ನೂತನ ತಜ್ಞ ವೈದ್ಯರ ಶೀಘ್ರ ನೇಮಕಾತಿ: ಸಚಿವ ದಿನೇಶ ಗುಂಡುರಾವ್

ನೂತನ ತಜ್ಞ ವೈದ್ಯರ ಶೀಘ್ರ ನೇಮಕಾತಿ: ಸಚಿವ ದಿನೇಶ ಗುಂಡುರಾವ್   New specialist doctors to be appointed soon: Minister Dinesh Gundu Rao

ನೂತನ ತಜ್ಞ ವೈದ್ಯರ ಶೀಘ್ರ ನೇಮಕಾತಿ: ಸಚಿವ ದಿನೇಶ ಗುಂಡುರಾವ್   

ಸಂಕೇಶ್ವರ 09: ತಾಲುಕು ಮಟ್ಟದ ಸಮುದಾಯ ಕೇಂದ್ರಗಳಲ್ಲಿ ಎಂಬಿಬಿಎಸ್ ಹಾಗೂ ಎಂ.ಡಿ ಪದವಿಯ ವೈದ್ಯರನ್ನು ಸರಕಾರ ಶೀಘ್ರವಾಗಿ ನೇಮಕ ಮಾಡಲಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಲಭಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಇಂದಿಲ್ಲಿ ಹೇಳಿದರು.  

ಶನಿವಾರ ಸಂಕೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಿರುವ ಹೆಚ್ಚುವರಿ ವಾರ್ಡ್‌ ಗಳನ್ನು ಹಾಗೂ ಓಷಧೀಯ ಉಗ್ರಾಣ ಕಟ್ಟಡ ಉದ್ಘಾಟಿಸಿ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು.  

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಹಾಗೂ ಎಮ್ ಡಿ ಪದವಿಯ ವೈದ್ಯರನ್ನು ಕ್ರಮವಾಗಿ 75 ಸಾವಿರ ರೂಪಾಯಿ ಹಾಗೂ 1.40 ಲಕ್ಷ ರೂಪಾಯಿಗೆ ವೇತನವನ್ನು ಹೆಚ್ಚಿಸಿ ಇದೇ ತಿಂಗಳಿನಲ್ಲಿ ನೇಮಕಾತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.   

ಇನ್ನು ಮುಂದೆ ಹೆರಿಗೆಗಾಗಿ ಮಹಿಳೆಯರನ್ನು ಬೇರೆ ಕಡೆಗೆ ಕಳುಹಿಸದೆ ಸಂಕೇಶ್ವರದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಡಬೇಕೆಂದು ಸಚಿವರು ಸ್ಥಳಿಯ ವೈದ್ಯರಿಗೆ ಸೂಚಿಸಿದರು.  

ಲೋಕಾಯುಕ್ತ ನ್ಯಾಯಾಧೀಶರು ಆಪಾದಿಸಿರುವಂತೆ ಗೋಕಾಕದ ಸರಕಾರಿ ಆಸ್ಪತ್ರೆಯ ಓಷಧಿ ಮಳಿಗೆಯಲ್ಲಿ ಅವಧಿ ಮೀರಿದ ಓಷಧಿಗಳನ್ನು ಸಾರ್ವಜನಿಕರಿಗೆ ಕೊಡುತ್ತಿರಲಿಲ್ಲ. ಅದರ ಬದಲಾಗಿ ಅವಧಿ ಮೀರಿದ ಓಷಧಿಗಳನ್ನು ವಿಲೇವಾರಿಗಾಗಿ ಪ್ರತ್ಯೇಕವಾಗಿ ಸಂಗ್ರಹಿಸಿಡಲಾಗಿತ್ತು ಎಂದು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಸ್ಪಷ್ಟಪಡಿಸಿದರು.  

ಪ್ರತಿ 2 ವರ್ಷಕ್ಕೊಮ್ಮೆ ಅವಧಿ ಮೀರಿದ ಓಷಧಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಅದಕ್ಕಾಗಿಯೆ ಗೋಕಾಕದಲ್ಲಿ ಅವಧಿ ಮೀರಿದ ಓಷಧಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇಡಲಾಗಿತ್ತು ಎಂದು ಅವರು ಹೇಳಿದರು.   

ಪಟ್ಟಣದೊಳಗೆ ಆರಂಭಿಸಿರುವ ನಮ್ಮ ಕ್ಲಿನಿಕ್ ಕೇಂದ್ರಗಳಿಗೆ ವೈದ್ಯರನ್ನು ನೇಮಕ ಮಾಡಿ ಪುನಶ್ಚೇತನ ಮಾಡಲಾಗುವುದು ಎಂದು ಅವರು ಹೇಳಿದರು.  

ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಆಕ್ರಮದ ವಿರುದ್ದ ದೇಶಾದ್ಯಾಂತ ಮಾಡು ಇಲ್ಲವೆ ಮಡಿ ಹೋರಾಟವನ್ನು ರಾಹುಲ ಗಾಂಧಿ ಅವರ ನೇತೃತ್ವದಲ್ಲಿ ಮಾಡಲಾಗುವುದು ಎಂದು ಸಚಿವ ದಿನೇಶ ಗುಂಡುರಾವ್ ಹೇಳಿದರು.  

ಹುಕ್ಕೇರಿ ಶಾಸಕ ನಿಖಿಲ್ ಕತ್ತಿ, ಪುರಸಭೆ ಅಧ್ಯಕ್ಷೆ  ಸೀಮಾ ಹತನೂರಿ, ಉಪಾಧ್ಯಕ್ಷ ಸಚೀನ ಭೋಪಳೆ, ಡಿಎಚ್‌ಓ ಡಾ. ಆಯ್‌.ಪಿ.ಗಡಾದ, ಅಪರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್‌.ಎಸ್‌.ಗಡೇದ, ತಾಲೂಕಾ  ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ, ಮುಖ್ಯ ವೈದ್ಯಾಧಿಕಾರಿ ಪೂರ್ಣಿಮಾ ತಲ್ಲೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಮುಡಸಿ, ಮುಖಾಂಡರಾದ ನಂದು ಮುಡಶಿ, ಸುನಿಲ್ ಪರ್ವತರಾವ್, ಪ್ರದೀಪ ಮಾನಗಾವಿ, ಚೇತನ ಬಶೇಟ್ಟಿ, ಸಂದೀಪ ದವಡತೆ ಸೇರಿದಂತೆ ಅನೇಕ ಗಣ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಮುದಾಯ ಕೇಂದ್ರದ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.