ಡಿಎಸ್‌ಎಸ್ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಡಿಎಸ್‌ಎಸ್ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ  New office bearers elected for DSS organization

ಕೊಲ್ಹಾರ 06 : ಡಿ ಎಸ್ ಎಸ್ ಸಂಘಟನೆಗೆ ಸೇರಿದರೆ ಯಾವುದಾದರೂ ಕೆಲಸ ಸಿಗಬಹುದು ದುಡ್ಡು ಮಾಡಬಹುದು ಎಂಬ ವಿಚಾರಧಾರೆಯನ್ನು ಇಟ್ಟುಕೊಂಡು ಸಂಘಟನೆಗೆ ಬರಬೇಡಿ ಡಾ ಬಿರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುವವರು ಮಾತ್ರ ನಮ್ಮ ಸಂಘಟನೆಗೆ ಬನ್ನಿ ಎಂದು ಜಿಲ್ಲಾ ಸಂಚಾಲಕ ಚಂದ್ರಕಾಂತ ಶಿಂಗೆ ಹೇಳಿದರು ಪಟ್ಟಣದ ಯುಕೆಪಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ಇಂದಿನ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಕೆಲ ಸಂಘಟನೆಗಳ ಮುಖಂಡರು ಕಾರು ಬಂಗಲೆ ದುಡ್ಡು ಮಾಡುವ ಗೊಸ್ಕರ ಸಂಘಟನೆ ಬಂದು ರಾಜಕೀಯ ನಾಯಕರ ಕೈಗೊಂಬೆಯಾಗಿದ್ದಾರೆ ಅಂತವರು ಅವರು ಮಾಡಿದಂತ ಸಂಘಟನೆಗೆ ಅವಮಾನ ಮಾಡಿದಂತೆ ಬುದ್ಧ ಬಸವ ಅಂಬೆಡ್ಕರವರ ವಿಚಾರ ಧಾರೆಯಲ್ಲಿ ನಡೆಯಬೇಕಾಗಿದೆ ಸಮಾಜದಲ್ಲಿರುವ ಮೂಡನಂಬಿಕೆ ದುಶ್ಚಟಗಳಿಂದ ನಾವು ಹೊರ ಬರಬೇಕಾಗಿದೆ ಎಂದರು.

ಡಿಎಸ್‌ಎಸ್ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು ತಾಲೂಕು ಸಂಘಟನಾ ಸಂಚಾಲಕರಾಗಿ ಈರಣ್ಣ.ನಿ.ಹರಿಜನ್, ಸಹ ಸಂಚಾಲಕರಾಗಿ ಶಂಕ್ರ​‍್ಪ ಚಲವಾದಿ, ಮಾರುತಿ ಸೇ.ಛಲವಾದಿ, ಚಂದ್ರಕಾಂತ ಚಲವಾದಿ, ಪರಶುರಾಮ ಆಸಂಗಿ, ಕರ್ಯಕಾರಿ ಸದಸ್ಯರುರಾಗಿ ಮುತ್ತಪ್ಪ. ಶೇ.ಚಲವಾದಿ ಹಾಗೂ ಚಂದ್ರಶೇಖರ.ಮು.ಚಲವಾದಿ ಅವರನ್ನು ಆಯ್ಕೆ ಮಾಡಲಾಯಿತು.ಹಾಗೂ ಮಸೂತಿ ಗ್ರಾಮ ಘಟಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗ್ರಾಮ ಸಂಘಟನಾ ಸಂಚಾಲಕರಾಗಿ ಕಾಶಿಮ್‌.ಲ.ಚಲವಾದಿ, ಸಹ ಸಂಚಾಲಕರಾಗಿ ಶ್ರೀಶೈಲ್ ಹೊಸೂರು, ಈರ​‍್ಪ ನಿ. ರುದ್ರಗೋಳ, ಶೇಟೆಪ್ಪ ಬ ಹರಿಜನ್, ಖಜಾಂಚಿಯಾಗಿ ಪ್ರಭು ರುದ್ರಗೋಳ ಅವರನ್ನು ಆಯ್ಕೆ ಮಾಡಲಾಯಿತು.ಈ ಸಂರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಚಂದ್ರಕಾಂತ ಶಿಂಗೆ, ಚನ್ನು ಕಟ್ಟಿಮನಿ, ಯಮನಪ್ಪ ಛಲವಾದಿ, ವೈ.ಎಸ್ ಗುಣಿಕಿ, ಚಂದ್ರಶೇಖರ ನಾಲತವಾಡ, ಸಂಗು ಛಲವಾದಿ, ಯಲ್ಲಪ್ಪ ಛಲವಾದಿ, ಶೇರಣಪ್ಪ ಕಾಳಿ, ಪ್ರಕಾಶ ಗರಸಂಗಿ, ಹಣಮಂತ ಹರಿಜನ್, ಗಂಗಾಧರ ಆರೆರ್, ಮಹೇಶ ಜವಳಗಿ, ಬಸವರಾಜ ದೊಡಮನಿ, ಕೇದರನಾತಮಠ ಹಾಗೂ ಇನ್ನಿತರರು ಭಾಗವಹಿಸಿದ್ದರು.