ಹೊರ್ತಿಯ ದೇಗುಲದಲ್ಲಿ ಶಾಸನ ಪತ್ತೆ
New discovery from National Research Forum
ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹೊಸ ಶೋಧ
ವಿಜಯಪುರ 09: ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಇರುವ ಪುರಾತನ ದೇವಸ್ಥಾನದಲ್ಲಿ ಶಾಸನ ಪತ್ತೆಯಾಗಿದೆ.
ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ದೇವಸ್ಥಾನದ ಮಂಟಪದ ಕಂಬದ ಮೇಲೆ ಶಾಸನ ಇರುವುದನ್ನು ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಹಾಗೂ ಇತಿಹಾಸಕಾರ ಲಾಯಪ್ಪ ಇಂಗಳೆ ಅವರು ಗುರುತಿಸಿದ್ದು, ದೇವಸ್ಥಾನದ ಶಾಸನದಲ್ಲಿ ವೀರ ಬಸವ ಲಿಂಗ ಎಂದು ಬರೆಯಲಾಗಿದೆ.ಇದು ಹೊಸ ಶೋಧವಾಗಿದ್ದು ಇದೇ ಮೊದಲ ಬಾರಿಗೆ ಶಾಸನವನ್ನು ಓದಲಾಗಿದೆ.ವೀರಬಸವಲಿಂಗ ಎಂಬುದು ದೇವಸ್ಥಾನದ ಹೆಸರು ಆಗಿದೆ.ಉತ್ತರಾಭಿಮುಖ ಮತ್ತು ದಕ್ಷಿಣಾಭಿಮುಖವಾಗಿ ಎರಡು ಪ್ರವೇಶ ದ್ವಾರಗಳು ಇದು ಎರಡು ಗರ್ಭಗೃಹಗಳನ್ನು ಹೊಂದಿರುವ ದ್ವಿಕೂಟ ಶೈಲಿಯ ದೇವಸ್ಥಾನವನ್ನು ಸ್ಥಳೀಯರು ಹಳೆಯ ದೇಗುಲ ಎಂದು ಕರೆಯುತ್ತಾರೆ. ತರ್ದವಾಡಿ ಸಾವಿರ ನಾಡಿನ ಭಾಗವಾದ ಹೊರ್ತಿಯಲ್ಲಿರುವ ದೇವಸ್ಥಾನವನ್ನು ಹನ್ನೆರಡನೇ ಶತಮಾನದ ಕಲ್ಯಾಣದ ಕಲಚೂರಿಗಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಗೋಡೆಯ ಮೇಲೆ ವಿವಿಧ ಶಿಲ್ಪಗಳು ಇದ್ದು ಮುಖ್ಯವಾಗಿ ವೀರಭದ್ರ ದೇವರ ಉಬ್ಬು ಶಿಲ್ಪಗಳ ಜೊತೆಗೆ ಜೈನ ತೀರ್ಥಂಕರಗಳ ಉಬ್ಬು ಶಿಲ್ಪಗಳಿವೆ. ಶೈವ ಮತದ ಜೊತೆಗೆ ಜೈನ ಮತವು ಈ ಪ್ರದೇಶದಲ್ಲಿ ಇರುವುದು ಶಿಲ್ಪಗಳಿಂದ ತಿಳಿದು ಬರುತ್ತದೆ. ಜೊತೆಗೆ ಈ ಹೊಸ ಶೋಧವು ದೇವಸ್ಥಾನದ ಹೆಸರಿನ ಕುರಿತು ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಇರುವ ನಿಗೂಢತೆಗೆ ಸ್ಪಷ್ಟತೆ ನೀಡಲಿದೆ ಎಂದು ಇತಿಹಾಸಕಾರ ಲಾಯಪ್ಪ ಇಂಗಳೆ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ಕಾರ್ಯದಲ್ಲಿ ಮಂಜುನಾಥ ಜಾಧವ, ರವೀಂದ್ರ ರಾಠೋಡ, ವಿನೋದ ರಾಠೋಡ ಕಲ್ಲಪ್ಪ ಲೋಣಿ ಮನೋಜ ರಾಠೋಡ ರಾಹುಲ ಪಾಟೀಲ ಸೇರಿದಂತೆ ಸ್ಥಳೀಯ ಯುವಕರು ಉಪಸ್ಥಿತರಿದ್ದರು. ಲಾಯಪ್ಪ ಇಂಗಳೆ ಅಧ್ಯಕ್ಷರು ರಾಷ್ಟ್ರೀಯ ಸಂಶೋಧನಾ ವೇದಿಕೆ ವಿಜಯಪುರ 96320 96714
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 