ಯಲ್ಲಮ್ಮದೇವಿ ನೂತನ ಬೆಳ್ಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಭವ್ಯ ಜಾತ್ರಾ ಮಹೋತ್ಸವ

ಯಲ್ಲಮ್ಮದೇವಿ ನೂತನ ಬೆಳ್ಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಭವ್ಯ ಜಾತ್ರಾ ಮಹೋತ್ಸವ  New silver statue of Yallammadevi inaugurated, grand fair celebrated

ಪಾಲಬಾವಿ  29:  ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ ಜಗನ್ಮಾತೆ ಶ್ರೀ ರೇಣುಕಾದೇವಿ ಏಳು ಕೊಳ್ಳದ ಶ್ರೀ ಯಲ್ಲಮ್ಮತಾಯಿ ನೂತನ ದೇವಸ್ಥಾನದ ಲೋಕಾರೆ​‍್ಣ ಸಮಾರಂಭವು ಹಾಗೂ ಶ್ರೀ ಯಲ್ಲಮ್ಮದೇವಿಯ ಬೆಳ್ಳಿಯ ಮೂರ್ತಿಯ ಪ್ರಾಣಿ ಪ್ರತಿಷ್ಠಾಪಣೆ ಹಾಗೂ ಭವ್ಯ ಜಾತ್ರಾ ಮಹೋತ್ಸವವು ಮಾರ್ಚ್‌ 31 ಹಾಗೂ ಏಪ್ರಿಲ್ 01ರಂದು ಎರಡು ದಿನಗಳ ವರೆಗೆ ಸಡಗರ ಸಂಭ್ರಮದಿಂದ ಜರುಗುವುದು. ಮಂಗಳವಾರ 31ರಂದು ಮಧ್ಯಾಹ್ನ 3ಗಂಟೆಗೆ ಸುಮಂಗಲರಿಂದ ಪೂರ್ಣಕುಂಭ, ಆರತಿಯೊಂದಿಗೆ ಶ್ರೀ ಯಲ್ಲಮ್ಮ ತಾಯಿಯ ನೂತನ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಬರಮಾಡಿಕೊಳ್ಳುವುದು.

ರಾತ್ರಿ 8ಗಂಟೆಗೆ ಮೂಡಲಗಿಯ ಶ್ರೀ ಕೃಷ್ಣ ಮಹಾರಾಜರು ಅವರಿಂದ ದೇವಿಯ ಪುರಾಣ ಪಾರಾಯಣ ಜರುಗುವುದು. ರಾತ್ರಿ 9ಗಂಟೆಗೆ ಛತ್ರದಲ್ಲಿ ಅನ್ನ ಸಂತರೆ​‍್ಣ ನೆರವೇರುವುದು. ಏಪ್ರಿಲ್ 1ರಂದು ಬುಧವಾರ ಮುಂಜಾನೆ 7ಗಂಟೆಗೆ ಮೂಡಲಗಿಯ ಶ್ರೀ ರಾಘವೇಂದ್ರ ಆಚಾರ್ಯ ಸ್ವಾಮೀಜಿಗಳಿಂದ ದೇವಸ್ಥಾನದ ಪ್ರಭಾ ಮಂಡಲದಲ್ಲಿ ಹೋಮ, ಹವನ, ಪಂಚಾಮೃತ, ಅಭಿಷೇಕ, ಫಲ, ಪುಷ್ಪ, ಹೋಳಿಗೆ ಕರಿಗಡಬು, ಮೀಸಲು ನೈವೇದ್ಯ ಸಮರೆ​‍್ಣ, ವಿಶೇಷ ಪೂಜೆಯು ನೆರವೇರುವುದು. ರಾತ್ರಿ 9ಗಂಟೆಗೆ ಗಂಟೆಗೆ ಸುಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿಯ ಅರ್ಚಕರು ಶ್ರೀ ಕೆಎಸ್ ಯಡವೀರಯ್ಯ ಆಚಾರ್ಯರ ಅಮೃತ ಹಸ್ತದಿಂದ ಯಲ್ಲಮ್ಮದೇವಿಯ ಬೆಳ್ಳಿಯ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ಹಾಗೂ ಹಡ್ಡಲಗಿ ನೈವೇದ್ಯ ತುಂಬುವ ಧಾರ್ಮಿಕ ಕಾರ್ಯಕ್ರಮವು ನೆರವೇರುವುದು.

ನಂತರ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಯಲ್ಲಮ್ಮದೇವಿಯ ದೇವಸ್ಥಾನವು ಲೋಕಾರೆ​‍್ಣಗೊಳ್ಳುವುದು. ಮುಂಜಾನೆ 11ಗಂಟೆಗೆ ಶ್ರೀ ಭಗೀರಥ ದೇವಸ್ಥಾನದ ಮುಂಭಾಗದಲ್ಲಿ ಮುಧೋಳ ತಾಲೂಕು ಯಡಹಳ್ಳಿ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಚೌಡಕಿ ಗಾಯನ  ಸಂಘ ಹಾಗೂ ಮೂಡಲಗಿ ತಾಲೂಕು ನಿಂಗಾಪುರ ಗ್ರಾಮದ ಶ್ರೀ ದುರ್ಗಾದೇವಿ ಚೌಡಕಿ ಗಾಯನ ಸಂಘದ ಸುಪ್ರಸಿದ್ಧ ಕಲಾವಿದರಿಂದ ತುರುಸಾ ತುರುಸಿನ "ಹರದೇಶಿ -ನಾಗೇಶಿ" ಸುಪ್ರಸಿದ್ಧ ಚೌಡಕಿ ಜನಪದಗಳ ಹಾಡುಗಾರಿಕೆ ಜರುಗುವುದು.