸಗೊಬ್ಬರ ಮಳಿಗೆಗಳಿಗೆ ಭೇಟಿ ದಾಸ್ತಾನು ಪರೀಶಿಲನೆ ನಡೆಸಲಾಯಿತು. ಸಹಾಯಕ ಕೃಷಿ ನಿರ್ದೆಶಕ ವಿನೋದ ಮಾವರಕರ, ಕೃಷಿ ಅಧಿಕಾರಿಗಳಾದ ರಾಜೇಂದ್ರ ದತ್ತವಾಡೆ ಹಾಗೂ ರಘುನಾಥ ಪಾಟೀಲ ಇದ್ದರು.