ನವರಾತ್ರಿ ಉತ್ಸವ ನಿಮಿತ್ಯ ಘಟಸ್ಥಾಪನೆ ಕಾರ್ಯಕ್ರಮ
Navaratri festival inauguration program
ಯರಗಟ್ಟಿ, 23 : ನಾಡ ಹಬ್ಬ ದಸರಾ, ನವರಾತ್ರಿ ಉತ್ಸವ ನಿಮಿತ್ಯ ಪಟ್ಟಣದ ಗ್ರಾಮದೇವಿಯರ, ಕಾಳಿಕಾದೇವಿ, ವೀರಭದ್ರೇಶ್ವರ, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ರಾಜರಾಜೇಶ್ವರಿ ಆಶ್ರಮದಲ್ಲಿ ಭಾನುವಾರ ಧಾರ್ಮಿಕ ಪರಂಪರೆಯಂತೆ ಘಟಸ್ಥಾಪನೆ ಕಾರ್ಯಕ್ರಮ ನಡೆಯಿತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೂ ದೇವಿಗೆ ಕಾಕಡಾರತಿ, ಕ್ಷೀರಾಭಿಷೇಕ, ಜಲಾಭಿಷೇಕ, ಕುಂಕುಮಾರ್ಚನೆ ಅನೇಕ ಬಗೆಯ ಪೂಜಾ ಕಾರ್ಯಕ್ರಮಗಳು ನೆರವೇರಿಸಿದ ಬಳಿಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರವಚನಕಾರ ಮಡಿವಾಳಪ್ಪ ವನ್ನೂರ ಹಾಗೂ ತುರುಮರಿಯ ಪೂಜ್ಯ ಶಾಂತಯ್ಯ ಮಹಸ್ವಾಮಿಗಳು ಇವರಿಂದ ದೇವಿ ಪಾರಾಯಣ ಜರುಗಿತು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಗೆ ನೈವೇದ್ಯ ಅರ್ಿಸಿ ದರ್ಶನ ಪಡೆದರು.
ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಮುತ್ತೈದೆಯರಿಗೆ ಪೂಜೆ ಸಲ್ಲಿಸಲಾಯಿತು. ಪೂಜ್ಯ ಗಣಪತಿ ಮಹಾರಾಜರು, ಎ. ಜಿ. ಪತ್ತಾರ, ಡಾ. ಕಾಶೀನಾತ ಅಂಗಡಿ, ವಿ. ಎಮ್. ಮರಡಿ, ಶಿವಾನಂದ ಹಂಜಿ, ಸುಭಾಸ ರೊಗೆ, ಡಾ. ವಿಶ್ವಾನಾಥ ತಾಂವಶಿ, ಮಹಾದೇವ ದಂಡಿನದುರ್ಗಿ, ಬಿ. ಕೆ. ರಂಗಣ್ಣವರ, ವಾಯ್. ಎಮ್. ಕಡಕೋಳ, ರಾಜೇಂದ್ರ ಶೆಟ್ಟಿ, ವಿಶ್ವಾನಾಥ ಹೊಳಿಮಠ, ಆಶಾ ಪರೀಟ, ಶೋಭಾ ದಂಡಿನದುರ್ಗಿ, ಮೈತ್ರಾ ಹೊಂಗಲ, ಮುಖಂಡರು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 