ಬೆಟಗೇರಿಯಲ್ಲಿ ನವರಾತ್ರಿ ಮಹಾಸಡಗರ
Navaratri celebrations in Betageri
ವರದಿ: ಅಡಿವೇಶ ಮುಧೋಳ.ಬೆಟಗೇರಿ
ಬೆಟಗೇರಿ 29: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸೆ.22 ರಿಂದ ಸ್ಥಳೀಯ ಮಹಿಳೆಯರಿಂದ ಶ್ರೀದೇವಿಯ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ.
ಸೆ.22 ರಿಂದ 9 ದಿನಗಳ ಕಾಲ ಸ್ಥಳೀಯ ಮಹಿಳೆಯರು ಮತ್ತು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ದಿನಕ್ಕೂಂದು ಬಣ್ಣದ ಸೀರೆಯುಟ್ಟು ನವೋಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. ದಿನ ಬೆಳಗಾಗುವಷ್ಟರಲ್ಲಿ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಗಿಡಕ್ಕೆ ಶುಭ ಗಳಿಗೆಯಲ್ಲಿ ಪೂಜೆ, ಪುನಸ್ಕಾರ, ಗಿಡಕ್ಕೆ ಪ್ರದಕ್ಷಣೆ ಹಾಕುವುದು, ನೂಲು ಸುತ್ತುವದು, ಆರತಿ, ನೈವೇದ್ಯ ಸಮರೆ್ನ ಜರುಗುತ್ತಿದೆ.
ಇಲ್ಲಿಯ ವಿವಿಧ ದೇವಾಲಯದಲ್ಲಿರುವ ದೇವರಿಗೆ ಮಹಾ ಪೂಜೆ, ವಿವಿಧ ಬಗೆಯ ಪುಷ್ಪಲಂಕಾರ, ದೀಪಾಲಂಕಾರ ಹಾಗೂ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಯ ಪರಾಕಾಷ್ಠೆ, ವೈಭವದಿಂದ ನಡೆಯುತ್ತಿವೆ. ಅದರಲ್ಲೂ ಸಡಗರದಿಂದ ಶ್ರೀದೇವಿಯ ಆರಾಧನೆಗೆ ಮಹಿಳೆಯರಿಂದ ನಡೆಯುತ್ತಿದೆ.
ಈ ವೇಳೆ ಶೋಭಾ ಮುಧೋಳ, ಮಹಾದೇವಿ ನೀಲಣ್ಣವರ, ಶಾಂತಾ ಮುಧೋಳ, ಅಕ್ಷತಾ ನೀಲಣ್ಣವರ, ಮಂಜುಳಾ ಮುಧೋಳ, ಸೀಮಾ ನೀಲಣ್ಣವರ, ಶೀವಲೀಲಾ ಮುಧೋಳ, ಗೌರವ್ವ ಪೂಜೇರಿ, ಮಹಾದೇವಿ ಮುಧೋಳ, ಶೀಲಾ ನೀಲಣ್ಣವರ, ಸೇರಿದಂತೆ ಹಲವಾರು ಜನ ಮಹಿಳೆಯರು, ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು, ಇದ್ದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 