ಹೊಸ 100ರೂ,ನೋಟು ಹೇಗಿರಲಿದೆ
ನವದೆಹಲಿ
: ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದಲ್ಲೇ
100 ರೂ. ಮುಖಬೆಲೆಯ ಹೊಸ ನೋಟನ್ನು ಜಾರಿಗೆ ತರಲಿದೆ ಎಂದು ವರದಿಯಾಗಿದೆ.
ಈಗಿರುವ 100 ರೂ.
ನೋಟಿಗಿಂತಲೂ ಚಿಕ್ಕದ್ದಾಗಿ, 10 ರೂ.
ನೋಟಿಗಿಂತ ಕೊಂಚ ದೊಡ್ಡದಾಗಿರುವ ನೋಟನ್ನು ಆರ್ಬಿಐ ಪರಿಚಯಿಸಲಿದೆಯಂತೆ.
ಹೊಸ ನೋಟನ್ನು ಜಾರಿಗೆ ತರುತ್ತಿರುವ ಆರ್ಬಿಐ ಹಳೆಯ ನೂರರ ನೋಟನ್ನು ಹಿಂಪಡೆಯುವ ಯೋಚನೆ ಇಲ್ಲ ಎಂದು ತಿಳಿಸಿದೆ. ಈಗಾಗಲೇ ಹೊಸ ನೋಟಿನ ವಿನ್ಯಾಸ ಅಂತಿಮವಾಗಿದ್ದು, ಮುದ್ರಣ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ. ಮುಂದಿನ ತಿಂಗಳು ಇಲ್ಲವೇ ಸೆಪ್ಟೆಂಬರ್ ನಲ್ಲಿ ಹೊಸ ನೋಟು ಜನಸಾಮಾನ್ಯರ ಕೈ ಸೇರಲಿದೆ ಎನ್ನಲಾಗುತ್ತಿದೆ.
ಹೊಸ ನೂರರ ನೋಟಿನಲ್ಲಿ ಹಲವು ಸೂಕ್ಷ್ಮ ಭದ್ರತಾ ವೈಶಿಷ್ಟ್ಯಗಳು ಇರಲಿವೆಯಂತೆ. ಗುಜರಾತ್ ನ ಐತಿಹಾಸಿಕ ಮೆಟ್ಟಿಲುಗಳಿರುವ ರಾಣಿ ಕಿ ವಾವ್ ನ ಚಿತ್ರ ನೋಟಿನ ಮೇಲೆ ಇರಲಿದೆಯಂತೆ. ಹೊಸ ನೋಟುಗಳು ಅಳತೆಗೆ ತಕ್ಕಂತೆ ಎಟಿಎಂಗಳನ್ನು ಸೆಟ್ ಮಾಡುವ ಜವಾಬ್ದಾರಿ ಬ್ಯಾಂಕ್ಗಳಿಗೆ ತಲೆನೋವಾಗಲಿದೆ ಎನ್ನಲಾಗುತ್ತಿದೆ. 500, 1000 ಮುಖಬೆಲೆ ನೋಟುಗಳ ಅಮಾನ್ಯೀಕರಣ ಹಾಗೂ ಹೊಸ 2000, 500, 200 ಮುಖಬೆಲೆಯ ನೋಟು ಜಾರಿಗೆ ಬಂದಾಗಲೂ 100 ರೂ. ನೋಟು ಜಾಲ್ತಿಯಲ್ಲಿತ್ತು. ಈಗ ಹಳೆಯದರ ಜೊತೆಗೆ ಹೊಸ100 ರೂ. ನೋಟು ಜಾರಿಗೆ ಬರಲಿದೆ.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 