ಕಾರ್ಖಾನೆ ವಿರೋಧಿ ಹೋರಾಟಕ್ಕೆ ನಿರ್ಮಲ ತುಂಗಭದ್ರಾ ಅಭಿಯಾನ ಸಾಥ್ : ಹಾದಿಮನಿ

ಕಾರ್ಖಾನೆ ವಿರೋಧಿ ಹೋರಾಟಕ್ಕೆ ನಿರ್ಮಲ ತುಂಗಭದ್ರಾ ಅಭಿಯಾನ ಸಾಥ್ : ಹಾದಿಮನಿ Nirmala Tungabhadra Abhiyan joins anti-factory struggle: Hadimani

            ಕೊಪ್ಪಳ 17 : ಮೂರಾ​‍್ನಲ್ಕು ಕೋಟಿ ಜನರ ಜೀವನಾಡಿ ತುಂಗಭದ್ರಾ ನದಿಗೆ ಕಾರ್ಖಾನೆಗಳ ತ್ಯಾಜ್ಯ, ನಗರಗಳ ಒಳಚರಂಡಿ ನೀರು ಹರಿಬಿಡುತ್ತಿದ್ದು ಈ ನೀರು ಕುಡಿಯುವ ಜನರು, ಪ್ರಾಣಿ, ಪಕ್ಷಿ, ಜಲಚರಗಳು ಸಾಯುವಂತಾಗಿದೆ. ಇತ್ತೀಚಿನ ತಾಂತ್ರಿಕ ಅಧ್ಯಯನ ಸಮಿತಿಗಳು ಈ ನೀರನ್ನು ಬಳಸಲು ಕೂಡ ಬರುವದಿಲ್ಲವೆಂದು ಹೇಳಿದ್ದು ನದಿಯಾಶ್ರಿತ ಜನರಿಗೆ ಭಯ ಮತ್ತು ಆತಂಕ ಹೆಚ್ಚು ಮಾಡಿದೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನದ ಶಿವಕುಮಾರ ಹಾದಿಮನಿ ಹೇಳಿದರು. 

ಅವರು 48ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕಾಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿಯಲ್ಲಿ ಮಾತನಾಡಿದರು.  

ಇಲ್ಲಿ ನಡೆಸುತ್ತಿರುವ ಹೋರಾಟದ ಮುಖ್ಯ ಬೇಡಿಕೆಯಲ್ಲಿ ತುಂಗಭದ್ರಾ ಮಾಲಿನ್ಯದಿಂದ ರಕ್ಷಿಸಿ ಎಂದಾಗ ನಮಗೂ ಈ ಹೋರಾಟದ ಸಂಬಂಧ ಹತ್ತಿರದ್ದಾಗಿದೆ. ಕಾರ್ಖಾನೆ ತ್ಯಾಜ್ಯ ನದಿಗೆ ಸೇರುತ್ತಿದ್ದು ಈ ಘಟಕಗಳ ನಿಲುಗಡೆಗೆ ಸರ್ಕಾರ ಮುಂದಾಗಲಿ, ನಮ್ಮ ಆಂದೋಲನದಲ್ಲಿ ಈ ಹೋರಾಟವನ್ನು ಭಾಗವಾಗಿಸಿ, ಸಾಥ್ ನೀಡಲು ಉದ್ದೇಶಿಸಲಾಗಿದೆ, ಅದರಿಂದ ಹೋರಾಟವನ್ನು ಶಿವಮೊಗ್ಗದಿಂದ ಮಂತ್ರಾಲಯದವರೆಗೆ ಒಯ್ಯಲು ಸಹಕಾರಿಯಾಗುತ್ತದೆ ಎಂದರು. 

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಮಾತನಾಡಿ, ಜಿಲ್ಲಾ ಕೆಂದ್ರದ ಹತ್ತಿರ ಇರುವ ಬಲ್ಲೋಟಾ ಎಂಎಸ್ಪಿಎಲ್ ಪಲ್ಲೆಟ್ ಘಟಕದ ಒಂದು ಚಿಮಣಿಯಿಂದ ಬರುವ ಕಪ್ಪುದೂಳು, ದಟ್ಟ ವಿಷಾನೀಲ ಹೊಗೆಯಿಂದ ನಗರದ ಅರ್ಧ ಭಾಗ ಬಾಧಿತವಾಗಿದೆ. ಬಲ್ಡೋಟಾ (ಬಿ.ಎಸ್‌.ಪಿ.ಎಲ್) ಸೇರಿದಂತೆ ತಾಲೂಕಿನ ನಾಲ್ಕು ಬೃಹತ್ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗೆ ಅನುಮತಿ ಕೊಟ್ಟರ ಗತಿಯೇನು ಎಂಬುದು ನಮ್ಮ ಆತಂಕ. ತುಂಗಭದ್ರಾ ವಿಷಗೊಳಿಸುವ 28 ಕಾರ್ಖಾನೆ ಬಂದ್ ಮಾಡಬೇಕು. ಬಲ್ಡೋಟಾ ಅತಿಕ್ರಮಿಸಿದ 44.35 ಎಕರೆ ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದರು. 

ಈಗಾಗಲೇ 35 ವರ್ಷಗಳಿಂದ 28 ಸ್ಪ್‌ಂಜ್ ಐರನ್, ಸ್ಟೀಲ್, ಪಲ್ಲೆಟ್ ಬೃಹತ್ ಕಾರ್ಖಾನೆಗಳಿಂದ 20 ಹಳ್ಳಿಗಳು ಗಂಭೀರ ಬಾಧನೆಗೊಳಗಾಗಿದ್ದು, ಸಾಕಾಗಿದೆ. ಹೀಗಿರುವಾಗ ಕೊಪ್ಪಳ ನಗರಕ್ಕೆ ಹತ್ತಿರದಲ್ಲಿ 54 ಸಾವಿರ ಕೋಟಿ ವೆಚ್ಚದ ಬಲ್ಡೋಟಾ ವಿಸ್ತರಣೆಯಿಂದ ಇನ್ನೆಷ್ಟು ಪರಿಸರ ಹಾಳಾಗಲಿದೆ? ಇದರಿಂದಾಗುವ ಪರಿಸರ ಲೆಕ್ಕಾಚಾರವೆನು? ಎಂದು ಹೇಳಬೇಕೆಂದರು.  

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಾಂತವೀರ ಎಮ್‌. ಕಂಬಾಳಿಮಠ, ಶಂಭುಲಿಂಗಪ್ಪ ಹರಗೇರಿ, ಡಿ.ಎಂ.ಬಡಿಗೇರ, ನಿವೃತ್ತ ಸರಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಎನ್‌. ಬೀರನಾಯಕ, ನಿವೃತ್ತ ಪ್ರಾಚಾರ್ಯರಾದ ಎಸ್‌.ಬಿ ರಾಜೂರು, ಸಿ.ವಿ.ಜಡಿಯವರ, ಬಿ.ಜಿ. ಕರಿಗಾರ, ನಿವೃತ್ತ ಕೋರ್ಟ್‌ ಅಧಿಕಾರಿ ಜಿ.ಬಿ.ಪಾಟೀಲ್, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಕಾರ್ಮಿಕ ಅಧಿಕಾರಿ ಶಾಂತಯ್ಯ ಅಂಗಡಿ, ಮಹಾದೇವಪ್ಪ ಎಸ್‌. ಮಾವಿನಮಡು, ಪರಸಪ್ಪ ಪೂಜಾರ ನರೇಗಲ್, ರೈತ ಸಂಘದ ಬಸವರಾಜ ಹೂಗಾರ, ದೇವೇಂದ್ರ​‍್ಪ ಹಳ್ಳಿ, ಶಿವಕುಮಾರ ಹಾದಿಮನಿ, ವೆಂಕಣ್ಣಾಚಾರ ಕಟ್ಟಿ, ಬಸವರಾಜ ನರೇಗಲ್, ವೀರಣ್ಣ ಹಳ್ಳೇರ್, ಬಸವರಾಜ್ ವದ್ನಾಳ, ಬಸವರಾಜ ಶೀಲವಂತರ, ಭೀಮಪ್ಪ ಯಲಬುರ್ಗಾ, ನಿಂಗನಗೌಡ, ದೇವೇಂದ್ರ​‍್ಪ ಹಳ್ಳಿ, ಶಶಿಕಲಾ ಕುರುಗೋಡ, ತಿಮ್ಮಣ್ಣ ಭೋವಿ, ಮಖ್ಬುಲ್ ರಾಯಚೂರು, ಶಿವಪ್ಪ ಹಡಪದ ಇದ್ದರು.