ಮನುಷ್ಯನ ಉಳಿವಿಗೆ ಸೊಳ್ಳೆ ಸಂತತಿ ನಿನರ್ಾಮವೊಂದೇ ಮಾರ್ಗ: ಡಿಎಚ್ಓ

ಸುದ್ದಿಗೋಷ್ಠಿಯಲ್ಲಿ ಡಿಎಚ್ಓ ಅಶೋಕ್ ಕುಮಾರ್

ಕಾರವಾರ : ಸೊಳ್ಳೆಗಳ  ನಿನರ್ಾಮವೊಂದೇ ಮನುಕುಲದ ಉಳಿವಿನ ಮಾರ್ಗ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಜಿ.ಎನ್.ಅಶೋಕ್ಕುಮಾರ್ ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಕುರಿತಂತೆ ಶುಕ್ರವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಸೊಳ್ಳೆಗಳಿಂದಲೇ ಮನುಷ್ಯನಿಗೆ ಅನೇಕ ಮಾರಣಾಂತಿಕ ರೋಗಗಳು ಬರುತ್ತಿದ್ದು ಸೊಳ್ಳೆ ಸಂತತಿ ನಿನರ್ಾಮವೊಂದಿಗೆ ಮನುಷ್ಯನ ಉಳಿವಿನ ಮಾರ್ಗವಾಗಿದೆ ಎಂದು ಅವರು ಹೇಳಿದರು. ಕೇವಲ 21 ದಿನ ಬದುಕುವ ಸೊಳ್ಳೆ ಸಂತಾನೋತ್ಪತ್ತಿಗಾಗಿ ಮನುಷ್ಯ ಹಾಗೂ ಪ್ರಾಣಿಗಳ ರಕ್ತ ಹೀರುತ್ತದೆ. ಇದು ಅನೇಕ ಸಲ ಮಾರಣಾಂತಿಕವಾಗುವುದು ಇದೆ. ಹಾಗಾಗಿ ಸೊಳ್ಳೆಗಳ ಸಂತತಿಗೆ ಅವಕಾಶಕೊಡದಂತೆ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಿದೆ ಎಂದರು. 

ಈ ಹಿಂದೆ ಬಹುಮಕ್ಕಳ ಸಂಸ್ಕೃತಿ ಸಹಜವಾಗಿ ಇತ್ತು. ಆದರೀಗ ಸ್ವಯಂ ಪ್ರೇರಿತರಾಗಿ ಒಂದು ಮತ್ತು ಎರಡು ಮಕ್ಕಳಿಗೆ ಸೀಮಿತರಾಗಿದ್ದೇವೆ. ಈ ಮಗುವಿನ ಆರೋಗ್ಯವನ್ನು ಸೊಳ್ಳೆಗಳಿಂದ ರಕ್ಷಿಸುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಮನುಷ್ಯನ ಸಂತತಿಯೂ ಅಳಿವಿನಂಚಿಗೆ ಹೋಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚೆತ್ತುಕೊಂಡು ಸೊಳ್ಳೆ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.

ಸೊಳ್ಳೆ ನಿಯಂತ್ರಣಕ್ಕೆ ಸಕರ್ಾರ ಮತ್ತು ಆರೋಗ್ಯ ಇಲಾಖೆಯ ಎಷ್ಟೇ ಪ್ರಯತ್ನ ಇದ್ದರೂ ಸಾರ್ವಜನಿಕರ ಸಹಭಾಗಿತ್ವ ಅತಿಮುಖ್ಯ. ಸಾರ್ವಜನಿಕ ಜಾಗೃತಿ, ಶಾಲೆಗಳಲ್ಲಿ ಜಾಗೃತಿ, ಧೂಮೀಕರಣ, ಆರೋಗ್ಯ ಶಿಬಿರಗಳು ಹೀಗೆ ಹಲವಾರು ಕ್ರಮಗಳೂ ಸಾರ್ವಜನಿಕರ ಸ್ವಯಂ ಸಹಭಾಗಿತ್ವದಿಂದ ಮಾತ್ರ ಪ್ರಯೋಜನಕ್ಕೆ ಬರಲಿವೆ ಎಂದರು.

ಸೊಳ್ಳೆ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಹಲವಾರು ಯೋಜನೆಗಳನ್ನು ರೂಪಿಸಿದ್ದು ವರ್ಷವೀಡೀ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಜಿಲ್ಲಾದ್ಯಂತ 28 ಕಡೆಗಳಲ್ಲಿ ಗಟಾರಗಳಲ್ಲಿ ಕುಡಿಯುವ ನೀರಿನ ಸರಬರಾಜು ಆಗಿ ಪೈಪ್ಗಳು ಒಡೆದಿರುವ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾಥರ್ಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಮೇಶ್ ರಾವ್ ಮಾತನಾಡಿ, ನೀರು ನಿಲ್ಲುವುದೇ ಸೊಳ್ಳೆಗಳ ಸಂತತಿಯ ಉಗಮಕ್ಕೆ ಕಾರಣ ಸಾರ್ವಜನಿಕರು ನೀರು ನಿಲ್ಲಿಸುವುದನ್ನು ತಡೆಯಬೇಕು. ಅಲ್ಲದೆ ತೋಟದ ಮನೆಯಿದ್ದರೆ ಅಡಕೆ ಹಾಳೆಗಳನ್ನು ತೋಟದಿಂದ ತೆಗೆದು ನೀರು ನಿಲ್ಲದಂತೆ ಮಾಡಬೇಕು ಎಂದರು.

ಈವರೆಗೆ ಡೆಂಗಿ, ಮೆದುಳುಜ್ವರ, ಮಲೇರಿಯಾ, ಇಲಿಜ್ವರ ಮುಂತಾದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಈ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಸವರ್ೇಕ್ಷಣಾಧಿಕಾರಿ ಡಾ.ವಿನೋದ್ ಬುದ್ದೆ ಉಪಸ್ಥಿತರಿದ್ದರು.