ನವಲಗುಂದ: ಮಹಿಳಾ ಆರೋಪಿತಳ ಬಂಧನ
Navalgund: Female accused arrested
ಲೋಕದರ್ಶನ ವರದಿ
ಧಾರವಾಡ 15: ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆಯ ಗುನ್ನಾ ನಂ: 94/2026 ಕಲಂ: 305 ಬಿ.ಎನ್.ಎಸ್ ನೇದ್ದರಲ್ಲಿ ಪ್ರಕರಣದಲ್ಲಿ ದಿನಾಂಕ:12/06/2026 ರಂದು ಪಿರ್ಯಾದಿದಾರರಾದ ಶೈಲಾ ಕೋಂ ಸಿದ್ದಯ್ಯ ಹಿರೇಮಠ, ಸಾಽಽ ಬಳ್ಳೂರ ತಾ ನವಲಗುಂದ ನೇದ್ದವರು ಠಾಣೆಗೆ ಹಾಜರಾಗಿ ಮನೆ ಕಳತವಾದ ಬಗ್ಗೆ ನೀಡಿದ ಪಿರ್ಯಾದನ್ನು ಸ್ವೀಕರಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. ಸದರ ಪ್ರಕರಣ ದಾಖಲಾದ ತಕ್ಷಣ ನವಲಗುಂದ ವೃತ್ತ ಸಿಪಿಐ ರವಿಕುಮಾರ ಕಪ್ಪತನವರ ಅವರ ನೇತೃತ್ವದಲ್ಲಿ, ಸದರ ಪ್ರಕರಣದ ತನಿಖೆ ಕೈಕೊಂಡು ನವಲಗುಂದ ಪೊಲೀಸ್ ಠಾಣೆ ಪಿಎಸ್‌ಐ ಜನಾರ್ಧನ ಬಿ. ಹಾಗೂ ಸಿಬ್ಬಂದಿ ಜನರನ್ನು ಒಳಗೊಂಡ ತಂಡಗಳನ್ನು ರಚಿಸಿ ನವಲಗುಂದ ತಾಲೂಕಿನ ಬಳ್ಳೂರ ಗ್ರಾಮದ ಪಿರ್ಯಾದಿದಾರರ ಮನೆಯ ಅಕ್ಕಪಕ್ಕದ ಜನರಿಗೆ ವಿಚಾರಿಸಿದ್ದರಲ್ಲಿ ಸದರಿಯವರು ನೀಡಿದ ಸುಳಿವನ್ನು ಆಧರಿಸಿ ವಿವಿದ ಆಯಾಮಗಳಲ್ಲಿ, ತನಿಖೆ ಕೈಗೊಂಡು ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ ಮಹಿಳಾ ಆರೋಪಿತಳನ್ನು ವಿಚಾರಣೆಗೊಳಪಡಿಸಿದ್ದು, ವಿಚಾರಣೆ ಕಾಲಕ್ಕೆ ಕಳ್ಳತನ ಮಾಡಿರುವ ಬಗ್ಗೆ ಆರೋಪಿತಳು ಒಪ್ಪಿಕೊಂಡಿದ್ದು, ಸದ್ಯ ಆರೋಪಿತಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತಳಿಂದ 42.79 ಗ್ರಾಂ ಬಂಗಾರದ ಆಭರಣಗಳು ಅಂದಾಜು ಕಿಮ್ಮತ್ತು 4,70,690 ರೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 