ಬೈಲಹೊಂಗಲ ತಾಲೂಕಿಗೆ ತೃತೀಯ ಸ್ಥಾನ ಪಡೆದ ನಿಸರ್ಗಾ ಹುದ್ದಾರಗೆ ಸನ್ಮಾನ

ಬೈಲಹೊಂಗಲ ತಾಲೂಕಿಗೆ ತೃತೀಯ ಸ್ಥಾನ ಪಡೆದ ನಿಸರ್ಗಾ ಹುದ್ದಾರಗೆ ಸನ್ಮಾನ Nisarga Huddar, who secured third place in Bailahongala Taluk, was felicitated

ನೇಸರಗಿ 27 : ಮಲ್ಲಾಪುರ- ಗ್ರಾಮದ ರೇವಣಸಿದ್ದೇಶ್ವರ  ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರಿ ನಿಸರ್ಗಾ ಮಹೇಶ ಹುದ್ದಾರ ಶೇ. 98.56ಅ ಅಂಕ ಗಳಿಸಿ ಬೈಲಹೊಂಗಲ ತಾಲೂಕಿಗೆ ತೃತೀಯ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿನಿಗೆ  ಪರಮ ಪೂಜ್ಯ ಚಿದಾನಂದ ಸ್ವಾಮಿಗಳು ಹಾಗೂ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ   ಬಿ. ಡಿ. ಹಿರೇಮಠ, ಕ್ಷೇತ್ರ ಸಮನ್ವಯ ಅಧಿಕಾರಿಗಳು, ಸಿಬ್ಬಂದಿಯವರಿಂದ ಮತ್ತು ಗಾಳೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ವಿದ್ಯಾರ್ಥಿನಿಗೆ ಸನ್ಮಾನಿಸಿ ಅಭಿನಂದಸಲಾಯಿತು.   ಈ ಸಂದರ್ಭದಲ್ಲಿ  ಮಹೇಶ ಯರಗಟ್ಟಿ,  ಗಂಗಾಧರ ಕಾಮಕರ,  ರಾಜು ಹಕ್ಕಿ,  ಎಮ್ ಏನ್ ಕಾಂಬಳೆ, ಮಂಜುನಾಥ ಕಾಜಗಾರ,   ವಿಜಯ ಯರಗಟ್ಟಿ, ಭಾಗವಹಿಸಿ, ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ  ರೇವಣಸಿದ್ದೇಶ್ವರ ಶಾಲೆಯ ಫಲಿತಾಂಶಕ್ಕೆ ಮೆಚ್ಚುಗೆವ್ಯಕ್ತಪಡಿಸಿ ಅಭಿನಂದನೆ ತಿಳಿಸಿದರು.