ಶಿರಗುಪ್ಪಿಯಲ್ಲಿ ಆರ್ಥಿಕ ಪ್ರಗತಿಗೆ ಹೊಸ ಶಾಖೆ ಪ್ರಾರಂಭ : ಉತ್ತಮ ಪಾಟೀಲ
New branch opens in Shiraguppi for economic progress: Uttam Patil
ಲೋಕದರ್ಶನ ವರದಿ
ಕಾಗವಾಡ 14 : ಸಂಸ್ಥೆಯ ಪ್ರೇರಣಾಮೂರ್ತಿ ದಿ. ರಾವಸಾಬ ಪಾಟೀಲರ ಮಾರ್ಗದರ್ಶನ ಮತ್ತು ಗ್ರಾಮೀಣ ಭಾಗದ ಆರ್ಥಿಕ ಪ್ರಗತಿಗಾಗಿ ಅವರ ಕಂಡು ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅರಿಹಂತ್ ಸೊಸೈಟಿಯು ತನ್ನ ನೂತನ ಶಾಖೆಯನ್ನು ಶಿರಗುಪ್ಪಿಯಲ್ಲಿ ಪ್ರಾರಂಭಿಸಿದ್ದು, ಇದರಿಂದ ಈ ಭಾಗದ ಆರ್ಥಿಕ ಪ್ರಗತಿಯ ಹೊಸ ಶೆಖೆ ಪ್ರಾರಂಭಗೊಳ್ಳಲಿದೆ ಎಂದು ಯುವ ಮುಖಂಡರು ಮತ್ತು ಸಂಸ್ಥೆಯ ಸಂಚಾಲಕರಾದ ಉತ್ತಮ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ. ಅವರು ಗುರುವಾರ ದಿ. 14 ರಂದು ತಾಲೂಕಿನ ಶಿರಗುಪ್ಪಿಯಲ್ಲಿ ಬೋರಗಾಂವದ ಅರಿಹಂತ ಕೋ-ಆಪ್‌ರೇಟಿವ್ ಕ್ರೆಡಿಟ್ ಸೊಸೈಟಿ ಲಿ., ಮಲ್ಟಿಸ್ಟೆಟ್ ಸಂಸ್ಥೆಯ 62 ನೇ ಶಾಖೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಅರಿಹಂತ್ ಉದ್ಯೋಗ ಸಮೂಹ ಸಂಸ್ಥೆಗಳ ಮಾತೃ ಸಂಸ್ಥೆಯಾಗಿರುವ ಅರಿಹಂತ ಸೊಸೈಟಿಯು ಈಗಾಗಲೇ ಒಟ್ಟು 1726 ಕೋಟಿ ಠೇವಣಿ ಸಂಗ್ರಹಿಸಿ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮದಾರರಿಗೆ ಆರ್ಥಿಕ ಸಹಕಾರ ನೀಡುತ್ತಾ, ವಿವಿಧ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ. ಜೊತೆಗೆ ರಾವಸಾಬ್ ಅಣ್ಣಾ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು, ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ವೈದ್ಯಕೀಯ ಸೇವೆ ನೀಡುತ್ತಿದೆ ಎಂದರು.
ಇದೇ ವೇಳೆ ನೂತನ ಶಾಖೆಯನ್ನು ಪೂಜೆ ನೆರವೇರಿಸಿ, ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು. ಜೊತೆಗೆ ಲಾಕರ್ ಪೂಜೆಯನ್ನು ನೆರವೇರಿಸಿ, ನೂತನ ಶಾಖೆಯ ಕಾರ್ಯಕಲಾಪಗಳು ಇಂದಿನಿಂದ ಪ್ರಾರಂಭಗೊಂಡವು. ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಅಭಿನಂದನ ಪಾಟೀಲ, ಮುಖಂಡರಾದ ಶಿವಗೌಡಾ ಕಾಗೆ, ಮಹಾವೀರ ಕಾತ್ರಾಳೆ, ಅಣ್ಣಾಸಾಬ ಪಾಟೀಲ, ಅಭಯಕುಮಾರ ಅಕಿವಾಟೆ, ಸುರೇಶ ಪಾಟೀಲ, ಶಿವಾನಂದ ಪಾಟೀಲ, ದೀಪಕ ಪಾಟೀಲ, ಅಶೋಕ ಕಾತ್ರಾಳೆ, ವಿಜಯ ಅಕಿವಾಟೆ, ಭೀಮು ಭೋಲೆ, ಅಪ್ಪಾಸಾಬ ಚೌಗುಲೆ, ದಯಾನಂದ ಮಿಣಚೆ, ನಂದು ಪಾಟೀಲ, ಆರ್.ಎಸ್. ಪಾಟೀಲ, ಅರುಣ ಗಣೇಶವಾಡಿ, ಅಮರ ಯಾದವ, ಅರುಣ ಕುರುಂದವಾಡೆ, ಅನೀಲ ಚೌಗುಲೆ, ಅರುಣ ಶಿರಗುಪ್ಪೆ, ಶಂಕರ ಪವಾರ, ಬಾಬಾಸಾಬ ಜುಗೂಳೆ, ಋಷಭ ಡಿಗ್ರಜೆ, ಚಂದ್ರಕಾಂತ ಲಂಗೋಟೆ, ರವೀಂದ್ರ ಬೋಜೆ, ಅಶೋಕ ಮಿರ್ಜೆ, ಸಾಗರ ಅರಬೋಳೆ, ಸಂತೋಶ್ ಚೌಗುಲೆ, ಸಿಇಓ ಅಶೋಕ ಬಂಕಾಪೂರೆ, ಉಪಾಧ್ಯಕ್ಷರಾದ ಸತೀಶ ಪಾಟೀಲ, ಶಾಖಾ ವ್ಯವಸ್ಥಾಪಕ ಬಾಹುಬಲಿ ಮೊನೆ ಸೇರಿದಂತೆ ಸಂಸ್ಥೆಯ ಎಲ್ಲ ಸಂಚಾಲಕರು, ಶಾಖೆಯ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಹಿತೈಷಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 