ಇಂಡಿಯಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ: ನೀಲಕಂಠಗೌಡ

ಇಂಡಿಯಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ: ನೀಲಕಂಠಗೌಡ National level workshop in Indi: Neelkanthgowda

ಇಂಡಿ 21: ಶಾಂತೇಶ್ವರ ವಿದ್ಯಾ ವರ್ಧಕ ಸಂಘ ಇಂಡಿ ಜಿ ಆರ್ ಜಿ ಕಲಾ  ವಾಯ್ ಎ ಪಿ ವಾಣಿಜ್ಯ ಹಾಗೂ ಎಂ ಪಿ ದೋಶಿ ವಿಜ್ಞಾನ ಪದವಿ ಮಾಹಾವಿದ್ಯಾಲಯ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಇದೆ ದಿನಾಂಕ 24-09-2025 ರಂದು ಬೆಳಿಗ್ಗೆ 10:30 ಗೆ ಡಿಗ್ರಿ ಕಾಲೇಜು ಆವರಣದಲ್ಲಿ ನ್ಯಾಕ್ ನ ನೂತನ ಬೈನರಿ ಮಾನ್ಯತೆಯ ಮಾರ್ಗಸೂಚಿಗಳ ಕುರುತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು  ಎಂದು ಶಾಂತೇಶ್ವರ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ ನೀಲಕಂಠಗೌಡ ಪಾಟೀಲ ಅವರು ತಿಳಿಸಿದ್ದಾರೆ.

ಶಾಂತೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯಾಲಯದ ಆವರಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಇಂಡಿ ನಗರ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಉದ್ಘಾಟಿಸಲಿದ್ದಾರೆ ಹಾಗೂ ಮುಖ್ಯ ಅತಿಥಿಗಳಾಗಿ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಒಂದಾದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಸಿ ಎಂ ತ್ಯಾಗರಾಜ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಯು ಜಿ ಸಿ ವ್ಯಾಪ್ತಿಯ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾನ ಕೇಂದ್ರವಾದ ಬೆಂಗಳೂರಿನ ರಾಜ್ಯ ಮಟ್ಟದ ನೋಡಲ್ ಅಧಿಕಾರಿ ಡಾ.ವಿಕ್ರಮ ಅವರು ಆಗಮಿಸಲಿದ್ದಾರೆ.ಹಾಗೂ ವಿಜಯಪೂರ ಜಿಲ್ಲೆಯ ರಾಜ್ಯಮಟ್ಟದ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಐಕ್ಯೂ ಎಸಿ ಸಂಯೋಜನಾಧಿಕಾರಿಗಳು ಮತ್ತು ಉಪನ್ಯಾಸಕರು ಆಗಮನಿಸಲ್ಲಿದ್ದಾರೆ ಎಂದು ಹೇಳಿದರು.

ಈ ಸುದ್ದಿ ಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಶ್ರೀಶೈಲ ಸಣ್ಣಕ್ಕಿ ಹಾಗೂ ಐಕ್ಯೂಎಸಿ ಸಂಯೋಜನಾಧಿಕಾರಿ ಡಾ.ಜಯಪ್ರಸಾದ ಡಿ ಮತ್ತು ಮಾಹಾವಿದ್ಯಾಲಯ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.