ಧಾರವಾಡ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಧಾರವಾಡ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ      Navratri festival at Kariamma Devi Temple in Dharwad

ಧಾರವಾಡ, ಸೆ 20:  ಧಾರವಾಡ ನಗರದ ಕೆಲಗೇರಿ ರಸ್ತೆಯಲ್ಲಿರುವ ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಬರುವ ಸೋಮವಾರ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ.      

ಭಾವ್ಯೆಕ್ಯತೆಯ ಕೇಂದ್ರವು ಆಗಿರುವ ಈ ದೇವಸ್ಥಾನಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಸಹ ಭಕ್ತರಾಗಿದ್ದರು.  ಅನಾದಿಕಾಲದಿಂದಲೂ ಈ ಭಾಗದ ರೈತರು  ಮತ್ತು ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಬಾರಿಯ ನವರಾತ್ರಿ ಉತ್ಸವವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರ ವರಗೆ ನಡೆಯಲಿದ್ದು, ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತಿದೆ.  

ಪ್ರತಿದಿನ ರಾತ್ರಿ 9 ಗಂಟೆಗೆ ಅನ್ನ ಸಂತರೆ​‍್ಣ ವ್ಯವಸ್ಥೆ ಮಾಡಲಾಗಿದೆ.    ದೇವಿಗೆ ಸೆಪ್ಟೆಂಬರ್ 22 ರಂದು ರೇಣುಕಾ ಯಲ್ಲಮ್ಮ ದೇವಿ, ಸೆ. 23 ರಂದು ಪದ್ಮಾವತಿ ದೇವಿ, ಸೆ. ಅಂಭಾ ಭವಾನಿ ದೇವಿ, ಸೆ.25 ರಂದು ಗಾಯತ್ರಿ ದೇವಿ, ಸೆ. 26 ರಂದು ಶ್ರೀ ಮಹಾಲಕ್ಷ್ಮಿ ದೇವಿ, ಸೆ.27 ರಂದು ಶ್ರೀ ಶಾಖಾಂಬರಿ ದೇವಿ, ಸೆ. 28 ರಂದು ಅನ್ನಪೂರ್ಣೇಶ್ವರಿ ದೇವಿ, ಸೆ.29 ರಂದು ಸರಸ್ವತಿ ದೇವಿ, ಸೆ. 30 ರಂದು ಕನ್ಯಾಕುಮಾರಿ ದೇವಿ, ಅಕ್ಟೋಬರ್ 1 ರಂದು ಮಹಾಗೌರಿ ದೇವಿ ಮತ್ತು ಅ. 2 ರಂದು ಮಾತಂಗಿ ದೇವಿ ಅಲಂಕಾರ ಮಾಡಲಾಗುತ್ತದೆ.ಅಂದೆ ಸಾಯಂಕಾಲ 4.30 ಕ್ಕೆ  ಕರಿಯಮ್ಮ ದೇವಿ ಅಲಂಕೃತ ಪಲ್ಲಕ್ಕಿ ಉತ್ಸವವು ಶಾಂತಿ ನಿಕೇತನ ನಗರ ಪ್ರದಕ್ಷಿಣೆ ಹಾಕಿ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮುಡಿಯಲಾಗುವುದು.      

ಉತ್ಸವದ ಅಂಗವಾಗಿ ಸೋಮವಾರ ಸೆಪ್ಟೆಂಬರ್ 29 ರಂದು ಸಾಯಂಕಾಲ 4.30 ಕ್ಕೆ ಸುಮಂಗಲೆಯರಿಂದ ಕುಂಕುಮಾರ್ಚನೆ ನಡೆಯಲಿದೆ. ಪ್ರತಿದಿನ ಕಾಕಡಾರತಿ, ಪಂಚಾಮೃತ ಅಭಿಷೇಕ, ಮಂಗಳಾರತಿ, ಭಜನೆ ಮತ್ತು ಮಹಾಮಂಗಳಾರತಿ ಇರುತ್ತದೆ.      

ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ  ಉತ್ಸವವನ್ನು ಯಶಸ್ವಿಗೊಳಿಸುವಂತೆ ದೇವಸ್ಥಾನದ ಚೇರಮನ್ನರು ಮತ್ತು ಶಾಸಕರಾದ ಎನ್‌.ಎಚ್‌. ಕೋನರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ.     ಉತ್ಸವದ ಯಶಸ್ವಿಗೆ ದೇವಸ್ಥಾನದ ಟ್ರಸ್ಟ್‌ ಕಮೀಟಿ ಅಧ್ಯಕ್ಷರಾದ  ಕೆ.ಎನ್‌. ಕುರಕುರಿ, ಉಪಾಧ್ಯಕ್ಷರಾದ ಬಿ.ಟಿ. ರೆಡ್ಡಿ, ಕಾರ್ಯದರ್ಶಿ ಮಹಾವೀರ ಉಪಾಧ್ಯ ಮತ್ತು ನಿರ್ದೇಶಕರಾದ ಎನ್‌.ಬಿ ಅರಳಿಕಟ್ಟಿ, ಶ್ರೀ ವಿಶ್ವನಾಥ ಯಲಿಗಾರ, ಬಿ. ಜೆ. ಪವಾರ, ಎಸ್‌.ಕೆ.ಗಾಳಿ, ಶ್ಯೆಲಜಾ ಎಸ್‌.ಅಂಬಡಗಟ್ಟಿ ಮತ್ತು ಹೇಮಾವತಿ. ಬ. ಪೂಜಾರ ಶ್ರಮಿಸುತ್ತಿದ್ದಾರೆ