ಲೋಕದರ್ಶನ
ವರದಿ
ಶಿಗ್ಗಾವಿ
: ಪಟ್ಟಣದ ನವನಗರದಲ್ಲಿ ಮೂಲಭೌತ ಸೌಲಭ್ಯಗಳಿಗೆ ಆಗ್ರಹಿಸಿ ದಿಢೀರ ಪ್ರತಿಭಟನೆ ನಡೆಸಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಂಗಳವಾರ ಮನವಿ ಅಪರ್ಿಸಿದರು.
ಮನವಿ ಅಪರ್ಿಸಿ ಮಾತನಾಡಿದ
ವಾಡರ್ಿನ ಹಿರಿಯರಾದ ಕೆ.ಎಮ್.ಕೋಣಪ್ಪನವರ,
13, 14 ನೇ ವಾಡರ್ಿನ ಮುಖ್ಯ ರಸ್ತೆ ಮತ್ತು ಉಪ-ರಸ್ತೆಗಳನ್ನ ಸಿ.ಸಿ ರಸ್ತೆಗಳನ್ನಾಗಿ ನಿಮರ್ಿಸುವುದು,
ಚರಂಡಿ ವ್ಯವಸ್ಥೆ, ನೀರನ್ನು ಸರಿಯಾದ ರೀತಿಯಲ್ಲಿ ಸರಬರಾಜು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಸಿ.ಸಿ ರಸ್ತೆಯ ಬದಲಾಗಿ
ಡಾಂಬರಿಕರಣ ರಸ್ತೆಗಳನ್ನ ನಿಮರ್ಿಸುತ್ತಿದ್ದು ಡಾಂಬರಿಕರಣದ ರಸ್ತೆಗಳನ್ನು ನಿಮರ್ಿಸಿದರೆ ಅದಕ್ಕೆ ನಮ್ಮ ವಿರೋದವಿದ್ದು ಜೊತೆಗೆ
ಪುರಸಭೆಯಿಂದ ಬರಬೇಕಾದ ನಳದ ನೀರು ಸಮರ್ಪಕವಾಗಿ
ಬರುತ್ತಿಲ್ಲ, ಗಟಾರಗಳನ್ನು ಶುಚಿಗೊಳಿಸಿಲ್ಲ ನವನಗರಕ್ಕೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆಯಿದ್ದು ಘಟಕವನ್ನ ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಅವರು
ಬೀದಿ ದೀಪಗಳು ಹಾಳಾಗಿದ್ದು ಸರಿಪಡಿಸಲು ವಿನಂತಿಸಿದರು.
ಇನ್ನೊರ್ವ ವಾಡರ್ಿನ ನಿವಾಸಿ ರಾಜು ಕೆಂಭಾವಿ ಮಾತನಾಡಿ
ಕಳೆದ 15 ವರ್ಷಗಳಿಂದ ಈ ವಾರ್ಡಗಳು ಮೂಲಸೌಲಭ್ಯಗಳ
ಕೊರತೆಯನ್ನು ಅನುಭವಿಸುತ್ತಿದ್ದು ಹಲವಾರು ಬಾರಿ ಸೌಲಭ್ಯದ
ಕುರಿತು ಮೌಖಿಕವಾಗಿ ತಿಳಿಸಿದ್ದೇವೆ ಆದರೂ ಸಹಿತ ಕ್ರಮ
ತೆಗೆದುಕೊಂಡಿಲ್ಲ ನವನಗರದ ಮುಖ್ಯ ರಸ್ತೆ ಹಾಗೂ ಉಪರಸ್ತೆಗಳು ದುರಸ್ಥಿಯಾಗದೆ
8-10 ವರ್ಷಗಳೆ ಗತಿಸಿವೆ ರಸ್ತೆಗಳು ತಗ್ಗುಗಳಾಗಿ ಮಳೆ ನೀರು ಮುಂದು
ಹೋಗದೆ ಸಾರ್ವಜನಿಕರಿಗೆ ಮತ್ತು ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದ್ದು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಉಪಾದ್ಯಕ್ಷ ಪರಶುರಾಮ ಸೊನ್ನದ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ವಾಡರ್ಿನ ಸದಸ್ಯರಾದ ಬಸವರಾಜ ಮುಗಳಿ, ಉದಯಕುಮಾರ ಹೊಸಮನಿ, ಸುಭಾಷ ನೇಮಣ್ಣವರ, ಪಿ.ಎಸ್.ಗೌಡರ,
ಎಸ್.ಡಿ ಪಾಟೀಲ್, ಸುಧಾ
ಶಿರೂರ, ಶಿಲ್ಪಾ ಕುಸಗೂರ, ರೇಣುಕಾ ಹಾಲ್ವರ, ಲಿಂಗೇಶ ಕೆ.ಎಚ್, ಬಿ
ಎಚ್ ಬಣಕಾರ, ಸುವರ್ಣ ಪೋಪಳೆ, ಎಸ್.ಎಮ್.ಬಡಿಗೇರ,
ಬಸವರಾಜ ಪೂಜಾರ, ಈರಣ್ಣ ಹಸಬಿ, ಪಿ.ಎಸ್.ಯಲಿಗಾರ,
ಬಿ.ಟಿ ಗಿರೆಪ್ಪನವರ, ಶಾಂತವ್ವ
ಮಿಶ್ರೀಕೋಟಿ, ಪಾರ್ವತಿ ಈಟಗಿ, ಆರ್.ಎಮ್ ಹಿರೇಮಠ,
ಸೇರಿದಂತೆ ವಾಡರ್ಿನ ಸಾರ್ವಜನಿಕರು ಹಾಜರಿದ್ದರು.