ಶ್ರೀಕ್ಷೇತ್ರಧರ್ಮಸ್ಥಳ ಗ್ರಾ.ಯೋ.ಸಂಸ್ಥೆಗೆ ನೂತನ ಸದಸ್ಯ ಸೇರೆ​‍್ಡ

ಶ್ರೀಕ್ಷೇತ್ರಧರ್ಮಸ್ಥಳ ಗ್ರಾ.ಯೋ.ಸಂಸ್ಥೆಗೆ ನೂತನ ಸದಸ್ಯ ಸೇರೆ​‍್ಡ New member joins Srikshetra Dharmasthala Gram Panchayat

ಶ್ರೀಕ್ಷೇತ್ರಧರ್ಮಸ್ಥಳ ಗ್ರಾ.ಯೋ.ಸಂಸ್ಥೆಗೆ ನೂತನ ಸದಸ್ಯ ಸೇರೆ​‍್ಡ 

ಕಂಪ್ಲಿ 29: ತಾಲ್ಲೂಕಿನಲ್ಲಿ ಕಳೆದ 11 ವರ್ಷಗಳಿಂದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಮೂಲಕ ಸಮಾಜಮುಖೀ,ಜನಪರ ಸೇವಾ ಕಾರ್ಯಗಳನ್ನು ಅತ್ಯುತ್ತಮವಾಗಿ ಮಾಡಿಕೊಂಡು ಬರುತ್ತಿದೆಎಂದು ಶ್ರೀ.ಕ್ಷ.ಧ.ಗ್ರಾ.ಯೋ.ಬಿಸಿ ಟ್ರಸ್ಟಿನ ಬಳ್ಳಾರಿ ಜಿಲ್ಲಾ ನಿರ್ದೇಶಕರಾದರೋಹಿತಾಕ್ಷ ತಿಳಿಸಿದರು. 

ಅವರುಸೋಮವಾರಪಟ್ಟಣದ ಶ್ರೀ.ಕ್ಷ.ಧ.ಗ್ರಾ.ಯೋ.ಬಿಟಿ ಟ್ರಸ್ಟಿನ ತಾಲ್ಲೂಕುಕಚೇರಿ ಸಭಾಂಗಣದಲ್ಲಿ ನಡೆದ ನೂತನ ಸದಸ್ಯರ ದಾಖಲೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ನೂತನ ಸದಸ್ಯ ದಾಖಲೆಗಳನ್ನು ಸ್ವೀಕರಿಸಿ ಮಾತನಾಡಿ ಕಂಪ್ಲಿ ತಾಲ್ಲೂಕಿನ ಒಟ್ಟು 2593 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು, 22913 ಸದಸ್ಯರನ್ನು ಹೊಂದಿದೆ. ಸ್ವಸಹಾಯ ಸಂಘಗಳಿಗೆ ಕರ್ನಾಟಕಗ್ರಾಮೀಣ ಬ್ಯಾಂಕ್ ಮೂಲಕ ಆರ್ಥಿಕ ಸೌಲಭ್ಯಗಳನ್ನು ಒದಗಿಸಿಕೊಡುವುದರ ಜೊತೆಗೆಯೋಜನೆಯ ವಿವಿಧ ಸೌಲಭ್ಯಗಳನ್ನು ಮತ್ತು ಸಹಾಯಧನವನ್ನುನೀಡುತಿದೆ. ಬಹುತೇಕ ಕುಟುಂಬಗಳಿಗೆ ಯೋಜನೆಯಿಂದಕೃಷಿಗಾಗಿ,ಧಾರ್ಮಿಕಜಾಗೃತಿಗಾಗಿ, ಶೈಕ್ಷಣಿಕ ಪ್ರಗತಿಗಾಗಿ ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆತಂದಿದೆಎಂದರು. 

ನಮ್ಮ ಸಂಸ್ಥೆಯಯೋಜನೆಯಕಾರ್ಯವೈಖರಿಯನ್ನು ಮೆಚ್ಚಿಕೊಂಡು ಪ್ರಸಕ್ತ ಸಾಲಿನಜುಲೈತಿಂಗಳಲ್ಲಿ ಸ್ವಸಹಾಯ ತಂಡಗಳಿಗೆ 1006 ಸದಸ್ಯರನ್ನು ಸೇರೆ​‍್ಡ ಮಾಡಿಕೊಳ್ಳಲಾಗಿದೆ ಎಂದರು.ತಾಲ್ಲೂಕಿನ ಯೋಜನಾಧಿಕಾರಿಗಳಾದ ರಾಘವೇಂದ್ರ ಸ್ವಸಹಾಯ ಸಂಘಗಳ ನೂತನ 1006 ಸದಸ್ಯರ ದಾಖಲೆಗಳನ್ನು ಜಿಲ್ಲಾ ನಿರ್ದೇಶಕರಿಗೆ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಸಂಜುಕುಮಾರ್, ತಾಲ್ಲೂಕಿನ ಸಂಸ್ಥೆಯ ವಿಚಕ್ಷಣಾಧಿಕಾರಿ ಶ್ರೀಶೈಲ,ಕಚೇರಿಯ ಹಣಕಾಸು ಪ್ರಬಂಧಕರಾದ ಮುರುಗೇಶ್,ಮೇಲ್ವಿಚಾರಕರುಗಳಾದ ರಾಜು,ಪ್ರಭು, ಮಂಜುನಾಥ್, ಮಂಜುಳಾ,ಜಯಲಕ್ಷ್ಮೀ,ಅವಿನಾಶ್, ಮಹಾಂತೇಶ್‌.ವೀರಯ್ಯ ಸೇರಿದಂತೆ.ಅನೇಕರಿದ್ದರು.