ವೆಲ್ಲಿಂಗ್ಟನ್, ಡಿ 23, ವೈಟ್
ಐಲ್ಯಾಂಡ್ ಸ್ಫೋಟಕ್ಕೆ ಇನ್ನೋರ್ವ ವ್ಯಕ್ತಿ ಬಲಿಯಾಗಿದ್ದು ಮೃತರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ
ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ತಡರಾತ್ರಿ ಆಕ್ಲೆಂಡ್ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ
ಅಧಿಕೃತ ಮೂಲಗಳು ತಿಳಿಸಿವೆ. ನ್ಯೂಜಿಲೆಂಡ್‌ನ ಸುತ್ತಮುತ್ತಲಿನ ನಾಲ್ಕು ಆಸ್ಪತ್ರೆಗಳಲ್ಲಿ
14 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಈ ಪೈಕಿ 10 ರೋಗಿಗಳ ಸ್ಥಿತಿ ಇನ್ನೂ ಗಂಭೀರವಾಗಿದ್ದಾರೆ. "ಘಟನೆಯ
ಸಮಯದಲ್ಲಿ, 47 ಜನರು ದ್ವೀಪದಲ್ಲಿದ್ದರು, ಅನೇಕರು ಆಸ್ಟ್ರೇಲಿಯಾದ ಪ್ರವಾಸಿಗರು." ರೇಡಿಯೋ
ನ್ಯೂಜಿಲೆಂಡ್ ವರದಿ ತಿಳಿಸಿದೆ. ಡಿಸೆಂಬರ್ 9 ರಂದು, ಬೇ ಆಫ್ ಪ್ಲೆಂಟಿ ಯಿಂದ 50 ಕಿ.ಮೀ ದೂರದಲ್ಲಿರುವ
ನ್ಯೂಜಿಲೆಂಡ್‌ನ ವೈಟ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಿಸಿತು. ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿರುವ ವೈಟ್ ಐಲ್ಯಾಂಡ್
ದ್ವೀಪಕ್ಕೆ ಜನರು ದೋಣಿ ಅಥವಾ ಹೆಲಿಕಾಪ್ಟರ್ ಮೂಲಕ ಹೋಗಬಹುದು. ಆದರೆ ತಾತ್ಕಾಲಿಕವಾಗಿ ದ್ವೀಪಕ್ಕೆ
ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ.