ರಾಷ್ಟ್ರೀಯ ಸೇವೆ ದೇವರ ಸೇವೆ : ಸಂಗಮೇಶ

ರಾಷ್ಟ್ರೀಯ ಸೇವೆ ದೇವರ ಸೇವೆ : ಸಂಗಮೇಶ National service is service to God: Sangamesha

ಲೋಕದರ್ಶನ ವರದಿ 

 ಗುರ್ಲಾಪೂರ (28) : ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮೂಡಲಗಿ ಇವರು ಗುರ್ಲಾಪೂರ ಪಿಎಂ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕ ಇವರು ಗುರ್ಲಾಪೂರ ದತ್ತು ಗ್ರಾಮವಾಗಿ ಪಡೆದು 7 ದಿನಗಳ ಕಾಲ ನಡೆಯುವ ಶಿಬಿರದ ಉದ್ಘಾಟನೆ ಸಮಾರಭದ ಅತಿಥಿಗಳಾದ ಸಂಗಮೇಶ ಗುಜಗೊಂಡ ಸಾಹಿತಿಗಳು ಅವರು ರಾಷ್ಟ್ರೀಯ ಸೇವೆದೇವರ ಸೇವೆ ಸಾರ್ವಜನಿಕ ಸೇವೆ ಸಮಾಜಕ್ಕೆ ದಾರಿ ದೀಪವಾಗಬೇಕು. ವಿದ್ಯಾರ್ಥಿಗಳು ಪ್ರತಿಪಲಾಕ್ಷ ಇಲ್ಲದೇ ಮಾಡುವ ಸೇವೆ ರಾಷ್ಟ್ರೀಯ ಸೇವೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ಸೋನವಾಲ್ಕರ. ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಎಲ್ಪಿನೇಮ ಗೌಡರ ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.  

ಕಾರ್ಯಕ್ರಮದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂಕೆ ಕಂಕಣವಾಡಿ ಎಸ್‌ಎಂ ಹಳ್ಳುರ ಎಸ್ಬಿಮಾಲೋಜಿ ಆಯಬಿ ಮಾಳಿ ಮುಖ್ಯೋಪಾದಾಯರಾದ ಬಸವರಾಜಸ ಸಾಲಟ್ಟಿ ಉಪಸ್ಥಿತರಿದ್ದರು. ಡಾಽಽ ಎಲ್ಬಿಮನ್ನಾಪೂರ ಕಾರ್ಯಕ್ರಮ ನಿರೂಪಿಸಿದರು.