ಗೃಹಲಕ್ಷ್ಮಿಯಿಂದ ಹೊಸ ಸಂಘಗಳು: ಎಸ್ ಎಚ್ ಜಿ ನಿಷ್ಕ್ರಿಯವಾಗುವ ಭಯ
New associations from Grihalakshmi: Fear of SHG becoming inactive
ಕಾರವಾರ 26: ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಪಡೆಯುವವರಿಂದ ಹೊಸ ಸಂಘಗಳ ರಚಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದ್ದು, ಈ ಕಾರ್ಯಕ್ರಮ ದಿಂದ ಎಸ್ ಎಚ್ ಜಿ ನಿಷ್ಕ್ರಿಯವಾಗುವ ಭಯವ್ಯಕ್ತವಾಗಿದೆ.
ಈ ಸಂಬಂಧ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದ ಎನ್ ಆರ್ ಎಲ್ ಎಮ್ ಅಡಿಯ ಸೆಲ್ಪ ಹೆಲ್ಪ ಗ್ರೂಪ್ ನ ಮಹಿಳಾ ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಜಿಲ್ಲಾ ರಂಗಮಂದಿರದಿಂದ ಜಿಲ್ಲಾಧಿಕಾರಿ ಕಚೇರಿತನಕ ಮೆರವಣಿಗೆ ಮಾಡಿ, ತಮ್ಮ ಬೇಡಿಕೆಯ ಮನವಿಯನ್ನು ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗೆ ಅರ್ಿಸಿದರು.
ಎಸ್ ಎಚ್ ಜಿ ಮುಖಂಡೆ ಜ್ಯೋತಿ ದೇವಳಿ ಮಾತನಾಡಿ ಈಗಾಗಲೇ ಎನ್ ಆರ್ ಎಲ್ ಎಮ್ ಅಡಿ ರಚಿತ ಸಂಘಗಳು ಶೇ.9 ರಲ್ಲಿ ಸಾಲ ಪಡೆಯುತ್ತಿವೆ.ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಪಡೆಯುವವರಿಂದ ಹೊಸ ಸಂಘಗಳ ರಚಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದ್ದು, ಈ ಕಾರ್ಯಕ್ರಮ ದಿಂದ ಎಸ್ ಎಚ್ ಜಿ ನಿಷ್ಕ್ರಿಯವಾಗಲಿವೆ. ಹಾಗಾಗಿ ನಮ್ಮ ಸಂಘಗಳಲ್ಲಿ ಗೃಹ ಲಕ್ಷ್ಮಿ ಸಂಘ ವೀಲೀನ ಮಾಡಿ ಅಥವಾ ನಮಗೂ ಗೃಹಲಕ್ಷ್ಮಿ ಸಂಘಗಳ ಅಡಿ ಸಾಲ ಕೊಡಿ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟರು. ಜಿಲ್ಲೆಯ ಎಲ್ಲಾ ಸ್ವಸಹಾಯ ಸಂಘಗಳಲ್ಲಿ ಕ್ರಿಯಾಶೀಲ ಸಂಘಗಳಿಗೆ ಸಾಲ ಕೊಡಿ ಎಂದು ಅವರು ಮನವಿ ಮಾಡಿದರು.
ಮನವಿ ಪಡೆದ ಅಪರ ಜಿಲ್ಲಾಧಿಕಾರಿ ಸಾಜಿದ್ ಮಾಲ್ಲಾ ಬೇಡಿಕೆಯನ್ನು ಸರ್ಕಾರಕ್ಕೆ ಕಳಿಸುವುದಾಗಿ ಹೇಳಿದರು. ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೀಲೀಷ್ ಮಾತನಾಡಿ ನಿಮ್ಮ ಅಹವಾಲು ಅರ್ಥವಾಗಿದೆ. ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು. ಮೆರವಣಿಗೆ ಶಾಂತಿಯುತವಾಗಿತ್ತು. ಪೊಲೀಸರು ಬಂದೋಬಸ್ತ ವಹಿಸಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 