ಪರಿಶಿಷ್ಟರ ವಿಷಯದಲ್ಲಿ ನಿರ್ಲಕ್ಷ್ಯ ಅಕ್ಷಮ್ಯ ಅಪರಾಧ: ಎಚ್‌.ಆಂಜನೇಯ

ಪರಿಶಿಷ್ಟರ ವಿಷಯದಲ್ಲಿ ನಿರ್ಲಕ್ಷ್ಯ ಅಕ್ಷಮ್ಯ ಅಪರಾಧ: ಎಚ್‌.ಆಂಜನೇಯ Negligence in matters of Schedules is an unpardonable crime: H. Anjaneya

ಚಿತ್ರದುರ್ಗ 22 : ಹಿಂದುಳಿದ ವರ್ಗಗಳ ಆಯೋಗಕೈಗೊಂಡಿರುವಜಾತಿಗಣತಿ ಸಮೀಕ್ಷೆಕಾರ್ಯದಲ್ಲಿ ಪರಿಶಿಷ್ಟರಿಗೆ ಸೀಮಿತಗೊಳಿಸಿ ಕ್ರಿಶ್ಚಿಯನ್ ಪದ ಜೋಡಿಸಿರುವುದು ಅತ್ಯಂತಅಪಾಯಕಾರಿ ನಡೆಯಾಗಿದೆಎಂದು ಮಾಜಿ ಸಚಿವ ಹೆಚ್‌.ಆಂಜನೇಯದೂರಿದರು. 

ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ, ಮೇಲ್ವರ್ಗದ ಆಕ್ಷೇಪಗಳಿಗೆ ಮನ್ನಣೆ ನೀಡಿಅವರಜಾತಿಜೊತೆಗೆ ಕ್ರಿಶ್ಚಿಯನ್ ಪದಕೈಬಿಡಲಾಗಿದೆ.ಆದರೆ, ಪರಿಶಿಷ್ಟ ಜಾತಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದುಅಕ್ಷಮ್ಯಅಪರಾಧಎಂದುಆಕ್ರೋಶ ವ್ಯಕ್ತಪಡಿಸಿದರು.ಎಸ್ಸಿ ಜನರುಎಲ್ಲರೀತಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವರ್ಗ. ಈ ಗುಂಪಿಗೆ 

ನ್ಯಾಯಯುತವಾಗಿಎಲ್ಲ ಹಕ್ಕುಗಳು, ಸೌಲಭ್ಯಗಳನ್ನು ನೀಡಲು ಸಮೀಕ್ಷೆಕಾರ್ಯಪಾರದರ್ಶಕವಾಗಿ ನಡೆಯಬೇಕು. ಈಕಾರಣಕ್ಕೆ ನ್ಯಾ.ನಾಗಮೋಹನ್‌ದಾಸ್‌ಆಯೋಗ ನಡೆಸಿದ ಗಣತಿಯಲ್ಲಿಧರ್ಮದ ಕಾಲಂ ಇರಲಿಲ್ಲ. ಆದರೆ, ಈಗ ಧರ್ಮದ ಕಲಂ ಸೇರಿಸಿರುವುದೇ ತಪ್ಪು. ಮೀಸಲಾತಿಜಾತಿಆಧಾರಿತವಾಗಿದ್ದು, ಧರ್ಮ ಕೇಳುವ ಅಗತ್ಯವೇಇರಲಿಲ್ಲ ಎಂದರು.ಒಂದೆಡೆ ಹಿಂದೂಎಂದು ಬರೆಸುವಂತೆ ಬಿಜೆಪಿ ಬೊಬ್ಬೆ ಹಾಕುತ್ತಿದೆ. ಈ ಮಧ್ಯೆಆಯೋಗಮಾದಿಗ ಕ್ರಿಶ್ಚಿಯನ್, ಛಲವಾದಿ ಕ್ರಿಶ್ಚಿಯನ್ ಹೀಗೆ ಪರಿಶಿಷ್ಟ ಜಾತಿಗಳನ್ನು 

ಗುರುತಿಸುವ ಕೆಲಸ ಮಾಡುತ್ತಿದೆ.ಇದು ಎಸ್ಸಿಗಳ ಜನಸಂಖ್ಯೆ ಕುಗ್ಗಿಸುವ ಕೆಲಸ ಆಗಲಿದೆ.ಒಂದೊಮ್ಮೆಯಾವುದೇಜಾತಿಯವರು ಮತಾಂತರಗೊಂಡಿದ್ದರೇಅವರು ಆ ಧರ್ಮವನ್ನೇಬರೆಸುತ್ತಾರೆ.ಇಂತಹ ಸಂದರ್ಭಅನಗತ್ಯವಾಗಿಗೊಂದಲ ಉಂಟು ಮಾಡುವ ಕೆಲಸ ಆಯೋಗಮಾಡುತ್ತಿದೆಎಂದು ಆರೋಪಿಸಿದರು.ಈ ಕೂಡಲೇ ಪರಿಶಿಷ್ಟ ಜಾತಿಜೊತೆಗೆ ಕ್ರಿಶ್ಚಿಯನ್ ಪದತೆಗೆದು ಸಮೀಕ್ಷೆಕಾರ್ಯಆರಂಭಿಸಬೇಕು.ಇಲ್ಲದಿದ್ದರೇಆಯೋಗದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆಎಂದುಎಚ್ಚರಿಸಿದರು.ಮಾದಿಗ, ಛಲವಾದಿಗಳು ಅಸ್ಪೃಶ್ಯದ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡುವುದು, ಕ್ರಿಶ್ಚಿಯನ್ ಧರ್ಮಆಚರಣೆ ಮಾಡುತ್ತಾರೆ.ಆದರೆ, ಅವರಾ​‍್ಯರೂತಮ್ಮ ಮೂಲ ಜಾತಿಯಿಂದ ಹೊರಹೋಗಿರುವುದಿಲ್ಲ. ಅಂತವರನ್ನು ಮೀಸಲಾತಿಯಿಂದಲೇ ಹೊರಗಿಡುವ ಕೆಲಸ ಆಯೋಗಮಾಡುತ್ತಿರುವುದು ಸರಿಯಲ್ಲ. ಅಸ್ಪೃಶ್ಯ ನೋವು ಅರಿತುಕೊಳ್ಳಬೇಕು.ಒಂದೊಮ್ಮೆ ಮತಾಂತರಆಗಿದ್ದರೇಅವರು ಕ್ರಿಶ್ಚಿಯನ್ ಎಂದೇ ಬರೆಸುತ್ತಾರೆಎಂದರು. 

ಈಗಲೂ ಮಾದಿಗರು ಬೆತ್ತಲೆ, ಬಸವಿ, ದೇವದಾಸಿ, ಉರುಳುಸೇವೆ ಅಂತಹ ಅನಿಷ್ಠ ಮೌಢ್ಯಆಚರಿಸುತ್ತಿದ್ದಾರೆ.ಇನ್ನೂ ಜಾತ್ರೆಗಳ ಹೆಸರಲ್ಲಿ ಪ್ರಾಣಿ ಬಲಿ ನೀಡಿ ಮಧ್ಯ-ಮಾಂಸಉಂಡು ಸಾಲದ ಸುಳಿಗೆ ಸಿಲುಕಿತ್ತಿದ್ದಾರೆ.ಇಂತಹಜನರಲ್ಲಿಜಾಗೃತಿ ಮೂಡಿಸುವರೀತಿಆಯೋಗಕಾರ್ಯ ನಿರ್ವಹಿಸಬೇಕು.ಅವರನ್ನುದಾರಿತಪ್ಪಿಸುವರೀತಿ ಮಾಡಬಾರದುಎಂದುತಿಳಿಸಿದರು.ಒಳಮೀಸಲಾತಿ ಸಂಬಂಧ ಈಚೆಗೆ ಪರಿಶಿಷ್ಟರಿಗೆ ಸೀಮಿತಗೊಳಿಸಿ ಸಮೀಕ್ಷೆ ನಡೆಸಿ, ಕೆಲವೇ ತಿಂಗಳು ಆಗಿವೆ. ಮೂರೇ ತಿಂಗಳಲ್ಲಿ ಜನಸಂಖ್ಯೆಏರುಪೇರುಆಗಿರುವುದಿಲ್ಲ. ಈ ಕಾರಣಕ್ಕೆಎಸ್ಸಿಗಳನ್ನು ಹೊರಗಿಟ್ಟು ಸಮೀಕ್ಷೆ ನಡೆಸಿದ್ದರೇ ಸಿಬ್ಬಂದಿಗೆ ಕೆಲಸ, ಸರ್ಕಾರದಬೊಕ್ಕಸಕ್ಕೆ ಹೊರೆಕಡಿಮೆಆಗುತ್ತಿತ್ತು.ಆಯೋಗದಲ್ಲಿರುವವರು ಸ್ವಲ್ಪಜ್ಞಾನ ಬಳಕೆ ಮಾಡಬೇಕಾಗಿತ್ತು.ನ್ಯಾ.ನಾಗಮೋಹನ್‌ದಾಸ್‌ಆಯೋಗ ವರದಿ ಕೊಡುವುದಕ್ಕಿಂತಲೂ ಮುಂಚೆ ಎಲ್ಲವೂ ಸರಿಯಿದೆಎನ್ನುತ್ತಿದ್ದವರು ಈಗ ತಕರಾರುತೆಗೆದುಕೋರ್ಟ್‌ ಮೊರೆ ಹೋಗುವ ಕೆಲಸ ಮಾಡುತ್ತಿದ್ದಾರೆಎಂದು ಬೇಸರ ವ್ಯಕ್ತಪಡಿಸಿದರು.  

ಒಳಮೀಸಲಾತಿ ಹಂಚಿಕೆಜನಸಂಖ್ಯೆಗಿಂತಲೂಹಿಂದುಳಿಯುವಿಕೆ ಆಧಾರದಡಿ ನೀಡಲಾಗಿದೆ.ಛಲವಾದಿ ಸಮಾನಂತರಜಾತಿವರನ್ನುಅವರ ನಿಕೃಷ್ಠಬದುಕಿನಕಾರಣಕ್ಕೆ ಮಾದಿಗ ಗುಂಪಿಗೆ ಸೇರಿಸಿದ್ದರು. ಇದನ್ನುತಪ್ಪುಅರ್ಥ ಮಾಡಿಕೊಂಡುಗೊಂದಲದ ಹೇಳಿಕೆಗಳನ್ನು ನೀಡಲಾಯಿತು.ಪರಿಶಿಷ್ಟ ಜಾತಿಯ ಸಚಿವರೆಲ್ಲರೂಒಮ್ಮತದಚರ್ಚೆಬಳಿಕ ಒಳಮೀಸಲಾತಿ ಜಾರಿಗೊಂಡಿದ್ದು, ಮಾದಿಗರಿಗೆ ಶೇ.7 ಮೀಸಲಾತಿ ಸಿಗಬೇಕಿತ್ತು.ಆದರೂಏನೂ ಇಲ್ಲದ ನಮಗೆ ಶೇ.6 ಮೀಸಲಾತಿ ನೀಡಿರುವುದನ್ನೇಒಪ್ಪಿಕೊಂಡಿದ್ದೇವೆ. ಆದರೆ, ನಮಗಿಂತಲೂಆರ್ಥಿಕ, ಶೈಕ್ಷಣಿ, ಓದ್ಯೋಗಿಕವಾಗಿ ಹೆಚ್ಚು ಲಾಭ ಪಡೆದವರೇ ಈಗ ಅನಗತ್ಯವಾಗಿ ಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆಎಂದರು. 

ಸಾಹಿತಿದೇವನೂರು ಮಹಾದೇವ್‌ಅಂತಹ ಹಿರಿಯರೇ ನಾಗಮೋಹನ್‌ದಾಸ್‌ಆಯೋಗದ ವರದಿ ವೈಜ್ಞಾನಿಕವಾಗಿದೆಎಂದು ಹೇಳಿದ್ದರೂ, ಅಂಬೇಡ್ಕರ್ ವಾರಸುದಾರರಂತೆ ವರ್ತಿಸುವವರೇ ಸಂವಿಧಾನದಆಶಯದ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ನಾವೆಲ್ಲರೂ ಸಹೋದರರರೀತಿ ಬದುಕಬೇಕು.ಅಲೆಮಾರಿಗಳ ಬದುಕುಉತ್ತಮಪಡಿಸಲು ಸರ್ಕಾರದ ಮೇಲೆ ಒತ್ತಡತರಬೇಕಿದೆಎಂದರು.5 ಲಕ್ಷಜನರುಆದಿಕನಾಟಕ, ಆದಿದ್ರಾವಿಡ, ಆದಿಆಂಧ್ರಎಂದು ಬರೆಯಿಸಿದ್ದೂ, ಅವರೆಲ್ಲರೂಮೀಸಲಾತಿ ಪಡೆಯಲುತಮ್ಮ ಮೂಲ ಜಾತಿಯಲ್ಲಿ ಗುರುತಿಸಿಕೊಳ್ಳಬೇಕು.ಇಲ್ಲದಿದ್ದರೇಚಿಪ್ಪೇಗತಿಎಂದುಆಂಜನೇಯ ಎಚ್ಚರಿಸಿದರು. 

ಈಗ ಜಾತಿಗಣತಿ ವೇಳೆಯಾದರೂ ಮೂಲ ಜಾತಿಬರೆಯಿಸಿ, ಒಳಮೀಸಲಾತಿ ಸೌಲಭ್ಯ ಪಡೆಯಬೇಕು. ಹಟ್ಟಿ, ಕಾಲೋನಿ, ನಗರ ಪ್ರದೇಶದಲ್ಲಿಇನ್ನಷ್ಟುಅಭಿಯಾನ, ಜಾಗೃತಿ ನಡೆಸಿ ಜಾತಿ ಮಾದಿಗ, ಧರ್ಮ ಹಿಂದೂಎಂದೇ ಬರೆಯಿಸುವಂತೆಮಾಡಬೇಕು. ಈ ಮೂಲಕ ನಮ್ಮಜನಸಂಖ್ಯೆ ಕುಗ್ಗಿಸುವ ಷಡ್ಯಂತರಕ್ಕೆತಕ್ಕಉತ್ತರನೀಡಬೇಕೆಂದರು.ಪತ್ರಿಕಾಗೋಷ್ಠಿಯಲ್ಲಿವಕೀಲ ರವೀಂದ್ರ, ಜಿಪಂ ಮಾಜಿ ಸದಸ್ಯ ಆರ್‌.ನರಸಿಂಹರಾಜು ಇತರರಿದ್ದರು.