ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮ: ಡಾ. ಎಸ್ ಎಸ್ ಗಡೆದ್
Necessary steps to reduce maternal and infant mortality rate: Dr. SS Gaded
ಮಾಂಜರಿ 06: ಜಿಲ್ಲೆಯಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಇದರ ಸದುಉಪಯೋಗ ಎಲ್ಲರೂ ಪಡೆದುಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಚಿಕ್ಕೋಡಿ ಅಪ್ಪರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಎಸ್ ಎಸ್ ಗಡೆದ್ ಹೇಳಿದರು.
ಅವರು ಶುಕ್ರವಾರದಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಸಂಶೋಧನಾ ಘಟಕ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾದ ಆರೋಗ್ಯನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು ಈ ಕಾರ್ಯಕ್ರಮಕ್ಕೆ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಸಂಶೋಧನ ಘಟಕದ ಸ್ತ್ರೀರೋಗ ತಜ್ಞರಾದ ಡಾ. ವರ್ಷಿಣಿ ಚಿಕ್ಕ ಮಕ್ಕಳ ತಜ್ಞರಾದ ಡಾ ಓಂ ಪ್ರಿಯಾ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ ಅಶ್ವಿನ್ ನಾಯ್ಕ್ ತಾಲೂಕ ವೈದ್ಯಕೀಯ ಅಧಿಕಾರಿಗಳಾದ ಡಾ ಸುರೇಶ್ ಭಾಗಯಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಕಳೆದ ನಾಲೈದು ವರ್ಷಗಳ ಅವಧಿಯಲ್ಲಿನ ಶಿಶು ಮರಣಗಳ ಪ್ರಮಾಣ ಗಮನಿಸಿದಾಗ, ಜಿಲ್ಲೆಯಲ್ಲಿ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ತಾಯಿ ಮತ್ತು ಶಿಶು ಮರಣ ಸಂಭವಿಸಲು ಮುಖ್ಯ ಕಾರಣ ಏನು ಎಂಬುದರ ಬಗ್ಗೆ ಕೂಲಂಕುಷವಾಗಿ ಪರೀಶೀಲನೆ ನಡೆಯಬೇಕು. ಮುಂಜಾಗೃತೆ ವಹಿಸುವ ಮೂಲಕ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಆದಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯ ಕೆ?ಗೊಳ್ಳಬೇಕು. ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಸಿಜಿರಿನ್ ಹೆರಿಗೆ ಹೆಚ್ಚಳ ಕುರಿತು ವಿವರನ್ನು ನೀಡಬೇಕು ಎಂದು ಚಿಕ್ಕೋಡಿಯ ಅಪ್ಪರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಎಸ್ ಎಸ್ ಹೇಳಿದರು
ಈ ವೇಳೆ ತಾಲೂಕ ವೈದ್ಯಕೀಯ ಅಧಿಕಾರಿಗಳಾದ ಡಾ ಸುರೇಶ್ ಭಾಗಯಿ ಮಾತನಾಡಿ ತಾಯಿಮರಣ ಮತ್ತು ಶಿಶುಮರಣ ಸಂಭವಿಸಲು ಮುಖ್ಯ ಕಾರಣ ಮತ್ತು ಅದನ್ನು ಯಾವ ರೀತಿ ಮುಂಜಾಗೃತೆ ತೆಗೆದುಕೊಂಡು ಉಳಿಸಬಹುದು ಎಂಬುದರ ಬಗ್ಗೆ ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರಿಂದ ಸಲಹೆ ಪಡೆದು ತಾಯಿ ಮತ್ತು ಶಿಶು ಮರಣ ನಿಂತ್ರಿಸಬೇಕಾಗಿರುವುದು ಅಗತ್ಯ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವಿನಯ್ ಕುಮಾರ್ ಪೂಜಾರಿ, ಡಾ ಮಹೇಶ್ ಕುಂಬಾರ್, ಮಾಂಜರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ರೋಹಿಣಿ ಪೊಳ್, ಡಾ ಪ್ರಿಯಾಂಕ ಧಡಕಿ, ಡಾ ಮಂಗಲ್ ಶಾಸ್ತ್ರಿ, ಡಾ ಗೀತಾ ನಿಲಜಿಗಿ, ಡಾ ಸವಿತಾ ಒಡೆಯರ್, ಡಾ ಯಶೋಧ ಬಬಲಿ ಹಾಗೂ ಫಲಾನುಭವಳು ಮತ್ತು ಆರೋಗ್ಯ ಪ್ರತಿನಿಧಿಗಳು ಹಾಜರಿದ್ದರು. ಮಹಾವೀರ ಪಾಟೀಲ್ ಸ್ವಾಗತಿಸಿ ಡಾ ಮಂಗಲ್ ಶಾಸ್ತ್ರಿ ನಿರೂಪಿಸಿ ವಂದಿಸಿದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 