ಸೇವಾಲಾಲ್ ಜಯಂತಿಗೆ ಸರ್ಕಾರದಿಂದ ಅನುದಾನ ಬಂದಿಲ್ಲ : ಗವಿಸಿದ್ದಪ್ಪ ಅಸಮಾಧಾನ
No government funding for Sevalal Jayanti: Gavisiddappa unhappy
ಲೋಕದರ್ಶನ ವರದಿ
ಕಂಪ್ಲಿ:15 ಬಂಜಾರ ಸಮುದಾಯಕ್ಕೆ ಸ್ವಾಭಿಮಾನದ ಬದಕು ಜೊತೆಗೆ ಮತ್ತು ಸಾಮಾಜಿಕ ಸಮಾನತೆಯನ್ನು ಕಲಿಸಿದ ಮಹಾನ್ ಸಂತ ಸೇವಲಾಲ್‌ಎಂದು ಕಂದಾಯ ನೀರೀಕ್ಷಕ ಜಗದೀಶ ಹೇಳಿದರು.ಸ್ಥಳೀಯ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ಸ ಸಂತ ಸೇವಲಾಲ್ ಜಯಂತ್ಯೋತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ . ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ ಎಂದರು.ಸಹ ಶಿಕ್ಷಕ ರಾಜನಾಯ್ಕ ಮಾತನಾಡಿ, ಅಳಿವಿನ ಹಂಚಿನಲ್ಲಿರುವ ಬಂಜಾರ ಸಮುದಾಯದ ಸಂಸ್ಕೃತಿಯನ್ನು ಮೇಲೆತ್ತುವ ಕೆಲಸವಾಗಬೇಕು. ದೈವಿಕ ಶಕ್ತಿ ಜತೆಗೆ ಸಮಾಜದ ಉನ್ನತಿಗೆ ಸಂತ ಸೇವಾಲಾಲ್ ಕೊಡುಗೆ ದೊಡ್ಡದಿದೆ. ನಮ್ಮ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು. ನಂತರ ಬಂಜಾರ ಸಮಾಜದ ಅಧ್ಯಕ್ಷ ಆರ್.ಕೆ.ಗವಿಸಿದ್ದಪ್ಪ ಮಾತನಾಡಿ,
ಬಂಜಾರ ಸಮುದಾಯದ ಅಭಿವೃದ್ಧಿ ವಿಶೇಷ ಯೋಜನೆಗಳನ್ನು ರೂಪಿಸುವ ಜೊತೆಗೆ ನಮ್ಮ ಸಂಸ್ಕೃತಿಯನ್ನು ನಾಡಿನುದ್ದಕ್ಕೂ ಹೆಚ್ಚಿನ ಮಟ್ಟದಲ್ಲಿ ಪಸರಿಸುವ ಮೂಲಕ ಬೆಳಕಿಗೆ ತರಬೇಕು. ಸಂತ ಸೇವಾಲಾಲ್ ಜಯಂತಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸುಗ್ಗೇನಹಳ್ಳಿ ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ನಾಯ್ಕ, ಎಪ್ ಡಿ.ಸಿ ಮಾಲತೇಶ ಸಮಾಜದ ಮುಖಂಡರಾದ ನಿಂಗಪ್ಪ ಕೆ, ಬಸವರಾಜ ಪವರ್, ಪುಂಡಲಿಕಪ್ಪ ರಾಥೋಡ್, ಲಿಂಬಪ್ಪ ರಾಥೋಡ್, ಹನುಂತಪ್ಪ ಚೌಹಾಣ್, ಗುಂಡನಾಯಕ ಚೌಹಾಣ್, ಚಂದ್ರ್ಪ, ಜ್ಯೋತಿ ಗುಂಡನಾಯ್ಕ್, ಗಂಗಾದರ, ರವಿ, ಕಾಳಪ್ಪ, ನೀಲಮ್ಮ, ಯಮನಪ್ಪ, ಭೀಮವ್ವ, ಮಲ್ಲಿಕಾರ್ಜುನ ಹಾಗೂ ಸಮಾಜದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 