ಕರೋನ ಸೋಂಕಿಗೆ ನ್ಯೂಜಿಲೆಂಡ್‌ನಲ್ಲಿ ಮೊದಲ ಬಲಿ

ವೆಲ್ಲಿಂಗ್ಟನ್, ಮಾರ್ಚ್ 29, ನ್ಯೂಜಿಲೆಂಡ್‌ನಲ್ಲಿ ಕರೊನ ಸೋಂಕಿನ ಮೊದಲ   ರೋಗಿಯೊಬ್ಬರು ಮೃತಪಟ್ಟಿದ್ದಾರೆ  ಎಂದು ಸರ್ಕಾರ ಭಾನುವಾರ  ಪ್ರಕಟಿಸಿದೆ.ಮೃತ ಮಹಿಳೆ 70 ರ ಹರೆಯದವರು ಎಂದು ದೃಡಪಡಿಸಿರುವುದಾಗಿ  ಆರೋಗ್ಯ ಸಚಿವಾಲಯದ ಆರೋಗ್ಯ ಮಹಾನಿರ್ದೇಶಕ ಡಾ. ಆಶ್ಲೇ ಬ್ಲೂಮ್‌ಫೀಲ್ಡ್  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ದಕ್ಷಿಣ ದ್ವೀಪದ ವೆಸ್ಟ್ ಕೋಸ್ಟ್ ಪ್ರದೇಶದ ಗ್ರೇಮೌತ್ ಆಸ್ಪತ್ರೆಯಲ್ಲಿ ಮಹಿಳೆ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ . ಅವರಿಗೆ ಶುಕ್ರವಾರ ಬೆಳಿಗ್ಗೆ ವೈರಸ್  ಧನಾತ್ಮಕ ಪರೀಕ್ಷೆ ಮಾಡಲಾಗಿತ್ತು. ಇವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ 21 ಸಿಬ್ಬಂದಿಯನ್ನು  ಈಗ ಸ್ವಯಂ-ಪ್ರತ್ಯೇಕತೆಯಲ್ಲಿಡಲಾಗಿದೆ. ನ್ಯೂಜಿಲೆಂಡ್ ನಲ್ಲಿ   ಭಾನುವಾರ ಹೊಸದಾಗಿ  ದೃಡಪಡಿಸಿದ 60 ಮತ್ತು  ಮತ್ತು ಮೂರು ಹೊಸ ಕೋವಿಡ್ -19 ಪ್ರಕರಣಗಳು   ವರದಿಯಾಗಿದ್ದು  ಇದು ದೇಶದಲ್ಲಿ ಈವರೆಗೆಸೋಂಕಿನ  ಸಂಖ್ಯೆ 514 ಕ್ಕೆ ಏರಿಕೆಯಾಗಿದೆ ಒಟ್ಟು 9 ಜನರು ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ.ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್, ಸಾವಿನ ಪ್ರಕರಣವೇ ನ್ಯೂಜಿಲೆಂಡ್ ಈ ಸೋಂಕು ತಡೆಗಟ್ಟಲು ಮತ್ತಷ್ಟು ಕಠಿಣ  ಕ್ರಮ ತೆಗೆದುಕೊಳ್ಳಲು ಕಾರಣವಾಗಿದೆ ಎಂದು ಹೇಳಿದ್ದಾರೆ.ಆದಾಗ್ಯೂ, ದೃ ಡಪಡಿಸಿದ  ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಜನರು  ಮನೆಯಲ್ಲಿಯೇ ಇದ್ದು ರೋಗ ಹರಡದಂತೆ ಪ್ರತಿಯೊಬ್ಬರು ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದೂ ಅರ್ಡೆರ್ನ್ ಹೇಳಿದ್ದಾರೆ .