ಎವರೆಸ್ಟ ಶಿಖರ ಹತ್ತುವ ಮೂಲಕ ಅಥಣಿಯ ಗೌರವ ಹೆಚ್ಚಿಸಿದ ನಿಯಾಜಹ್ಮದ

ಎವರೆಸ್ಟ ಶಿಖರ ಹತ್ತುವ ಮೂಲಕ ಅಥಣಿಯ ಗೌರವ ಹೆಚ್ಚಿಸಿದ ನಿಯಾಜಹ್ಮದ  Niyazahmada, who raised the prestige of the state by climbing Mount Everest

ಅಥಣಿ 14: ಗ್ರಾಮೀಣ ಕ್ರೀಡೆಗಳೇ ಹಿಮಾಲಯ ಪರ್ವತ ಶ್ರೇಣಿಯ ಎವರೆಸ್ಟ ಶಿಖರ ಏರಲು ನನಗೆ ಸಹಕಾರಿಯಾದವು ಎಂದು ಶಿಖರಾರೋಹಿ ನಿಯಾಜಹ್ಮದ ಶಹಜಹಾನ ಡೊಂಗರಗಾಂವ ಹೇಳಿದರು.  

ಅವರು ಐಗಳಿ ಗ್ರಾಮದಲ್ಲಿ ಬಾಲ್ಯದ ಗೆಳೆಯರ ಮತ್ತು ಗ್ರಾಮದ ಹಿರಿಯರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ನಾನು ಒಂದನೇ ತರಗತಿಯಿಂದ ಆರನೇ ತರಗತಿ ಶಾಲೆಯನ್ನು ಐಗಳಿ ಗ್ರಾಮದಲ್ಲಿ ಕಲಿಯುವಾಗ ನಮ್ಮ ಗುರುಗಳು ನಮಗೆ ಅನೇಕ ಗ್ರಾಮೀಣ ಕ್ರೀಡೆಗಳನ್ನು ಆಡಿಸುತ್ತಿದ್ದರು. ಈ ಎಲ್ಲ ಕ್ರೀಡೆಗಳು ನನಗೆ ವಿಶ್ವದ ಅತೀ ಎತ್ತರದ ಎವರೆಸ್ಟ್‌ ಶಿಖರ ಹತ್ತುವಾಗ ನನಗೆ ಸಹಕಾರಿಯಾದವು.  ಎವರೆಸ್ಟ್‌ ಶಿಖರ ಹತ್ತುವ ಹಂಬಲ ನಮ್ಮಲ್ಲಿದ್ದರೆ ಪ್ರಾಥಮಿಕ ಶಾಲಾ ಹಂತದಿಂದಲೇ ಪ್ರಯತ್ನ ಮಾಡಬೇಕು ಎಂದ ಅವರು, ಎವರೆಸ್ಟ್‌ ಶಿಖರ ಹತ್ತುವಾಗ ಕ್ಷಣ ಕ್ಷಣಕ್ಕೂ ಕಷ್ಟಗಳು ಮತ್ತು ಅಪಾಯಗಳು ಬರುತ್ತವೆ. ಇವುಗಳನ್ನು ಮೀರಿ ನಾವು ನಮ್ಮ ಗುರಿಯತ್ತ ಸಾಗಬೇಕು ಆಗ ಮಾತ್ರ ಶಿಖರ ಹತ್ತಲು ಸಾಧ್ಯವಾಗುತ್ತದೆ ಎಂದರು. ಎವರೆಸ್ಟ್‌ ಶಿಖರ ಹತ್ತುವ ಆಕಾಂಕ್ಷಿಗಳಾಗಿದ್ದಲ್ಲಿ ಮಧ್ಯಪಾನ, ಧೂಮ ಪಾನ, ತಂಬಾಕು ಸೇವನೆಯನ್ನು ಬಿಟ್ಟು ಬಿಡಬೇಕು ಇಲ್ಲದೇ ಹೋದಲ್ಲಿ ಎವರೆಸ್ಟ್‌ ಹತ್ತುವಾಗ ಊಸಿರಾಟದ ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ಅರ್ಧಕ್ಕೆ ನಮ್ಮ ಪಯಣ ಮೊಟಕುಗೊಳಿಸಬೇಕಾದ ಸಂದರ್ಭ ಬಂದರೂ ಆಶ್ಚರ್ಯ ಇಲ್ಲ. ಹೀಗಾಗಿ ಮಧ್ಯಪಾನ, ಧೂಮ ಪಾನ, ತಂಬಾಕು ಸೇವನೆಯಂತಹ ದುಶ್ಚಟಗಳಿಂದ ದೂರ ಉಳಿಯಬೇಕು ಎಂದರು.ವೃತ್ತಿಯಿಂದ ಸಾಫ್ಟವೇರ ಇಂಜನೀಯರಾಗಿ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ನನಗೆ ಚಿಕ್ಕವನಿಂದಲೇ ಸಾಹಸ ಪ್ರವೃತ್ತಿ ಹೊಂದಿದ್ದೆ ಹೀಗಾಗಿ ನಾನು ವಿಶ್ವದ ಅತೀ ಎತ್ತರದ ಶಿಖರ ಎವರೆಸ್ಟ್‌ ನ್ನು ಹತ್ತಲು ಸಾಧ್ಯವಾಯಿತು ಎಂದ ಅವರು ನನ್ನ ಈ ಚಿಕ್ಕ ಸಾಧನೆಯನ್ನು ಗುರುತಿಸಿ ನನ್ನ ಬಾಲ್ಯದ ಗೆಳೆಯರು, ಗುರು, ಹಿರಿಯರು ಗೌರವ ಸತ್ಕಾರ ಮಾಡಿರುವುದು ನನ್ನ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದರು. 

ಇದೇ ಸಂದರ್ಭದಲ್ಲಿ ಡೊಂಗರಗಾಂವ ಇವರನ್ನು ಗ್ರಾಮ ಪಂಚಾಯತ ಪರವಾಗಿ, ಸಹ ಪಾಠಿಗಳು, ಗುರು, ಹಿರಿಯರು ಆತ್ಮೀಯವಾಗಿ ಸತ್ಕರಿಸಿದರು.  

ಕಾರ್ಯಕ್ರಮದಲ್ಲಿ ಶೇಖರ ನೇಮಗೌಡ, ಅಪ್ಪಾಸಾಹೇಬ ಪಾಟೀಲ, ನೂರಹ್ಮದ್ ಡೊಂಗರಗಾಂವ, ಶಿವು ಸಿಂಧೂರ, ಆರ್‌.ಆರ್‌.ತೆಲಸಂಗ, ಬಾಳ ಮುಜಾವರ, ಜಗು ತೆಲಸಂಗ, ಬಂದೇನವಾಜ ಮುಜಾವರ,  ರಫಿಕ್ ನದಾಫ, ಮಕಬುಲ್ ಸಾಬ ಮುಜಾವರ, ಬದರುದ್ದಿನ ಕೊರಬು, ಶೌಕತಲಿ ಮುಜಾವರ, ಅಪ್ಪಾಸಾಹೇಬ ಮಾಕಾಣಿ, ಗಣೇಶ ಪೂಜಾರಿ, ಪ್ರಕಾಶ ಪಾಟೀಲ, ಪ್ರಲ್ಹಾದ ಪಾಟೀಲ, ರಿಯಾಜಹ್ಮದ ಡೊಂಗರಗಾಂವ, ಸೋಮಶೇಖರ ಜೇರೆ, ಕೇದಾರಿ ವಳಸಂಗ, ಅಪ್ಪಾಸಾಬ ತೆರದಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.