ದೇವದಾಸಿ ಮಹಿಳೆಯರು ಹಾಗು ಅವರ ಕುಟುಂಬಗಳ ಸದಸ್ಯರನ್ನು ಕೂಡಲೆ ಗಣತಿ ಪಟ್ಟಿಗೆ ಸೇರಿಸಿಕೊಂಡು ಪುನರ್ವಸತಿಗೆ ಅಗತ್ಯ ಕ್ರಮ
Necessary steps should be taken for the immediate enumeration and rehabilitation of Devadasi women a
ಕೊಪ್ಪಳ 10: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ನಿರಂತರವಾಗಿ ಕೇಳುತ್ತಾ ಬಂದ ಪ್ರಮುಖ ಹಕ್ಕುಗಳನ್ನು ಪರಿಗಣಿಸಿ ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ ನಿಷೇದ ಮಸೂದೆ - 2025 ಅಂಗೀಕರಿಸಿರುವುದನ್ನು ಮತ್ತು ಎಲ್ಲ ದೇವದಾಸಿ ಮಹಿಳೆಯರ ಹಾಗು ಅವರ ಮೂರು ತಲೆ ಮಾರುಗಳ ಕುಡುಂಬದ ಸದಸ್ಯರ ಗಣತಿಗೆ ಕ್ರಮ ವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ಕೊಪ್ಪಳ ಸ್ವಾಗತಿಸುತ್ತದೆ. ಮಾನ್ಯರೆ, ಈಗ ಕಾರ್ಯ ನಿರ್ವಹಿಸುವ ಗಣತಿಯಲ್ಲಿ ಈಗಾಗಲೆ ಗಣತಿಪಟ್ಟಿಯಲ್ಲಿರುವ ದೇವದಾಸಿ ಮಹಿಳೆಯರು ಹಾಗು ಕುಟುಂಬದ ಸದಸ್ಯರನ್ನು ವಿಶೇಷವಾಗಿ ಮರು ಸಮೀಕ್ಷೆಗೆ ಕ್ರಮ ವಹಿಸಲಾಗಿದೆ. ಇದು ಸರಿಯಿದೆ. ಆದರೆ, ಇದುವರೆಗೆ ಗಣತಿಯಲ್ಲಿ ಸೇರಿಸಲಾಗದಿರುವ ದೇವದಾಸಿ ಮಹಿಳೆಯರು ಹಾಗು ಅವರ ಕುಟುಂಬದ ಸಾವಿರಾರು ಸದಸ್ಯರು, ಈ ದೌರ್ಜನ್ಯದ ದೇವದಾಸಿ ಪದ್ಧತಿಗೆ ಹಾಗು ಜಾತಿ ಅಸಮಾನತೆ ಮತ್ತು ಅಶ್ಪೃಶ್ಯಾಚರಣೆಯ ಅಪಮಾನಗಳ ತೀವ್ರ ಶೋಷಣೆಗೆ ಗುರಿಯಾಗಿದ್ದರೂ, ಅವರು ಕೇವಲ ಗಣತಿ ಪಟ್ಟಿಯಲ್ಲಿಲ್ಲವೆಂಬ ಕಾರಣಕ್ಕೆ ದೇವದಾಸಿ ಮಹಿಳೆಯರು ಈಗ ಸಿಗುವ ಯಾವುದೇ ಕನಿಷ್ಠ ಸೌಲಭ್ಯಗಳಕನ್ನು ಪಡೆಯಲಾಗುತ್ತಿಲ್ಲ. ಗಣತಿ ಪಟ್ಡಿಯಲ್ಲಿಲ್ಲವೆಂಬ ಕಾರಣಕ್ಕೆ ಅವರಿಗೆ, ಅವರ ಮಕ್ಕಳಿಗೆ ದೇವದಾಸಿ ಕುಟುಂಬದ ಸರ್ಟಿಫಿಕೇಟ್ ಕೂಡಾ ಸಿಕ್ಕಿರುವುದಿಲ್ಲ. ಇದರಿಂದ ಸಾವಿರಾರು ಮಕ್ಕಳು ಅವರ ವಿದ್ಯಾಭ್ಯಾಸದ ಹಾಗು ಉದ್ಯೋಗದ ಸೌಲಭ್ಯ ವಂಚಿತರಾಗಿದ್ದಾರೆ. ತಾಯಂದಿರು ದೌರ್ಜನ್ಯದಿಂದ ನಲುಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈಗ ನಡೆಯುತ್ತಿರುವ ಗಣತಿಗೆ, ಗಣತಿ ಪಟ್ಟಿಯಿಂದಾಚೆ ಇರುವ ಮಹಿಳೆಯರನ್ನು ಮಗದೊಮ್ಮೆ ಹೊರಗಿಡುವುದು ಕಂಡು ಬಂದಿದೆ. ದೇವದಾಸಿ ಪದ್ದತಿ ನಿಷೇದ ಕಾಯ್ದೆ - 1982 ರಲ್ಲಿ ಅಂಗೀಕರಿಸಿ ಜಾರಿಯಾಗಿರುವುದರಿಂದ ಆನಂತರ ಹುಟ್ಟಿದವರನ್ನು ಗಣತಿ ಸೇರಿಸಲಾಗದೆಂದು ಹಳೆಯ ಕಾನೂನನ್ನು ತೋರಿಸಿ ಗಣತಿ ಪಟ್ಟಿಯಲ್ಲಿಲ್ಲದ ಮಹಿಳೆಯರ ಅರ್ಜಿಗಳನ್ನು ಪಡೆಯದಿರುವುದು ನಡೆದಿದೆ. ದೇವದಾಸಿ ಪದ್ದತಿಯನ್ನು ಈ ಹಿಂದೆ ಬ್ರಿಟೀಷರ ಕಾಲದಲ್ಲೆ ನಿಷೇಧಿಸಲಾಗಿತ್ತು. ಹಾಗಿದ್ದಾಗಲು, ದೇವದಾಸಿ ಮಹಿಳೆಯರ ಎರಡು ಬಾರಿ ಗಣತಿ ನಡೆಸಿ ಪುನರ್ವಸತಿ ಕಲ್ಪಿಸಲಾಗಿದೆ. ಅದೇ ರೀತಿ, ದೇವದಾಸಿ ಪದ್ದತಿ ನಿಷೇದ ಮಸೂದೆ - 2025 ಸ್ಪಷ್ಠವಾಗಿ ಹಿಂದಿನ ಕಾಯ್ದೆಗಳನ್ನು ರದ್ದುಪಡಿಸಿರುವುದಾಗಿ ಹೇಳಿದೆ. ಈ ಮಸೂದೆ ಈಗಾಗಲೆ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಅವಿರೋಧ ಒಪ್ಪಿಗೆ ಪಡೆದಿದೆ. ಈಗ ಅದರ ನೋಟಿ ಫಿಕೇಷನ್ ಆಗ ಬೇಕಾಗಿದೆ. ಈ ಹಂತದಲ್ಲಿ ಗಣತಿಯಾಚೆ ಇರುವ ಮಹಿಳೆಯರು ಅವರ ಕುಟುಂಬದ ಸದಸ್ಯರನ್ನು ಹಳೆಯ ಕಾಯ್ದೆ ತೋರಿಸಿ ಹೊರಗಿಟ್ಟಲ್ಲಿ, ಹೊಸ ಕಾಯ್ದೆ ಅಂಗೀಕಾರದ ನಂತರ ಮರಳಿ ಈ ಮಹಿಳೆಯರ ಗಣತಿಗೆ ಕ್ರಮವಹಿಸಲು ಮತ್ತಷ್ಠು ಬಜೆಟ್ ಹೊರೆಯನ್ನು ಸರಕಾರ ಭರಿಸಬೇಕಾಗುತ್ತದೆ ಹಾಗು ಅಲ್ಲಿಯವರೆಗೆ ಈ ಕುಟುಂಬಗಳು ಸಂಕಷ್ಠವನ್ನು ಅನುಭವಿಸ ಬೇಕಾಗುತ್ತದೆ. ಆದ್ದರಿಂದ, ಯಾವುದೆ ವಯೋಮಿತಿ ಕೇಳದೆ ಹಾಗು ವಿದಾನ ಮಂಡಲ ರದ್ದು ಮಾಡಿದ ಕಾಯ್ದೆಗಳನ್ನು ತೋರಿಸಿ ಅರ್ಜಿ ಪಡೆಯದಿರುವ ಮತ್ತು ಫಲಾನುಭವಿಗಳಾಗಿ ವಿಲೇ ಮಾಡದಿರುವ ತೊಡಕುಗಳನ್ನು ಸರಿ ಪಡಿಸಿ ಗಣತಿ ಪಟ್ಡಿಯಾಚೆ ಇರುವ ಎಲ್ಲ ದೇವದಾಸಿ ಮಹಿಳೆಯರನ್ನು ಅವರ ಮೂರು ತಲೆಮಾರು ಕುಟುಂಬದ ಸದಸ್ಯರನ್ನು ಅತಿ ಶೀಘ್ರವಾಗಿ ಗಣತಿಯಪಟ್ಟಿಗೆ ಸೇರಿಸಲು ವಿಶೇಷ ಕ್ರಮ ವಹಿಸಿ 2026 ರ ಬಜೆಟ್ ನಲ್ಲಿ ಈ ಎಲ್ಲರಿಗೂ ಎಲ್ಲ ದೇವದಾಸಿ ಮಹಿಳೆಯರ ಕುಟುಂಬದಂತೆ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸಲು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಜಿಲ್ಲಾ ಸಮಿತಿ ಕೊಪ್ಪಳ ಮನವಿ ಮಾಡುತ್ತದೆ. ಅದೇ ರೀತಿ, ತಕ್ಷಣದಿಂದಲೆ ಈ ಮಹಿಳೆಯರಿಗೆ ಅವರ ಕುಟುಂಬದ ಸದಸ್ಯರಿಗೆ ದೇವದಾಸಿ ಕುಟುಂಬದ ಸರ್ಟಿಫಿಕೇಟ್ ನೀಡುವಂತೆ ಒತ್ತಾಯಿಸುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 