ಪ್ರಕೃತಿ ಪ್ರತಿಯೊಂದು ಜೀವಿಗೂ ಅಪಾರವಾದ ಕೊಡುಗೆ ನೀಡಿದೆ: ಡಾ. ಜಿನದತ್ತ ಹಡಗಲಿ

ಪ್ರಕೃತಿ ಪ್ರತಿಯೊಂದು ಜೀವಿಗೂ ಅಪಾರವಾದ ಕೊಡುಗೆ ನೀಡಿದೆ:  ಡಾ. ಜಿನದತ್ತ ಹಡಗಲಿ Nature has made immense contributions to every living being: Dr. Jinadatta Hadagali

ಧಾರವಾಡ 30: ಪ್ರಕೃತಿ ಪ್ರತಿಯೊಂದು ಜೀವಿಗೂ ಅಪಾರವಾದ ಕೊಡುಗೆಯನ್ನು ನೀಡಿದೆ. ಅದರ ಸದುಪಯೋಗಪಡಿಸಿಕೊಳ್ಳದ ಮಾನವ ಇಂದು ತನ್ನನ್ನೇ ತಾನು ಅಧೋಗತಿಗೆ ತಳ್ಳಿಕೊಳ್ಳುತ್ತಿದ್ದಾನೆ. ಪ್ಲಾಸ್ಟಿಕ್ ಬಳಕೆ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಬರಬಾರದ ಖಾಯಿಲೆಗಳಿಗೆ  ತುತ್ತಾಗುತ್ತಿದ್ದಾನೆ. ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು.  

ಇಲ್ಲಿಯ ಪರಿಸರ ಭವನದಲ್ಲಿ ಜಿಲ್ಲಾ ಆಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಮಹಿಳಾ ಮಂಡಲದ ಸದಸ್ಯರಿಗಾಗಿ ‘ಪರಿಸರ ಗೀತೆ’ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ದಿನನಿತ್ಯದ ಜೀವನಕ್ಕಾಗಿ ಕಾಡುಗಳು ನಾಶವಾಗುತ್ತವೆ. ಮನುಷ್ಯನ ದುರಾಸೆಗೆ ಪ್ರಕೃತಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಇದನ್ನು ಕಾಪಾಡಿಕೊಳ್ಳುವುದಕ್ಕಾಗಿ ಆಗಾಗ ಸುನಾಮಿ ಭೂಕಂಪಗಳಂತ ಘಟನೆಯನ್ನು ನಡೆಸುತ್ತಿರುವುದನ್ನು ಕಾಣುತ್ತೇವೆ. ಹಾಗಾಗಿ ಪ್ರಕೃತಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಹೊಣೆಗಾರರಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.  

ಸಾಮೂಹಿಕ ಪರಿಸರ ಗೀತೆಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಶ್ರೀ ರಂಜನ್ ಮಹಿಳಾ ಮಂಡಳ ಧಾರವಾಡ. ದ್ವಿತೀಯ ಸ್ಥಾನ ಗಾನ ಸಿಂಚನ ಮಹಿಳಾ ಮಂಡಳ ಧಾರವಾಡ. ತೃತೀಯ ಸ್ಥಾನ, ಭೂಮಿಕಾ ಮಹಿಳಾ ತಂಡ ಧಾರವಾಡ ಪಡೆದುಕೊಂಡರು 

ಸಮಾರಂಭದಲ್ಲಿ ಉಪಸ್ಥಿತರಿದ್ದ ಪರಿಸರವಾದಿ ಕೆ. ಎಚ್‌.ನಾಯಕ ಅವರು ಸ್ಪರ್ಧೆಯ ನಿಯಮಗಳ ಕುರಿತು ವಿವರಿಸಿದರು. ನಿರ್ಣಾಯಕರಾಗಿ ಆಗಮಿಸಿದ್ದ ಡಾ. ಶ್ರೀಧರ್ ಕುಲಕರ್ಣಿ ಅವರು ಪರಿಸರ ಗೀತೆಯನ್ನು ಹಾಡಿದರು. ಅಧ್ಯಕ್ಷತೆಯನ್ನು ಶಂಕರ ಕುಂಬಿ ವಹಿಸಿದ್ದರು. ಪರಿಸರ ಅಧಿಕಾರಿ ಶ್ರೀಮತಿ ಲಲಿತಾ ದೊಡಮನಿ. ಬೀರ​‍್ಪ, ಶಶಿಧರ್ ಶಿಕ್ಷಣಾಧಿಕಾರಿ ರೇಣುಕಾ ಅಮಲ್ಜರಿ, ಗೀತಾ ಕುಂಬಿ ಶಶಿಧರ ಕೊಡಿಹಳ್ಳಿ, ಬೀರ​‍್ಪ ಕುದರಿಹಾಳ ಉಪಸ್ಥಿತರಿದ್ದರು. ಕೊನೆಯಲ್ಲಿ ವಿಲಾಸ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಾಲಾ ಮಕ್ಕಳಿಗೆ ಚಿತ್ರ ಕಲಾ ಮತ್ತು ನಿಭಂದ ಸ್ಪರ್ಧೆಗಳು ನಡೆದವು.