ಯಾದಗಿರಿಯಲ್ಲಿ ಕೊರೋನಾ ಸೋಂಕಿನ ಪ್ರಕರಣ ದಾಖಲಾಗಿಲ್ಲ: ಜಿಲ್ಲಾಧಿಕಾರಿ

ಯಾದಗಿರಿ, ಏ.10, ಜಿಲ್ಲೆಯಲ್ಲಿ ತಬ್ಲೀಘಿ ಪ್ರಕರಣದ ಐವರು ಸೇರಿದಂತೆ  ಇದುವರೆಗೂ 42 ಜನರ ಗಂಟಲು ಮಾದರಿ ಪ್ರಯೋಗಾಲಯ ವರದಿ ನೆಗಟಿವ್ ಎಂದು ಬಂದಿದ್ದು,  ಗುರುವಾರ ಹೊಸದಾಗಿ 9 ಜನರ ಗಂಟಲು ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ಅಪರ  ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್ ತಿಳಿಸಿದ್ದಾರೆ.ಯಾದಗಿರಿ ಜಿಲ್ಲೆಯಲ್ಲಿ  ವಿದೇಶದಿಂದ ಬಂದ 71 ಜನರನ್ನು ಹೋಮ್‍ಕ್ವಾರಂಟೈನ್ ಮಾಡಲಾಗಿದ್ದು, ಇವರಲ್ಲಿ 46 ಜನರು  28 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇವರಲ್ಲಿ ಯಾರಿಗೂ ಸೋಂಕಿನ  ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ  ಇದುವರೆಗೆ ಯಾವುದೇ ಖಚಿತ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿರುವುದಿಲ್ಲ. ವೈರಸ್ ತಡೆಗೆ  ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು  ಆತಂಕಪಡಬಾರದು ಅವರು ಮನವಿ ಮಾಡಿದ್ದಾರೆ.