ಇಂದು ನೂತನ ಸಮುದಾಯ ಭವನಕ್ಕೆ ಚಾಲನೆ
New community hall inaugurated today
ಬೆಳಗಾವಿ 3:- ಗೋಕಾಕ ತಾಲೂಕಿನ ಶಿಂದೀಕರಬೆಟ್ ಗ್ರಾಮದ ಶ್ರೀ ಯಮನೂರಪ್ಪ ದೇವಸ್ಥಾನ ಪಕ್ಕ, ಸಂಸದ ಈರಣ್ಣಾ ಕಡಾಡಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಮುದಾಯ ಭವನದ ಉದ್ಘಾಟನೆ ದಿ.4 ರಂದು ಮಧ್ಯಾಹ್ನ 11.30 ಕ್ಕೆ ನಡೆಯಲಿದೆ. ಸಂಸದ ಈರಣ್ಣಾ ಕಡಾಡಿ ಅವರು ನೂತನ ಸಮುದಾಯ ಭವನಕ್ಕೆ ಚಾಲನೆ ನೀಡುವರು. ಅ.ಕ. ಜನ ಜಾಗೃತಿ ಬೆಳಗಾವಿ-2 ಅಧ್ಯಕ್ಷ ನಾಗಲಿಂಗ ಪೋತದಾರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಘಟಪ್ರಭಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಚ್.ಡಿ. ಮುಲ್ಲಾ, ಗ್ರಾ.ಪಂ. ಅಧ್ಯಕ್ಷೆ ರೂಪಾ ಸಿದ್ಧಾರೂಢ ಕಂಬಾರ, ಪ್ರಗತಿಪರ ರೈತ ಮಹಾಂತೇಶ ಹಳ್ಳಿ, ಯೋಗ ಶಿಕ್ಷಕ ಯಮನಪ್ಪ ಹೊನಕುಪ್ಪಿ, ಆಧ್ಯಾತ್ಮಿಕ ಚಿಂತಕ ಹಣಮಂತ ಮಾನೆ, ಸಂಗೀತ ಕಲಾವಿದ ಮುತ್ತು ಭೋವಿ, ಎಸ್.ಕೆ.ಡಿ.ಆರ್.ಪಿ. ಮೇಲ್ವಿಚಾರಕಿ ಕವಿತಾ ಎಸ್.ಟಿ. ಇವರು ಆಗಮಿಸುವರು. ಈ ರೀತಿ ಜರಗುವ ಕಾರ್ಯಕ್ರಮಕ್ಕೆ ಸರ್ವರೂ ಸಹಕರಿಸಬೇಕೆಂದು ಅರ್ಚಕರಾದ ಖಟಾವಕರ ಸಹೋದರರು ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 