ನಿಖಿಲ್ ದಂಪತಿಗೆ ಟ್ವೀಟ್ ಮೂಲಕ ಶುಭಕೋರಿದ ನವರಸ ನಾಯಕ
ಬೆಂಗಳೂರು, ಏ.17, ಶುಭ ಶುಕ್ರವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸ್ಯಾಂಡಲ್ ವುಡ್ ಜಾಗ್ವರ್ ಖ್ಯಾತಿಯ ನಿಖಿಲ್ ಕುಮಾರ್ ಸ್ವಾಮಿ ಹಾಗೂ ರೇವತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.ನವ ದಂಪತಿಗೆ ರಾಜಕೀಯ ಗಣ್ಯರು, ಸಿನಿರಂಗದ ಕಲಾವಿದರು, ಸೇರಿದಂತೆ ನಿಖಿಲ್ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.ಸ್ಯಾಂಡಲ್ ವುಡ್ ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಮಧುಮಕ್ಕಳಿಗೆ ಶುಭ ಕೋರಿದ್ದಾರೆ. ನಿಖಿಲ್ ಮಾಂಗಲ್ಯಧಾರಣೆ ಮಾಡುವ ಫೋಟೋ ಶೇರ್ ಮಾಡಿರುವ ಜಗ್ಗೇಶ್, "ಮದುವೆ ಸ್ವರ್ಗದಲ್ಲಿ ನಿಶ್ಚಯಿಸಿದ ದೇವರ ನಿಯಮ. ತಂದೆ-ತಾಯಿ, ತಾತ-ಅಜ್ಜಿ ಆಶೀರ್ವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು. ಅದು ಪಡೆದ ಅದೃಷ್ಟವಂತ ನಿಖಿಲ್. ನೀವು ನೂರ್ಕಾಲ ಸುಖವಾಗಿ ಬಾಳಿ ಎಂದು ಶುಭ ಹಾರೈಸಿದ್ದಾರೆ.ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ನಿಖಿಲ್- ರೇವತಿ ವಿವಾಹ ಇಂದು ಬಿಡದಿ ಬಳಿಯ ಕೇತುಗಾನಹಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ್ ಸ್ವಾಮಿ ಅವರ ತೋಟದ ಮನೆಯಲ್ಲಿ ಸರಳವಾಗಿ ನೇರವೇರಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 