ನವರಾತ್ರಿ: ಶ್ರೀದೇವಿಯ ಆರಾಧನೆ
Navratri: Worship of Sridevi
ಯರಗಟ್ಟಿ 30: ಪಟ್ಟಣದ ರಾಜರಾಜೇಶ್ವರಿ ನಗರದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸೆ.22 ರಿಂದ ಸ್ಥಳೀಯ ಮಹಿಳೆಯರಿಂದ ಶ್ರೀದೇವಿಯ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ.9 ದಿನಗಳ ಕಾಲ ಸ್ಥಳೀಯ ಮಹಿಳೆಯರು ಮತ್ತು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ದಿನಕ್ಕೊಂದು ಬಣ್ಣದ ಸೀರೆಯುಟ್ಟು ನವೋಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ.
ದಿನ ಬೆಳಗಾಗುವಷ್ಟರಲ್ಲಿ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಗಿಡಕ್ಕೆ ಶುಭ ಗಳಿಗೆಯಲ್ಲಿ ಪೂಜೆ, ಪುನಸ್ಕಾರ, ಗಿಡಕ್ಕೆ ಪ್ರದಕ್ಷಣೆ ಹಾಕುವುದು, ನೂಲು ಸುತ್ತುವದು, ಆರತಿ, ನೈವೇದ್ಯ ಸಮರೆ್ನ ಜರುಗುತ್ತಿದೆ.ಇಲ್ಲಿಯ ವಿವಿಧ ದೇವಾಲಯದಲ್ಲಿರುವ ದೇವರಿಗೆ ಮಹಾ ಪೂಜೆ, ವಿವಿಧ ಬಗೆಯ ಪುಷ್ಪಲಂಕಾರ, ದೀಪಾಲಂಕಾರ ಹಾಗೂ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಯ ಪರಾಕಾಷ್ಠೆ, ವೈಭವದಿಂದ ನಡೆಯುತ್ತಿವೆ. ಅದರಲ್ಲೂ ಸಡಗರದಿಂದ ಶ್ರೀದೇವಿಯ ಆರಾಧನೆಗೆ ಮಹಿಳೆಯರಿಂದ ನಡೆಯುತ್ತಿದೆ.ಈ ವೇಳೆ ಸರಸ್ವತಿ ಕುರುಬಗಟ್ಟಿ, ಲೀಲಾವತಿ ತಳವಾರ, ಲಕ್ಷ್ಮೀ ಮಲ್ಲಕನ್ನವರ, ಗೌರವ್ವ ಮಬನೂರ, ಮಂಜುಳಾ ಶಿವಣ್ಣವರ, ತೇಜು ತಳವಾರ, ಲಕ್ಷ್ಮೀ ಕುರುಬಗಟ್ಟಿ, ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಇದ್ದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 